Breaking News
Home / ಬೆಳಗಾವಿ / ಬೆಟಗೇರಿ ಕೃಷ್ಣಶರ್ಮ ಚೈತನ್ಯ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

ಬೆಟಗೇರಿ ಕೃಷ್ಣಶರ್ಮ ಚೈತನ್ಯ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

Spread the love

ಬೆಟಗೇರಿ ಕೃಷ್ಣಶರ್ಮ ಚೈತನ್ಯ ಶಾಲೆಯಲ್ಲಿ
ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

ಬೆಟಗೇರಿ:ಪ್ರತಿಯೊಬ್ಬ ಭಾರತಿಯ ನಾಗರಿಕ ಸಂವಿಧಾನದ ಆಶಯದಂತೆ ನಡೆದುಕೊಂಡರೆ ಸಮಸಮಾಜ ನಿರ್ಮಾಣಗೊಂಡು ಸುಂದರ ಬದುಕು ಸಾಗಿಸಲು ಸಾಧ್ಯ ಎಂದು ಎಸ್.ವೈ.ಪಾಟೀಲ ಹೇಳಿದರು.
ಮೂಡಲಗಿ ಚೈತನ್ಯ ಗ್ರುಪ್‍ನ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬೆಟಗೇರಿ ಕೃಷ್ಣಶವರ್i ಚೈತನ್ಯ ಶಾಲೆ ಹಾಗೂ ಚೈತನ್ಯಮಯಿ ಸತ್ಯೇವ್ವ ದೇಯನ್ನವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ.26ರಂದು ನಡೆದ 77ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ ರಚಿಸಿದ ಸಂವಿಧಾನ ಸಾಮಾನ್ಯ ಪ್ರಜೆಯು ಸ್ವತಂತ್ರವಾಗಿ ಬದಕುವ, ಮಾತನಾಡುವ, ವಾಸಿಸುವ ಹಕ್ಕು ಹೊಂದಿದ್ದು.
ಮಕ್ಕಳು ಉತ್ತಮ ಶಿಕ್ಷಣ ಪಡೆದು ದೇಶ ಮೆಚ್ಚುವಂತಹ ಪ್ರಜೆಯಾಗಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದರು.
ಬೆಟಗೇರಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಎಂ ಬಿ ನಾಯ್ಕರ ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ಜಗತ್ತಿನಲ್ಲಿಯೇ ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿದೆ ಎಂದರು.
ಉಭಯ ಮಾಧ್ಯಮ ಚೈತನ್ಯ ಶಾಲೆಯ ಆಡಳಿತಾಧಿಕಾರಿ
ರವಿ.ಪಿ.ಭರಮನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರದ ಮಹಾತ್ಮ ಗಾಂದಿಜಿ ಆದಿಯಾಗಿ ಹಲವಾರು ರಾಷ್ಟ್ರನಾಯಕರ ತ್ಯಾಗ ಬಲಿದಾನಗಳಿಂದ 1947 ಅಗಷ್ಟ 15 ರಂದು ಸ್ವಾತಂತ್ರಗೊಂಡ ಭಾರತ ದೇಶಕ್ಕೆ ಸರಿಹೊಂದುವ ಸಂವಿಧಾನದನ್ನು ಜಗತ್ತಿನ ಪ್ರಮುಖ ದೇಶಗಳ ಸಂವಿಧಾನದ ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಸರಿದೂಗುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ ಮುಂದಾಳತ್ವದಲ್ಲಿ ಸಿದ್ದಪಡಿಸಿ 1950 ಜನವರಿ 26 ರಂದು ದೇಶಕ್ಕೆ ಅರ್ಪಿಸಲಾಯಿತು. ಅಂದಿನಿಂದ ಇಲ್ಲಿಯವರಿಗೆ ಈ ದಿನವನ್ನು ಗಣರಾಜ್ಯೋತ್ಸವ ದಿನ ಎಂದು ಸಂಭ್ರಮದಿಂದ ದೇಶವ್ಯಾಪ್ತಿ ಆಚರಿಸಲಾಗುತ್ತದೆ ಎಂದರು ಉಭಯ ಮಾದ್ಯಮ ಶಾಲೆಯ ಮಕ್ಕಳು ವಿವಿಧ ರಾಷ್ಟನಾಯಕರ ವೇಷಭೂಷಣ ಧರಿಸಿ ಗಮನ ಸೆಳೆದರು.ಗಣರಾಜ್ಯೋತ್ಸವ ಬಗ್ಗೆ ಮಕ್ಕಳು ಭಾಷಣ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದ ಬಳಿಕ ಶಾಲೆಯ ಮಕ್ಕಳಿಗೆ ಸಿಹಿ ವಿತರಿಸಲಾಯಿತು.ರಮೇಶ ನಾಯ್ಕ, ಪ್ರಧಾನಗುರು ಕಮಲಾಕ್ಷಿ ನಾಯ್ಕ, ವಿದ್ಯಾ ಜನ್ಮಟ್ಟಿ,ಪ್ರೀತಿ ಪಾಟೀಲ, ಪವಿತ್ರಾ ಬಾಲನ್ನವರ, ವಿಶ್ವನಾಥ ನಾಯ್ಕ, ಉಭಯ ಮಾಧ್ಯಮ ಶಾಲೆಯ ಶಿಕ್ಷಕರು, ಶಿಕ್ಷಕಿಯರು, ಶಿಕ್ಷಣಪ್ರೇಮಿಗಳು, ಮತ್ತಿತರರು ಇದ್ದರು.


Spread the love

About inmudalgi

Check Also

ಜ.27,28ರಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ

Spread the loveಜ.27,28ರಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮೂಡಲಗಿ: ಪಟ್ಟಣದ ಬಳಿಗಾರ ಓಣಿಯ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ