Breaking News
Home / Recent Posts / ಮಂಜುನಾಥ ಸೊಗಲದಗೆ ಪಿಎಚ್‍ಡಿ ಪದವಿ ಗೌರವ

ಮಂಜುನಾಥ ಸೊಗಲದಗೆ ಪಿಎಚ್‍ಡಿ ಪದವಿ ಗೌರವ

Spread the love

ಮಂಜುನಾಥ ಸೊಗಲದಗೆ ಪಿಎಚ್‍ಡಿ ಪದವಿ ಗೌರವ

ಬೆಟಗೇರಿ:ಸಮೀಪದ ಕೌಜಲಗಿ ಗ್ರಾಮದ ಮಂಜುನಾಥ ಮಹಾದೇವಪ್ಪ ಸೊಗಲದ ಅವರು ವಯಸ್ಕರರಲ್ಲಿ ನಿದ್ರಾಹೀನತೆ ಮತ್ತು ಪರಿಣಾಮ ಹಾಗೂ ಗುಣಮಟ್ಟದ ಜೀವನ ಕುರಿತು ವಿಷಯ ಮಂಡಿಸಿದ್ದಕ್ಕೆ ರಾಜಸ್ಥಾನ ಜೆಜೆಟಿ ವಿಶ್ವವಿದ್ಯಾಲಯ ಇತ್ತೀಚೆಗೆ ಅವರಿಗೆ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ.
ಬೆಳಗಾವಿ ನೆಹರು ನಗರದ ಕೆಎಲ್‍ಇ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ವಿದ್ಯಾರ್ಥಿ ಮಂಜುನಾಥ ಸೊಗಲದ ಅವರಿಗೆ ಉಪನ್ಯಾಸಕಿ ಡಾ.ಸುಧಾ ರಡ್ಡಿ ಹಾಗೂ ರಾಜಸ್ಥಾನ ಜೆಜೆಟಿ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಕೆಮಚಂದ್ರ ಮಾರ್ಗದರ್ಶನ ನೀಡಿದ್ದರು. ಕೌಜಲಗಿ ಗ್ರಾಮದ ಶಿಕ್ಷಣ ಪ್ರೇಮಿಗಳು, ಸ್ಥಳೀಯರು ಹಾಗೂ ಬೆಳಗಾವಿ ನೆಹರು ನಗರದ ಕೆಎಲ್‍ಇ ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ಮಂಜುನಾಥ ಸೊಗಲದ ಅವರ ಸಾಧನೆಯನ್ನು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Spread the love

About inmudalgi

Check Also

ದೇವರು, ತಾಯಿ-ತಂದೆ, ಪೂಜ್ಯರು ಮತ್ತು ಜನರ ಆಶೀರ್ವಾದದಿಂದ ನಾವು ಜಿಲ್ಲೆಯಲ್ಲಿಯೇ ಗಟ್ಟಿಯಾಗಿ ಜನರ ಮುಂದೆ ನಿಲ್ಲಲು ಕಾರಣವಾಗಿದೆ -ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love ಮೂಡಲಗಿ- ದೇವರು, ತಾಯಿ-ತಂದೆ, ಪೂಜ್ಯರು ಮತ್ತು ಜನರ ಆಶೀರ್ವಾದದಿಂದ ನಾವು ಜಿಲ್ಲೆಯಲ್ಲಿಯೇ ಗಟ್ಟಿಯಾಗಿ ಜನರ ಮುಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ