Breaking News
Home / Recent Posts / ಅತಿ ಹೆಚ್ಚು ಹಾಲು ನೀಡಿದ ಸಂಘದ ಸದಸ್ಯರಿಗೆ ಬಹುಮಾನ

ಅತಿ ಹೆಚ್ಚು ಹಾಲು ನೀಡಿದ ಸಂಘದ ಸದಸ್ಯರಿಗೆ ಬಹುಮಾನ

Spread the love

ಬೆಟಗೇರಿ:ಗ್ರಾಮದ ರೈತರು ನಿತ್ಯದ ಕೃಷಿ ಚಟುವಟಿಕೆಗಳ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಎಮ್.ವಿ.ಲಕ್ಕಣ್ಣವರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ 2020-21ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿ, ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘದ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಬೆಳಗಾವಿ ಹಾಲು ಒಕ್ಕೂಟದಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ರೈತರಿಗೆ ದೊರಕುವ ವಿವಿಧ ಸೌಲಭ್ಯಗಳ ಕುರಿತು ತಿಳಿಸಿದರು.
ಸಂಘದ ಮುಖ್ಯಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ ವಾರ್ಷಿಕ ವರದಿ ಮಂಡಿಸಿ ಸಂಘವು ಸನ್ 2020-21ನೇ ಸಾಲಿನಲ್ಲಿ 20,65,397 ರೂ ನಿವ್ವಳ ಲಾಭ ಗಳಿಸಿದೆ. ಸಂಘದ ಶೇರ ಸದಸ್ಯರಿಗೆ ಶೇ 20ರಷ್ಟು ಡಿವ್ಹಿಡೆಂಡ್, ಶೇ65ರಷ್ಟು ಒಟ್ಟು 9,57,423 ರೂ ಬೋನಸ್ ಸದಸ್ಯರಿಗೆ ವಿತರಿಸಲಾಗುವದು ಎಂದರು.
ಸಂಘದ ಅಧ್ಯಕ್ಷ ಹನುಮಂತ ಪಾಟೀಲ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಶೇರ ಸದಸ್ಯರು, ಗ್ರಾಹಕರು, ಗ್ರಾಮದ ಹಿರಿಯ ನಾಗರಿಕರ ಜೋತೆ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯರು ಸಂಘದ ಸಮಗ್ರ ಪ್ರಗತಿಯ ಕುರಿತು ಹಲವಾರು ವಿಷಯಗಳನ್ನು ಈ ವೇಳೆ ಚರ್ಚಿಸಿದರು.
ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಆಕಳು ಮತ್ತು ಎಮ್ಮೆ ಹಾಲು ವಿಭಾಗದಲ್ಲಿ ಸನ್ 2020-21ನೇ ಸಾಲಿನಲ್ಲಿ ಅತಿ ಹೆಚ್ಚು ಹಾಲು ನೀಡಿದ ಸಂಘದ ಸದಸ್ಯರಿಗೆ ಪ್ರಥಮ, ದ್ವೀತಿಯ, ತೃತೀಯ ಸ್ಥಾನಗಳಿಗೆ ತ್ರಾಮದ ಹಾಂಡೆ, ಗೃಹೋಪಯೋಗಿ ಉಪಕರಣಗಳನ್ನು ಬಹುಮಾನ ರೂಪದಲ್ಲಿ ನೀಡಿದರು. ಕೆಎಂಎಫ್ ಸಂಸ್ಥೆಯ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ.ಜೆ.ಆರ್.ಮಣ್ಣೇರಿ, ಎಚ್.ಎಸ್.ದುಂಡಿ, ಎನ್.ಟಿ.ಹಡಪದ ಅವರನ್ನು ಇಲ್ಲಿಯ ಹಾಉಸ ಸಂಘದ ವತಿಯಿಂದ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಗೋಕಾಕ ಉಪ ಕೇಂದ್ರದ ವಿಸ್ತರಣಾಧಿಕಾರಿ ಎಸ್.ಬಿ.ಕರಬಣ್ಣವರ, ಬೀರೇಶ ಖಿಲಾರಿ, ಡಾ.ವೀರಣ್ಣ ಕೌಜಲಗಿ, ಸಂಜೀವ ಪೂಜೇರಿ, ದುಂಡಪ್ಪ ಕಂಬಿ, ಸತ್ಯಪ್ಪ ಹೊರಟ್ಟಿ, ರಾಚಪ್ಪ ಮುರಗೋಡ, ರವಿ ಉಪ್ಪಾರ, ವಿಜಯ ಮಠದ, ಉದ್ದಪ್ಪ ಆಶೆಪ್ಪಗೋಳ, ರಾಮಣ್ಣ ದೇಯಣ್ಣವರ, ಸಿದ್ದಪ್ಪ ಬಾಣಸಿ, ಸುನಂದಾ ದೇಯಣ್ಣವರ, ರುಕ್ಮವ್ವ ಕೋಣಿ, ಯಮನಪ್ಪ ತಳವಾರ, ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ಶೇರ ಸದಸ್ಯರು, ಗ್ರಾಹಕರು, ಇತರರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ