ಬೆಟಗೇರಿ ಗ್ರಾಮದ ಯುವ ಪ್ರತಿಭೆ ಪುಂಡಲೀಕ ಲಕಾಟಿಗೆ ಸನ್ಮಾನ
ಬೆಟಗೇರಿ:ಗ್ರಾಮದ ಆನಂದಕಂದ ಚಿಟ್ಸ್ ಪ್ರೈ.ಲಿ ಆಡಳಿತ ಮಂಡಳಿ ವತಿಯಿಂದ ಸೋಮವಾರ ನ.1ರಂದು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಯೋಗಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಬೆಟಗೇರಿ ಗ್ರಾಮದ ಯುವ ಪ್ರತಿಭೆ ಪುಂಡಲೀಕ ಲಕಾಟಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಸ್ಥಳೀಯ ಆನಂದಕಂದ ಚಿಟ್ಸ್ ಪ್ರೈ.ಲಿ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಕೋಣಿ ಮಾತನಾಡಿ, ನೇಪಾಳ ದೇಶದÀ ಪೋಖರಾ ನಗರದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಪುರುಷ ವಿಭಾಗ ಯೋಗ ಸ್ಪರ್ಧೆಯಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಪುಂಡಲೀಕ ಲಕಾಟಿ ಅವರು ಚಿನ್ನದ ಪದಕ ಪಡೆದುಕೊಂಡು, ದೇಶದ ಮತ್ತು ನಾಡಿನ ಹಾಗೂ ಹುಟ್ಟೂರಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಯುವ ಧುರೀಣ ಈರಣ್ಣ ಬಳಿಗಾರ, ರಮೇಶಕುಮಾರ ಕಂಬಿ, ವೀರಭದ್ರ ದಂಡಿನ, ಗುಳಪ್ಪ ಪಣದಿ, ಅರ್ಜುನ ಬ್ಯಾಗಿ, ತುಕಾರಾಮ ಕುರಿ, ಹನುಮಂತ ನೇರಿತಲಿ, ಶಂಕರ ಲಕಾಟಿ, ಶಿವರಾಜ ಪತ್ತಾರ, ನಿರ್ವಾಣಿ ಕತ್ತಿ, ಸಂತೋಷ ಮಹಾಲ್ಮನಿ, ಸಂಜೀವ ಪಣದಿ, ಶ್ರೀಶೈಲ ಕರೆಣ್ಣವರ, ಸ್ಥಳೀಯ ಆನಂದಕಂದ ಚಿಟ್ಸ್ ಪ್ರೈ.ಲಿ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಇದ್ದರು.
IN MUDALGI Latest Kannada News