Breaking News
Home / ಬೆಳಗಾವಿ / ಶಾಲಾ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಮಹತ್ವದ ಘಟ್ಟವಾಗಿದೆ: ಪರಶುರಾಮ ಗಸ್ತಿ

ಶಾಲಾ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಮಹತ್ವದ ಘಟ್ಟವಾಗಿದೆ: ಪರಶುರಾಮ ಗಸ್ತಿ

Spread the love

ಶಾಲಾ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಮಹತ್ವದ ಘಟ್ಟವಾಗಿದೆ: ಪರಶುರಾಮ ಗಸ್ತಿ

ಬೆಟಗೇರಿ: ಪ್ರತಿ ಮಗುವಿಗೆ ವಿದ್ಯಾರ್ಥಿ ಜೀವನ ಬಂಗಾರದ ಬದುಕಾಗಿದೆ. ಶಾಲಾ ಮಕ್ಕಳು ಅಮೂಲ್ಯವಾದ ವಿದ್ಯಾರ್ಥಿ ಜೀವನದ ಸದುಪಯೋಗಮಾಡಿಕೊಳ್ಳಬೇಕು ಎಂದು ಗೋಕಾಕ ತಾಲೂಕಾ ಪಂಚಾಯತ್ ಇಒ ಪರಶುರಾಮ ಗಸ್ತಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಗೆ ಡಿ.2ರಂದು ಆಕಸ್ಮಿಕ ಭೇಟಿ ನೀಡಿ, ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಓದುವ ಗೀಳು ಬೆಳಸಿಕೊಳ್ಳಬೇಕು. ಶಾಲಾ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಮಹತ್ವದ ಘಟ್ಟವಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆದು ತಮ್ಮ ತಂದೆ-ತಾಯಿ, ಊರು ಮತ್ತು ಶಾಲೆಯ ಕೀರ್ತಿ ತರಬೇಕು ಎಂದರು.
ಬಾಕ್ಸ್ ಐಟಮ್:ಮರಳಿ ಶಾಲೆಗೆ ಮಕ್ಕಳು: ಶಾಲೆ ಬಿಟ್ಟು ಪಕ್ಕದ ಮಹಾರಾಜ್ಯದ ಕೊಲ್ಹಾಪೂರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವಿಷಯ ತಿಳಿದು, ಸ್ಥಳೀಯ ಪ್ರೌಢ ಶಾಲೆಯ ಎರಡು ಜನ ವಿದ್ಯಾರ್ಥಿಗಳ ಮನೆಗೆ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಭೇಟಿ ನೀಡಿ, ವಿದ್ಯಾರ್ಥಿ ಪಾಲಕರ ಮನವೋಲಿಸಿ ಮರಳಿ ಸ್ವಗ್ರಾಮಕ್ಕೆ ಕರೆಸಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಾರ್ಮ ತುಂಬಿಸಿ ಪ್ರತಿ ದಿನ ಶಾಲೆಗೆ ಬರುವಂತೆ ಮಾಡಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದರು. ಗೋಕಾಕ ತಾಲೂಕಾ ಪಂಚಾಯತ್ ಇಒ ಪರಶುರಾಮ ಗಸ್ತಿ ಅವರು ಶಾಲೆಯ ಈ ವಿದ್ಯಾರ್ಥಿಗಳಿಗೆ ಹೊಗುಚ್ಚ ನೀಡಿ ಶಿಕ್ಷಣ ಪಡೆಯುವಂತೆ ಈ ವೇಳೆ ಪ್ರೋತ್ಸಾಹಿಸಿದರು.
ಗೋಕಾಕ ತಾಲೂಕಾ ಪಂಚಾಯತ ವ್ಯವಸ್ಥಾಪಕ ಈರಪ್ಪ ಹೊಸಮನಿ, ಶಾಲೆಯ ಸಹ ಶಿಕ್ಷಕರಾದ ಈರಣ್ಣ ಪಟಗುಂದಿ, ರಾಕೇಶ ನಡೋಣಿ, ಈಶ್ವರ ಮುನವಳ್ಳಿ, ಮಲ್ಹಾರಿ ಪೋಳ, ಸುರೇಶ ಬಾಣಸಿ, ವಿಠ್ಠಲ ಚಂದರಗಿ, ಸಹ ಶಿಕ್ಷಕರು, ಅತಿಥಿಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.


Spread the love

About inmudalgi

Check Also

*ಅರಭಾವಿ ಆಂಜನೇಯ ದೇವರ ಕಾರ್ತೀಕೋತ್ಸವದಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love *ಮೂಡಲಗಿ-* ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅರಭಾವಿ ಆಂಜನೇಯ ದೇವಸ್ಥಾನಕ್ಕೆ ತೆರಳಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ