ಬೆಟಗೇರಿ ವಿವಿಧೆಡೆ ಸಡಗರದಿಂದ ನಡೆದ 77 ನೇ
ಗಣರಾಜ್ಯೋತ್ಸವ ದಿನಾಚರಣೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವೇಶ್ವರ ಸೌಹಾರ್ದ ಸಹಕಾರಿಯಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸಂಭ್ರಮದಿಂದ
ನಡೆಯಿತು. ಸಹಕಾರಿಯ ಅಧ್ಯಕ್ಷ ಬಸವರಾಜ ಮಾಳೇದ ಧ್ವಜಾರೋಹಣ ನೆರವೇರಿಸಿದರು. ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಸಮರ್ಪಿಸಿದ ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಲಕ್ಷ್ಮಣ ನೀಲಣ್ಣವರ, ಸಂಗಯ್ಯ ಹಿರೇಮಠ, ಈರಯ್ಯ ಹಿರೇಮಠ, ತಮ್ಮಣ್ಣ ಗಾಣಗಿ, ರಮೇಶ ನಾಯ್ಕ, ರಾಮಣ್ಣ ಮುಧೋಳ, ರಾಜು ಪತ್ತಾರ, ರವಿ ಪೂಜೇರಿ, ಸಹಕಾರಿಯ ಆಡಳಿತ ಮಂಡಳಿ ಸದಸ್ಯರು, ಮುಖ್ಯ
ಕಾರ್ಯನಿರ್ವಾಹಕ, ಸಿಬ್ಬಂದಿ, ಗಣ್ಯರು ಮತ್ತೀತರರು ಇದ್ದರು.
ಸರಕಾರಿ ಪ್ರೌಢ ಶಾಲೆ: ಸ್ಥಳೀಯ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಧ್ವಜಾರೋಹಣ ಮಾಡಿದರು.
ಶಾಲೆಯ ಸ್ಕೌಟ್ ವಿದ್ಯಾರ್ಥಿಗಳಿಂದ ವಿಶೇಷ ಪರೇಡ್, ಧ್ವಜಾರೋಹಣಕ್ಕೆ
ಗೌರವ ಸಮರ್ಪನೆ ಕಾರ್ಯಕ್ರಮ ನಡೆಯಿತು. ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಿದ ಬಳಿಕ ಸಿಹಿ ಹಂಚಲಾಯಿತು,
ಎಸ್‍ಡಿಎಮ್‍ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಇದ್ದರು.
IN MUDALGI Latest Kannada News