
ಹತ್ತರ ಸಾಧಕರ ಹತ್ರ ಶಾಲೆಯ ಮುಖ್ಯೋಪಾಧ್ಯಯ.!
*ಅಡಿವೇಶ ಮುಧೋಳ.ಬೆಟಗೇರಿ
ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ಘೊಷಣೆಯಾಗುತ್ತಿದ್ದಂತೆ ಈ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ಸುಮಾರು ಇಪ್ಪತ್ತೈದು ದಿನಗಳಿಂದ ಹತ್ತರ ಸಾಧಕರ ಹತ್ರ ಶಾಲೆಯ ಮುಖ್ಯೋಪಾಧ್ಯಯ ಎಂಬ ವಿನೂತನ ವಿಶೇಷ ಕಾರ್ಯಕ್ರಮದ ಮೂಲಕ ಮೂಡಲಗಿ ಶೈಕ್ಷಣಿಕ ವಲಂiÀi ವ್ಯಾಪ್ತಿಯ ಬೆಟಗೇರಿ ಸರಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕÀ ರಮೇಶ ಅಳಗುಂಡಿ ಶಾಲೆಯ 10ನೇ ವರ್ಗದ ವಿದ್ಯಾರ್ಥಿಗಳ ಮೇಲೆ ವಿಶೇಷ ಗಮನ ಹರಿಸುತ್ತಿರುವ ಕಾರ್ಯ ನಡೆದಿದೆ.
ಪ್ರತಿ ದಿನ ಶಾಲಾವಧಿ ಮುಗಿದ ಬಳಿಕ ಹಲವು ದಿನಗಳಿಂದ ಶಾಲೆಯ 280 ಜನ 10ನೇ ತರಗತಿ ಪ್ರತಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಠ್ಯ ವಿಷಯದಲ್ಲಿರುವ ಕಠಿಣ ಪಾಠ, ಮಕ್ಕಳ ಮುಂದಿನ ಕನಸು, ಕಲಿಕಾ ಸಮಸ್ಯೆಗೆ ಪರಿಹಾರ, ಪರೀಕ್ಷೆ ಬರೆಯುವ ವಿಧಾನ, ಪರೀಕ್ಷೆ ಪ್ರಯುಕ್ತ ತಮ್ಮ ಮಕ್ಕಳ ಮೇಲೆ ಪಾಲಕರು ವಿಶೇಷ ಗಮನ ಹರಿಸುವಂತೆ ಸಲಹೆ ಸೂಚನೆ ನೀಡಿ, ವಿದ್ಯಾರ್ಥಿಗಳು ಓದುವಂತೆ ಶಾಲೆಯ ಮುಖ್ಯಾಧ್ಯಾಪಕÀ ರಮೇಶ ಅಳಗುಂಡಿ ಪ್ರೇರಪಿಸುತ್ತಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಲಿಕೆಯಲ್ಲಿ ಹಿಂದುಳಿದ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಾಲೆಯ ಸಹಶಿಕ್ಷಕರು, ಅತಿಥಿಶಿಕ್ಷಕರು ಹಲವಾರು ವಿನೂತನ ಕಾರ್ಯಕ್ರಮಗಳ ಮೂಲಕ ವಿಶೇಷ ಪಾಠ-ಪ್ರವಚನ ಸೇರಿದಂತೆ ಹಲವು ವಿಷಯಗಳ ಕುರಿತು ಹೆಚ್ಚಿನ ಗಮನ ಕೊಡುವುದಲ್ಲದೇ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬಗ್ಗೆ ಮಕ್ಕಳಲ್ಲಿ ಅರಿವು, ಭಯ ಮುಕ್ತ ವಾತಾವರಣ ನಿರ್ಮಾಣ, ಮಕ್ಕಳ ಕಲಿಕೆಗೆ ಬೇಕಾದ ಪಾಠೋಪಕರಣಗಳ ನಿಜ ಸಮಸ್ಯೆ ಅರಿತು ಸ್ಥಳೀಯ ಶಿಕ್ಷಣ ಪ್ರೇಮಿಗಳ ಮೂಲಕ ಸಹಾಯ, ಸಹಕಾರ ಪೂರೈಸಲಾಗುತ್ತಿದೆ ಎಂದು ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದ್ದಾರೆ.

ಹತ್ತರ ಸಾಧಕರ ಹತ್ರ ಶಾಲೆಯ ಮುಖ್ಯೋಪಾಧ್ಯಯ ಎಂಬ ವಿನೂತನ ಕಾರ್ಯಕ್ರಮ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪ್ರೇರಣಾ ಪೂರಕವಾಗಿದೆ. 10ನೇ ವರ್ಗದ ವಿದ್ಯಾರ್ಥಿಗಳ ಮನೆಗೆ ಮುಖ್ಯೋಪಾಧ್ಯಯರು, ಶಾಲಾ ಶಿಕ್ಷಕರು ಹೊಗುವುದರಿಂದ ಮಕ್ಕಳ ಕಲಿಕೆಗೆ ಮತ್ತಷ್ಟು ಪ್ರೇರಣೆ ಜೊತೆಗೆ ಕುಟುಂಬದ ನಿಜ ಸ್ಥಿತಿ-ಗತಿ, ಸಮಸ್ಯೆಗಳು ಮನವರಿಕೆಯಾಗುತ್ತವೆ. ವಿದ್ಯಾರ್ಥಿ, ಪಾಲಕರು ಹಾಗೂ ಶಾಲಾ ಶಿಕ್ಷಕರ ನಡುವಿನ ಅವಿನಾಭಾವ ಸಂಬಂಧವೂ ಸಹ ಮತ್ತಷ್ಟು ಬೆಸೆಯುತ್ತದೆ ಎಂದು ಮೂಡಲಗಿ

ಕ್ಷೇತ್ರಶಿಕ್ಷಾಧಿಕಾರಿಪಿ.ಬಿ. ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ವಿನೂತನ ವಿಶೇಷ ಕಾರ್ಯಕ್ರಮದ ಮೂಲಕ ಕಲಿಕೆಗೆ ಪ್ರೇರಣೆ ನೀಡುತ್ತಿರುವ ಸ್ಥಳೀಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಮತ್ತು ಶಿಕ್ಷಕರು, ಅತಿಥಿ ಶಿಕ್ಷಕರ ಕಾರ್ಯ ಶ್ಲಾಘನೀಯವಾಗಿದೆ. * ರಾಮಣ್ಣ ನೀಲಣ್ಣವರ.
ಅಧ್ಯಕ್ಷರು ಎಸ್‍ಡಿಎಮ್‍ಸಿ ವಿವಿಡಿ ಸ.ಪ್ರೌ.ಶಾಲೆ ಬೆಟಗೇರಿ, ತಾ.ಗೋಕಾಕ.
IN MUDALGI Latest Kannada News