
ಬೆಟಗೇರಿ: ಸಾಲು ಮರದ ತಿಮ್ಮಕ್ಕ ತಮಗೆ ಮಕ್ಕಳಿಲ್ಲದ ಕರಣಕ್ಕೆ ರಸ್ತೆಯ ಬದಿಯಲ್ಲಿ ಸಸಿಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಭಾವಿಸಿ ಪೋಷಿಸಿ ಬೆಳಸಿದಾಕೆ. ಸಾಲು ಮರದ ತಿಮ್ಮಕ್ಕ ಅನಕ್ಷರಸ್ಥೆಯಾಗಿದ್ದರೂ ಸಹ ಪರಿಸರ ಬಗ್ಗೆ ಅಪಾರ ಕಾಳಜಿಯುಳ್ಳ ವೃಕ್ಷ ಮಾತೆಯಾಗಿದ್ದರು ಎಂದು ಗೋಕಾಕ ತಾಲೂಕಿನ ಬೆಟಗೇರಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಈರಣ್ಣ ಬಳಿಗಾರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಘಟಕದ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಅವರು ನ.14ರಂದು ಸಾಲು ಮರದ ತಿಮ್ಮಕ್ಕ ನಿಧನಕ್ಕೆ ತೀವ್ರ ಸಂತಾಪ ಶೋಕ ಸೂಚಿಸಿ ಮಾತನಾಡಿ, ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದ್ದನ್ನು ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಸಾಲು ಮರದ ತಿಮ್ಮಕ್ಕ ಅವರ ಅವಿಸ್ಮರಣೀಯ ಸೇವಾ ಕಾರ್ಯ ಗಮನಿಸಿ ಪುಸ್ಕರಿಸಿವೆ ತಿಮ್ಮಕ್ಕ ಅವರು ಮುಂದಿನ ಪೀಳಿಗೆಯ ಒಳಿತಿಗಾಗಿ ಸಾಲು ಸಸಿಗಳನ್ನು ನೆಟ್ಟು, ಮರಗಳನ್ನಾಗಿ ಪೋಷಿಸಿ ನೀರುಣಿಸಿ ಬೆಳಸಿದ್ದಾರೆ ಎಂದರು.
ಈ ವೇಳೆ ಶಂಭು ಹಿರೇಮಠ, ಬಸವರಾಜ ದೇಯಣ್ಣವರ, ಮಂಜುನಾಥ ಪತ್ತಾರ, ಶೀವು ನಾಯ್ಕರ, ಮಾಯಪ್ಪ ಕೋಣಿ, ಸೇರಿದಂತೆ ಸ್ಥಳೀಯ ಕÀರವೇ ಬೆಟಗೇರಿ ಗ್ರಾಮ ಘಟಕದ ಸದಸ್ಯರು, ಸ್ಥಳೀಯ ಪರಿಸರ ಪ್ರೇಮಿಗಳು, ಸ್ಥಳೀಯರು ಸಾಲು ಮರದ ತಿಮ್ಮಕ್ಕ ನಿಧನಕ್ಕೆ ತೀವ್ರ ಸಂತಾಪ ಶೋಕ ವ್ಯಕ್ತಪಡಿಸಿ, ಕಂಬನಿ ಮಿಡಿದಿದ್ದಾರೆ.
IN MUDALGI Latest Kannada News