Breaking News
Home / Uncategorized / ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ- ಎಸ್.ಎಮ್.ಲೋಕನ್ನವರ

ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ- ಎಸ್.ಎಮ್.ಲೋಕನ್ನವರ

Spread the love

ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ- ಎಸ್.ಎಮ್.ಲೋಕನ್ನವರ

ಬೆಟಗೇರಿ:ಪಾಲಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದ ಕಲಿಕೆಯಲ್ಲಿ ಶಿಸ್ತು ಹಾಗೂ ಸಂಸ್ಕಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದರೇ ಮಕ್ಕಳು ಒಳ್ಳೆಯ ಬದುಕು ಕಟ್ಟಿಕೊಂಡು ಸುಂದರ ಜೀವನ ನಡೆಸಬಲ್ಲರು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೊಡಿ ಜಿಲ್ಲಾ ಅಧ್ಯಕ್ಷ ಹಾಗೂ ಗೋಸಬಾಳ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಮುಖ್ಯ ಶಿಕ್ಷಕ ಎಸ್.ಎಮ್.ಲೋಕನ್ನವರ ಹೇಳಿದರು.
ಮೂಡಲಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಟಗೇರಿ ಕೃಷ್ಣಶರ್ಮ ಚೈತನ್ಯ ಶಾಲೆ ಬೆಟಗೇರಿ ಹಾಗೂ ಚೈತನ್ಯಮಯಿ ಸತ್ತೇವ್ವ ದೇಯನ್ನವರ ಆಂಗ್ಲ ಮಾಧ್ಯಮ ಶಾಲೆ ಬೆಟಗೇರಿ ಶಾಲೆಯ 19ನೇಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಪ್ರಕಾಶ ಕುರಬೇಟ ಮುಖ್ಯ ಅತಿಥಿಗಳಾಗಿ ಮಾತನಾಡಿ, ಅಕ್ಷರದಾಸೋಹಿ ದಿ. ಸಿದ್ದಣ್ಣ ಎಸ್ ಹೊರಟ್ಟಿಯವರು 2006 ರಲ್ಲಿ ಬೆಟಗೇರಿಯಲ್ಲಿ ಚೈತನ್ಯ ಶಾಲೆ ಪ್ರಾರಂಭಿಸಿ ಸುತ್ತಮುತ್ತಲಿನ ಹಳ್ಳಿಗಳ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಂಕಲ್ಪ ಮಾಡಿ ನಿಸ್ವಾರ್ಥ ಸೇವಾ ಮನೋಭಾವದಿಂದ ಸೇವೆಸಲ್ಲಿದ ಪ್ರಯುಕ್ತ ಶಾಲೆಯಲ್ಲಿ ಅಧ್ಯಯನ ಮಾಡಿದ ಮಕ್ಕಳು ಇಂದು ವೈದ್ಯಕೀಯ, ತಾಂತ್ರಿಕ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಉಭಯ ಮಾಧ್ಯಮದ ಆಡಳಿತಾಧಿಕಾರಿ ರವಿ ಪಿ ಭರಮನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಗೌರವ ಕಾರ್ಯದರ್ಶಿ ವೈ.ಬಿ.ಪಾಟೀಲ ಹಾಗೂ ಆಡಳಿತ ಮಂಡಳಿ ಸದಸ್ಯ ವಿಜಯ ಹೊರಟ್ಟಿಯವರ ಮಾರ್ಗದರ್ಶನದಲ್ಲಿ ನವೋದಯ, ಆಳ್ವಾಸ ಸೈನಿಕ ಮೊರಾರ್ಜಿ ಆದರ್ಶ ಮುಂತಾದ ವಸತಿ ಶಾಲೆಗಳಿಗೆ ಪ್ರತಿವರ್ಷವೂ 30 ಕ್ಕಿಂತ ಹೆಚ್ಚು ಮಕ್ಕಳು ಆಯ್ಕೆಯಾಗುತ್ತಿರುವುದು ಸಂತಸದ ಸಂಗತಿ. ದಿ.ಎಸ್.ಎಸ್ ಹೊರಟ್ಟಿ ಸವಿನೆನಪಿಗಾಗಿ ಸ್ಥಾಪಿಸಲ್ಪಟ್ಟ ಜನಕಲ್ಯಾಣ ಸೇವಾ ಟ್ರಸ್ಟ ಮೂಲಕ 2024-25 ನೇ ಶೈಕ್ಷಣಿಕ ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ 4 ಮತ್ತು 5ನೇ ತರಗತಿಯ ಕನ್ನಡ ಮಾಧ್ಯಮದ 25 ಮಕ್ಕಳಿಗೆ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ವಿಜಯ ಎಸ್ ಹೊರಟ್ಟಿ ವಾಗ್ದಾನ ಮಾಡಿದ ಪ್ರಯುಕ್ತ ಬೆಳಗಾವಿ ಬಾಗಲಕೋಟೆ ಹಾಗೂ ವಿವಿಧ ಜಿಲ್ಲೆಗಳ ಮಕ್ಕಳು ಉಚಿತ ಶಿಕ್ಷಣದ ಲಾಭ ಪಡೆಯುತ್ತಿದ್ದು ಅದು ನಿರಂತರ ಮುಂದುವರೆಯುವುದಕ್ಕೆ ಪಾಲಕರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ವಿವಿಧ ವಲಯದಲ್ಲಿ ಸಾಧಕ ವಿದ್ಯಾರ್ಥಿ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರನ್ನು ಸಂಸ್ಥೆಯ ಪರವಾಗಿ ಮತ್ತು ಪಾಲಕರು ಸತ್ಕರಿಸಿದರು. ಉಭಯ ಮಾಧ್ಯಮದ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಣ ಪ್ರೇಮಿ ಈರಪ್ಪ ದೇಯನ್ನವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ 7ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಉಭಯ ಮಾಧ್ಯಮ ಶಾಲೆಯ ಪ್ರಧಾನ ಗುರು ಕಮಲಾಕ್ಷಿ ನಾಯ್ಕ, ಎಸ್ ವಾಯ್ ಪಾಟೀಲ, ರಮೇಶ ನಾಯ್ಕ, ಬೆಟಗೇರಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಬಿ.ನಾಯ್ಕರ, ಸುಧಾ ಪಾಟೀಲ, ಶ್ರೀಮತಿ ಭಾರತಿ ಕಲಿವಾಳ, ಬಿ.ಎಂ.ಅಂಗಡಿ, ಎಸ್.ಬಿ.ಪಾಟೀಲ, ಬಾಳೇಶ ಫಕೀರಪ್ಪನವರ, ಕಾವೇರಿ ಹೊಸಮಠ, ವಿದ್ಯಾಶ್ರೀ ಜನ್ಮಟ್ಟಿ, ಜನೇಟ್ ಪೌಲ್, ನಬಿಸಾಬ ನದಾಫ್, ಸುಮನ್ ಗಾಣಿಗ ಸೇರಿದಂತೆ ಶಿಕ್ಷಣಪ್ರೇಮಿಗಳು, ಉಭಯ ಮಾಧ್ಯಮದ ಶಾಲೆಯ ಶಿಕ್ಷಕರು, ವಿದ್ಯಾರ್ಥಿ ಪಾಲಕರು, ಮತ್ತೀತರರು ಇದ್ದರು.


Spread the love

About inmudalgi

Check Also

ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿಗೆ ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಿರಿಯ ಕಲಾವಿದ, ಸಾಹಿತಿ, ಸರಳ ನಡೆ, ನುಡಿ ವ್ಯಕ್ತಿತ್ವದ ಹಿರಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ