Breaking News
Home / ಬೆಳಗಾವಿ / ಕನ್ನಡ ನಾಡು ಎಲ್ಲ ಕ್ಷೇತ್ರದಲ್ಲಿ ಬಹಳಷ್ಟು ಶ್ರೀಮಂತವಾಗಿದೆ : ಈರಣ್ಣ ಬಳಿಗಾರ

ಕನ್ನಡ ನಾಡು ಎಲ್ಲ ಕ್ಷೇತ್ರದಲ್ಲಿ ಬಹಳಷ್ಟು ಶ್ರೀಮಂತವಾಗಿದೆ : ಈರಣ್ಣ ಬಳಿಗಾರ

Spread the love

ಬೆಟಗೇರಿ:ಕನ್ನಡ ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕು. ಕನ್ನಡ ನಾಡು ಎಲ್ಲ ಕ್ಷೇತ್ರದಲ್ಲಿ ಬಹಳಷ್ಟು ಶ್ರೀಮಂತವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಘಟಕದ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಸಹಯೋಗದಲ್ಲಿ ನ.1ರಂದು ನಡೆದ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡಿನ ಸಾಹಿತ್ಯ, ಕಲೆ, ಭಾಷೆ, ಸಂಸ್ಕøತಿ, ಸಂಪ್ರದಾಯ, ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ ಎಂದರು.


ಶಂಭು ಹಿರೇಮಠ, ವಿಜಯ ಹಿರೇಮಠ ಸಾನಿಧ್ಯ ವಹಿಸಿ ಭುವನೇಶ್ವರಿ ದೇವಿ ಮತ್ತು ಡಾ.ಬೆಟಗೇರಿ ಕೃಷ್ಣಶರ್ಮ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸ್ಥಳೀಯ ಶಾಲಾ ಮಕ್ಕಳು ವಿವಿಧ ರೂಪಕಗಳ ವೇಷಭೂಷಣ ತೋಟ್ಟು ಎಲ್ಲರ ಗಮನ ಸೆಳೆದರು. ಸ್ಥಳೀಯ ಅಶ್ವಾರೂಢ ಬಸವೇಶ್ವರ ವೃತ್ತದಲ್ಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಗ್ರಾಮದ ಪ್ರಮುಖ ಬೀದಿ ಮೂಲಕ ಸ್ಥಳೀಯ ಸಂಗೋಳ್ಳಿ ರಾಯಣ್ಣ ವೃತ್ತದ ತನಕ ಸಕಲ ವಾಧ್ಯಮೇಳಗಳೊಂದಿಗೆ ಭುವನೇಶ್ವರಿದೇವಿ ಮತ್ತು ಆನಂದಕಂದ ಭಾವಚಿತ್ರಗಳ ಭವ್ಯ ಮೆರವಣೆಗೆ ನಡೆಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಪಿಡಿಒ ಎಮ್.ಎಲ್.ಯಡ್ರಾಂವಿ, ಲಕ್ಷ್ಮಣ ನೀಲಣ್ಣವರ, ಮಹಾದೇವ ಕಂಬಿ, ರಾಮಪ್ಪ ಮುಧೋಳ, ರೇವಣಸಿದ್ಧ ಸವತಿಕಾಯಿ, ರಾಮಣ್ನ ನೀಲಣ್ಣವರ, ರಮೇಶ ಅಳಗುಂಡಿ, ಬಸವರಾಜ ಪಣದಿ, ಮಂಜು ಪತ್ತಾರ, ಮಹಾದೇವ ತಪಸಿ, ವೀರಭದ್ರ ದೇಯಣ್ಣವರ, ಫೀರೋಜ್ ಮಿರ್ಜಾನಾಯ್ಕ, ಶಿವು ನಾಯ್ಕರ, ಮಾಯಪ್ಪ ಕೋಣಿ, ಕಾರ್ತಿಕ ತೆರದಾಳ, ರಾಘು ಬೆಟಗೇರಿ, ಮಾರುತಿ ಬಡಿಗೇರ, ಬಸು ದೇಯಣ್ಣವರ ಸ್ಥಳೀಯ ಕರವೇ ಕಾರ್ಯಕರ್ತರು, ಕನ್ನಡಾಭಿಮಾನಿಗಳು, ಯುವಕರು, ಶಾಲಾ-ಕಾಲೇಜು ಪ್ರಾಚಾರ್ಯರು, ಮುಖ್ಯೋಪಾಧ್ಯಯರು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ಸ್ಥಳೀಯರು, ಮತ್ತೀತರರು ಇದ್ದರು.


Spread the love

About inmudalgi

Check Also

ರಂಗಭೂಮಿ ಮತ್ತು ಜಾನಪದ ಕಲೆ ನಿತ್ಯ ನೂತನವಾಗಿದೆ : ಶಿವಪುತ್ರ ಪರಮಾನಟ್ಟಿ

Spread the love ಬೆಟಗೇರಿ:ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮಾತ್ರ ರಂಗಭೂಮಿ ಮತ್ತು ಬೈಲಾಟದ ಕಲೆಗಳನ್ನು ಕಾಣಬಹುದಾಗಿದೆ. ಜಾನಪದ ನಮ್ಮ ಸಂಸ್ಕøತಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ