
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಸಹಯೋಗದಲ್ಲಿ ನ.14ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ಮಕ್ಕಳ ಪೋಷಕರ ಹಾಗೂ ಶಿಕ್ಷಕರ ಮಹಾಸಭೆ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ವೈ.ಸಿ. ಶೀಗಿಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಮಕ್ಕಳ ಪೋಷಕರು ಶಾಲೆಯ ಎಲ್ಲಾ ಶಿಕ್ಷಕರ ಜೊತೆ ಶಾಲೆಯ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕು. ಈಗಾಗಲೇ ಶಾಲೆಯ ಪ್ರಗತಿಗೆ ಸ್ಥಳೀಯರು, ಶಿಕ್ಷಣಪ್ರೇಮಿಗಳು ನೀಡಿದ ಸಹಾಯ, ಸಹಕಾರ ಶ್ಲಾಘನೀಯವಾಗಿದೆ ಎಂದರು.
ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಶಾಲೆಯ ಮುಖ್ಯ ಶಿಕ್ಷಕ ಸಿದ್ದಪ್ಪ ಸನದಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಮಕ್ಕಳ ಶೈಕ್ಷಣಿಕ ಸಮಗ್ರ ಬೆಳವಣಿಗೆ, ಖಾಸಗಿ ಮತ್ತು ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಶೈಕ್ಷಣಿಕವಾಗಿ ದೊರಕುವ ವಿವಿಧ ಸಹಾಯ, ಸೌಲಭ್ಯಗಳ ಕುರಿತು ತಿಳಿಸಿದರು.
ಸ್ಥಳೀಯ ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ದುಂಡಪ್ಪ ಕಂಬಿ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಎಸ್‍ಡಿಎಮ್‍ಸಿ ಉಪಾಧ್ಯಕ್ಷ ಗುಳಪ್ಪ ಪಣದಿ, ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ನಗದು ಬಹುಮಾನ ಘೋಷಣೆ: ಬೆಟಗೇರಿ ತಾಲೂಕಾ ಪಂಚಾಯತ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ ಅವರು, ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಪ್ರಸಕ್ತ 2025-26ನೇ ಸಾಲಿನ 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದ ಉಭಯ ಶಾಲೆಯ ಇಬ್ಬರೂ ಮಕ್ಕಳಿಗೆ, ಒಬ್ಬರಿಗೆ 2500/-ರೂ.ಗಳಂತೆ ನಗದು ಬಹುಮಾನ ನೀಡುವುದಾಗಿ ಈ ವೇಳೆ ಘೋಷಣೆ ಮಾಡಿದರು.
ಈ ವೇಳೆ ಗ್ರಾಪಂ ಕಾರ್ಯದರ್ಶಿ ಮಾರುತಿ ತಳವಾರ, ಬಸವರಾಜ ಪಣದಿ, ಸುರೇಶ ಬಾಣಸಿ, ಯಲ್ಲಪ್ಪ ಚಂದರಗಿ, ಮಲ್ಲಿಕಾರ್ಜುನ ನೀಲಣ್ಣವರ, ಬೀರಪ್ಪ ಬಾಣಸಿ, ಡಾ.ರವಿ ಪೂಜೇರಿ, ವಿಶ್ವನಾಥ ಶೀಗಿಹಳ್ಳಿ, ದಸ್ತಗೀರಸಾಬ ಯಲಿಗಾರ, ಉಭಯ ಶಾಲೆಯ ವಿದ್ಯಾರ್ಥಿ ತಾಯಂದಿರು, ಪಾಲಕರು, ಪೋಷಕರು, ಎಸ್‍ಡಿಎಮ್‍ಸಿ ಸದಸ್ಯರು, ಸಹಶಿಕ್ಷಕರು, ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ಮತ್ತೀತರರು ಇದ್ದರು.
IN MUDALGI Latest Kannada News