
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸಂಕ್ರಾತಿ ಹಬ್ಬದ ಪ್ರಯುಕ್ತ ಪುರ ಜನರಿಂದ ಎಳ್ಳು ಬೆಲ್ಲ (ಸಿಹಿ) ವಿನಿಮಯ ಕಾರ್ಯಕ್ರಮ ಬುಧವಾರ ಜ.14ರಂದು ಸಂಭ್ರಮದಿಂದ ನಡೆಯಿತು.
ಸ್ಥಳೀಯ ಎಲ್ಲಾ ದೇವರ ದೇವಾಲಯಗಳಲ್ಲ್ಲಿ ಪುರ ಜನರಿಂದ ಪೂಜೆ, ನೈವೇದ್ಯ ಸಮರ್ಪಪನೆ ನಡೆದ ಬಳಿಕ ಸಂಜೆ ಹೊತ್ತು ಬೆಟಗೇರಿ ಗ್ರಾಮದ ಪ್ರತಿ ಮನೆಗಳಲ್ಲಿ ಹಾಗೂ ಅಕ್ಕ-ಪಕ್ಕದ ಮನೆಯಲ್ಲಿರುವ ವೃದ್ಧರಿಗೆ, ಹಿರಿಯರಿಗೆ ಮಕ್ಕಳು, ಮಹಿಳೆಯರು, ವೃದ್ದರು ಜಾತಿ, ಮತ, ಪಂಥ ಎನ್ನದೇ ಒಬ್ಬರಿಗೊಬ್ಬರೂ ನಾನು ನೀನು ಎಳ್ಳು ಬೆಲ್ಲದಂಗ ಇರೋಣಾ ಅಂತಾ ಸಿಹಿ ವಿನಿಮಯ ಮಾಡಿಕೊಂಡು, ಹಿರಿಯರ ಕಾಲಿಗೆ ನಮಸ್ಕರಿಸಿ ಆರ್ಶೀವಾದ ಪಡೆದುಕೊಳ್ಳುವ ದೃಶ್ಯ ಸ್ಥಳೀಯರಲ್ಲಿ ಅವಿನಾಭಾವ ಸಂಬಂಧ ಬೆಸೆಯುವಂತಿತ್ತು. ಸ್ಥಳೀಯ ಮಕ್ಕಳು, ಯುವಕರು ಎಳ್ಳು ಬೆಲ್ಲ ಒಬ್ಬರಿಗೊಬ್ಬರೂ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
IN MUDALGI Latest Kannada News