Breaking News
Home / ಬೆಳಗಾವಿ / ಸಾಮಾಜಿಕ ಜೀವನದಲ್ಲಿ ಸಹಕಾರ ಪ್ರಮುಖವಾಗಿದೆ: ಬಸವರಾಜ ಮಾಳೇದ

ಸಾಮಾಜಿಕ ಜೀವನದಲ್ಲಿ ಸಹಕಾರ ಪ್ರಮುಖವಾಗಿದೆ: ಬಸವರಾಜ ಮಾಳೇದ

Spread the love

ಬೆಟಗೇರಿ: ಸಹಕಾರ ತತ್ವದಡಿ ಗ್ರಾಮೀಣ ವಲಯದಲ್ಲಿ ಸಹಕಾರಿ ಸಂಘ, ಸಂಸ್ಥೆಗಳ ನೀಡುತ್ತಿರುವ ಸಹಕಾರದ ಸೇವೆ ಅತ್ಯಂತ ಮಹತ್ವದಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಅಧ್ಯಕ್ಷ ಬಸವರಾಜ ಮಾಳೇದ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿಯಲ್ಲಿ ಶುಕ್ರವಾರ ನ.14 ರಂದು ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆ ಪ್ರಯುಕ್ತ ಸಹಕಾರಿ ಧ್ವಜಾರೋಹಣ ನೆರವೇರಿಸಿ ಸಹಕಾರಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಒಬ್ಬ ವ್ಯಕ್ತಿಯು ನಿರ್ವಹಿಸಲಾಗದ ವಿಷಯಗಳನ್ನು ಸಹಕಾರವು ಸಾಧಿಸುತ್ತದೆ. ಸಾಮಾಜಿಕ ಜೀವನದಲ್ಲಿ ಸಹಕಾರ ಪ್ರಮುಖವಾಗಿದೆ. ಸಹಕಾರಿ ಸಂಘ, ಸಂಸ್ಥೆಗಳು ಗ್ರಾಮೀಣ ಜನರ ಜೀವಾಳವಾಗಿವೆ ಎಂದರು.
ಸ್ಥಳೀಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಮಾಳೇದ ಅವರು, ಸಹಕಾರಿ ಪಿತಾಮಹ ಶಿದ್ದನಗೌಡ ಪಾಟೀಲ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ, ಸಹಕಾರಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಿಹಿ ವಿತರಿಸಲಾಯಿತು.
ಸಹಕಾರಿ ಮುಖಂಡರಾದ ಶಿವನಪ್ಪ ಕಂಬಿ, ಕಲ್ಲಪ್ಪ ಹುಬ್ಬಳ್ಳಿ, ಮಲ್ಲಿಕಾರ್ಜುನ ನೀಲಣ್ಣವರ, ಈಶ್ವರ ಬಡಿಗೇರ, ಅಶೋಕ ದೇಯನ್ನವರ, ಅಪ್ಪಯ್ಯಪ್ಪ ಸಿದ್ನಾಳ, ಶಿವು ಮೇಳೆನ್ನವರ, ವೀರಭದ್ರ ದಂಡಿನ, ಫಕೀರಪ್ಪ ಪೇದನ್ನವರ, ಮುಖ್ಯ ಕಾರ್ಯನಿರ್ವಾಹಕ ಗುಳಪ್ಪ ಪಣದಿ, ಸ್ಥಳೀಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಗ್ರಾಹಕರು, ಸಹಕಾರಿ ಧುರೀಣರು, ಗ್ರಾಮಸ್ಥರು ಇದ್ದರು.


Spread the love

About inmudalgi

Check Also

ಎಂಪಿಎಲ್-2025 ಕ್ರಿಕೆಟ್ ಟೂರ್ನಿ ಉದ್ಘಾಟನೆ ‘ಕ್ರೀಡಾಕೂಟಗಳಿಂದ ಸೌಹಾರ್ದತೆ ಬೆಳೆಯುತ್ತದೆ’

Spread the love ಎಂಪಿಎಲ್-2025 ಕ್ರಿಕೆಟ್ ಟೂರ್ನಿ ಉದ್ಘಾಟನೆ ‘ಕ್ರೀಡಾಕೂಟಗಳಿಂದ ಸೌಹಾರ್ದತೆ ಬೆಳೆಯುತ್ತದೆ’  -ಚನ್ನಬಸು ಬಡ್ಡಿ ಮೂಡಲಗಿ: ‘ಕ್ರೀಡಾಕೂಟಗಳಿಂದ ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ