Breaking News
Home / ಬೆಳಗಾವಿ / ಹನುಮಂತ ದೇವರಿಗೆ ಹಲವಾರು ಶತಮಾನಗಳ ಇತಿಹಾಸವಿದೆ: ಅಭಿನವ ಶಿವಾನಂದ ಶ್ರೀಗಳು

ಹನುಮಂತ ದೇವರಿಗೆ ಹಲವಾರು ಶತಮಾನಗಳ ಇತಿಹಾಸವಿದೆ: ಅಭಿನವ ಶಿವಾನಂದ ಶ್ರೀಗಳು

Spread the love

ಹನುಮಂತ ದೇವರಿಗೆ ಹಲವಾರು ಶತಮಾನಗಳ ಇತಿಹಾಸವಿದೆ: ಅಭಿನವ ಶಿವಾನಂದ ಶ್ರೀಗಳು

ಬೆಟಗೇರಿ:ಮನುಷ್ಯನ ಮನಸ್ಸು ಸದಾ ಪರಿಶುದ್ದವಾಗಿದ್ದರೆ ಆತನ ಮನೆ-ಮನ ನಿತ್ಯ ನಂದಾದೀಪದಂತೆ ಬೆಳಗುತ್ತಿರುತ್ತದೆ. ಹನುಮಂತ ದೇವರು ಭಕ್ತರಿಗೆ ಇಷ್ಟಾರ್ಥಗಳನ್ನು ಪೂರೈಸುವ ಆರಾಧ್ಯ ದೇವನಾಗಿದ್ದಾನೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಜಾಗೃತ ಹನುಮಂತ ದೇವರ ದೇವಾಲಯದಲ್ಲಿ ಶನಿವಾರ ಡಿ.13ರಂದು ನಡೆದ ಕಾರ್ತಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಅವರು ದೀಪ ಹಚ್ಚಿ ಮಾತನಾಡಿ, ಹನುಮಂತ ದೇವರಿಗೆ ಹಲವಾರು ಶತಮಾನಗಳ ಇತಿಹಾಸವಿದೆ ಎಂದರು.
ಸ್ಥಳೀಯ ಹನುಮಂತ ದೇವರ ಕಾರ್ತಿಕೋತ್ಸವ ಪ್ರಯುಕ್ತ ಶನಿವಾರದಂದು ಬೆಳೆಗ್ಗೆ 6 ಗಂಟೆಗೆ ಹನುಮಂತ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಕುಂಕುಮ, ಎಲೆ ಪೂಜೆ, ಪುರ ಜನರಿಂದ ಪೂಜೆ, ನೈವೈದ್ಯ ಸಮರ್ಪನೆ ಜರುಗಿ, ರಾತ್ರಿ 7 ಗಂಟೆಗೆ ದೀಪೋತ್ಸವ, ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಕಾಯಿ, ಕಾರಿಕ ಹಾರಿಸುವ, ಸಿಹಿ ಹಂಚುವದು ವೈಭವದಿಂದ ನಡೆಯಿತು.

ವೇದಮೂರ್ತಿ ಈರಯ್ಯ ಹಿರೇಮಠ, ವಿಜಯ ಹಿರೇಮಠ ಸಾನಿಧ್ಯ, ಸುರೇಶ ವಡೇರ, ಮುತ್ತೆಪ್ಪ ವಡೇರ ಸಮ್ಮುಖ ವಹಿಸಿದ್ದರು. ಇಲ್ಲಿಯ ಹನುಮಂತ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ವತಿಯಿಂದ ಶ್ರೀಗಳು, ಗಣ್ಯರು, ದಾನಿಗಳನ್ನು ಸತ್ಕರಿಸಲಾಯಿತು. ಕರಡಿ ಮಜಲು ತಂಡದವರಿಂದ ಕರಡಿ ಮತ್ತು ಕಣಿ ವಾದನ ಎಲ್ಲರ ಗಮನ ಸೆಳೆದವು, ಮಹಾಪ್ರಸಾದ ಜರುಗಿ ಪ್ರಸಕ್ತ ಕಾರ್ತಿಕೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿ, ಭಾವದ ಪರಾಕಷ್ಠೆ ಮರೆದರು.
ತಾಪಂ ಮಾಜಿ ಸದಸ್ಯರಾದ ಬಸವಂತ ಕೋಣಿ, ಲಕ್ಷ್ಮಣ ನೀಲನ್ನವರ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ದುಂಡಪ್ಪ ಹಾಲಣ್ಣವರ, ಕೆಂಪಣ್ಣ ಪೇದನ್ನವರ, ಪತ್ರೇಪ್ಪ ನೀಲಣ್ಣವರ, ವಿಠ್ಠಲ ಚಂದರಗಿ, ಹನುಮಂತ ಸವತಿಕಾಯಿ, ಲಕ್ಷ್ಮಣ ಚಂದರಗಿ, ಲಕ್ಷ್ಮಣ ಸೋಮಗೌಡ್ರ, ರಾಮಣ್ಣ ನೀಲಣ್ಣವರ, ಬಸವರಾಜ ಪಣದಿ, ಸ್ಥಳೀಯ ಹನುಮಂತ ದೇವರ ದೇವಾಲಯ ಅರ್ಚಕರು, ರಾಜಕೀಯ ಮುಖಂಡರು, ಗಣ್ಯರು, ಗ್ರಾಮಸ್ಥರು, ಭಕ್ತರು, ಸ್ಥಳೀಯ ಹನುಮಂತ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮತ್ತೀತರರು ಇದ್ದರು.


Spread the love

About inmudalgi

Check Also

ಶ್ರೀದೇವಿಯು ಮಹಾನ್ ಶಕ್ತಿ ದೇವತೆಯಾಗಿದ್ದಾಳೆ:ಬಸವಂತ ಕೋಣಿ

Spread the loveಶ್ರೀದೇವಿಯು ಮಹಾನ್ ಶಕ್ತಿ ದೇವತೆಯಾಗಿದ್ದಾಳೆ:ಬಸವಂತ ಕೋಣಿ ಬೆಟಗೇರಿ:ಶ್ರೀದೇವಿಯ ಮೇಲೆ ನಂಬಿಕೆ ಇಟ್ಟು ನಡೆದುಕೊಂಡವರ ಇಷ್ಟಾರ್ಥಗಳನ್ನು ಇಡೇರಿಸುತ್ತಾಳೆ. ಶ್ರೀದ್ಯಾಮವ್ವದೇವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ