Breaking News
Home / Recent Posts / ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಯೋಗಸ್ಪರ್ಧೆಯಲ್ಲಿ ಪುಂಡಲೀಕ ಲಕಾಟಿಗೆ ಚಿನ್ನದ ಪದಕ

ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಯೋಗಸ್ಪರ್ಧೆಯಲ್ಲಿ ಪುಂಡಲೀಕ ಲಕಾಟಿಗೆ ಚಿನ್ನದ ಪದಕ

Spread the love

ಬೆಟಗೇರಿ ಯುವಕ ಪುಂಡಲೀಕ ಲಕಾಟಿಗೆ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ

ವರದಿ. ಅಡಿವೇಶ ಮುಧೋಳ.

ಬೆಟಗೇರಿ: ಕರುನಾಡಿನ ಬಡಕುಟುಂಬದಲ್ಲಿ ಅರಳುವ ಪ್ರತಿಭೆಗಳಿಗೆನೂ ಕಡಿಮೆ ಇಲ್ಲ ಅಂಬುವುದಕ್ಕೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರಾಷ್ಟ್ರೀಯ ಯೋಗಸ್ಪರ್ಧೆಯ ಸಾಧಕ ಯುವ ಪ್ರತಿಭೆ ಪುಂಡಲೀಕ ಮಹಾದೇವಪ್ಪ ಲಕಾಟಿ ಅವರೇ ಸಾಕ್ಷಿ.!
ನೇಪಾಳ ದೇಶದ ಪೋಖರಾ ನಗರದಲ್ಲಿ ಅಕ್ಟೋಬರ್ 2 ರಿಂದ 6 ರವರೆಗೆ ನಡೆದ ನೇಪಾಳ ಅಂತರರಾಷ್ಟ್ರೀಯ ಹೀರೋಸ್ ಗೇಮ್ಸ್ ಚಾಂಪಿಯನ್‍ಸಿಫ್-2021 ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಪುರುಷ ವಿಭಾಗ ಯೋಗ ಸ್ಪರ್ಧೆಯಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಯುವ ಪ್ರತಿಭೆ ಪುಂಡಲೀಕ ಲಕಾಟಿ ಪ್ರಥಮ ಸ್ಥಾನ ಗಳಿಸಿ, ಚಿನ್ನದ ಪದಕ ಪಡೆದುಕೊಂಡಿದ್ದಾರೆ.


ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಡಕುಟುಂಬದ ಮಹಾದೇವಪ್ಪ-ಯಲ್ಲವ್ವ ದಂಪತಿಗಳ 2ನೇ ಪುತ್ರನಾಗಿ 1984 ಅಕ್ಟೊಬರ್ 28 ರಂದು ಜನಿಸಿದ ಪುಂಡಲೀಕ ಲಕಾಟಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ ಪೂರೈಸಿ, ಗೋಕಾಕ ಜಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಪಿಯು ಶಿಕ್ಷಣ, ಎಲ್‍ಇಟಿ ಸಂಸ್ಥೆಯಲ್ಲಿ ಪದವಿ ವ್ಯಾಸಂಗ, ಧಾರವಾಡದ ಕರ್ನಾಟಕ ಯುನರ್ವಸಿಟಿಯಲ್ಲಿ ಎಮ್‍ಎಸ್‍ಡಬ್ಲೂ ಸ್ನಾತಕೊತ್ತರ ಶಿಕ್ಷಣ ಪೂರೈಸಿದ ಅವರು, ಈಗ ಬೆಂಗಳೂರು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಪಿಜಿಡಿಎಚ್‍ಪಿಇ ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಬೆಟಗೇರಿ ಕೀರ್ತಿ ಹೆಚ್ಚಿಸಿದ ಪುಂಡಲೀಕ ಲಕಾಟಿ.! : ಯೋಗಾಭ್ಯಾಸದ ಕಡೆ ಆಸಕ್ತಿ ವಹಿಸಿ, ವಿವಿಧ ಯೋಗಾಸನಗಳ ಶಿಕ್ಷಣ ಪಡೆದು ಅಂತರರಾಷ್ಟ್ರೀಯ ಮಟ್ಟದ ಪುರುಷ ವಿಭಾಗದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಕುಂದಾನಗರಿ ಬೆಳಗಾವಿ ಜಿಲ್ಲೆ, ಕರದಂಟೂರು ಗೋಕಾಕ, ಹುಟ್ಟೂರು ಬೆಟಗೇರಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಕಳೆದ ಏಳೆಂಟು ವರ್ಷದಿಂದ ವಿವಿಧ ಯೋಗಾಸನಗಳ ಅಭ್ಯಾಸ ಮಾಡುತ್ತಾ, ನಾಡಿನ ವಿವಿಧಡೆ ಆಯೋಜಿಸಿದ ಹಲವು ಯೋಗಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ತುಮಕೂರಿನ ಅಮರಜ್ಯೋತಿ ನಗರದಲ್ಲಿರುವ ತುಮಕೂರು ಯೋಗಾಸನ ಕೇಂದ್ರದಲ್ಲಿ ಯೋಗ ಶಿಕ್ಷಣ ಪಡೆದಿದ್ದು, ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು, ದೇಶದ ಮತ್ತು ನಾಡಿನ ಹಾಗೂ ಹುಟ್ಟೂರಿನ ಕೀರ್ತಿ ಹೆಚ್ಚಿಸಿದ ಸಾಧನೆ ನನಗೆ ಖುಷಿ ತಂದಿದೆ ಅನ್ನುತ್ತಾರೆ ಪುಂಡಲೀಕ ಲಕಾಟಿ.


ದೇಶದ, ನಾಡಿನ ಕುಂದಾನಗರಿ ಬೆಳಗಾವಿ, ಕರದಂಟೂರು ಗೋಕಾಕ ಹಾಗೂ ಬೆಟಗೇರಿ ಗ್ರಾಮದ ಹಿರಿಯ ನಾಗರಿಕರು, ಗಣ್ಯರು, ಸ್ಥಳೀಯ ಯೋಗಪಟು ಪುಂಡಲೀಕ ಲಕಾಟಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಸಾಧನೆಯನ್ನು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
“ನಾನು ಹಲವಾರು ಯೋಗ ಪುಸ್ತಕ ತೆಗೆದುಕೊಂಡು ಅದರಲ್ಲಿರುವ ಮಾಹಿತಿಯಂತೆ ಯೋಗಾಸನಗಳ ವಿವಿಧ ಆಸನಗಳನ್ನು ನಿತ್ಯ ಯೋಗಾಭ್ಯಾಸ ಮಾಡುವ ರೂಢಿಮೈಗೊಡಿಸಿಕೊಂಡಿದ್ದು ಹೆಚ್ಚು, ಬಳಿಕ ತುಮಕೂರಿನ ರವೀಂದ್ರನಾಥ(ಟ್ಯಾಗೂರ್) ಹಾಗೂ ಎಮ್.ಕೆ.ನಾಗರಾಜರಾವ್ ಹಾಗೂ ಡಾ.ನಿರಂಜನಮೂರ್ತಿ ಅವರ ಯೋಗ ಶಿಕ್ಷಣಾಭ್ಯಾಸದ ಮಾರ್ಗದರ್ಶನವೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಗೆ ಆಯ್ಕೆಗೊಳ್ಳಲು, ಹಲವು ಪ್ರಶಸ್ತಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆಯಲು ಸಹಾಯಕವಾಗಿದೆ.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ