Breaking News
Home / Recent Posts / ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದು ಸಸಿ ನೆಟ್ಟು ಅರಣ್ಯ ಬೆಳಸಿ ನಾಡು ಉಳಿಸಿ

ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದು ಸಸಿ ನೆಟ್ಟು ಅರಣ್ಯ ಬೆಳಸಿ ನಾಡು ಉಳಿಸಿ

Spread the love

ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದು ಸಸಿ ನೆಟ್ಟು ಅರಣ್ಯ ಬೆಳಸಿ ನಾಡು ಉಳಿಸಿ, ಹಸಿರೇ ನಮ್ಮೆಲ್ಲರಿಗೂ ಉಸಿರಾಗಿದೆ ಎಂದು ಹೊಸಟ್ಟಿ ಗ್ರಾಮದ ಬೀಟ್ ಪೊಲೀಸ್ ಪೇದೆ ಬಸಪ್ಪ ಕ್ವಾನ್ಯಾಗೋಳ ಹೇಳಿದರು.
ಸಮೀಪದ ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಶನಿವಾರದಂದು ಹೊಸಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು, ನೀರು ಹಾಕಿ ಮಾತನಾಡಿ, ಅರಣ್ಯ ಸಂಪತ್ತು ಉಳಿಸಿ, ಬೆಳೆಸಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಗ್ರಾಪಂ ಸದಸ್ಯ ಜಗದೀಶ ಡೊಳ್ಳಿ, ಶಾಲೆಯ ಎಸ್.ಡಿಎಂ.ಸಿ ಅಧ್ಯಕ್ಷ ಮಲ್ಲಪ್ಪ ಕಬ್ಬೂರ, ವಸಂತ ಪಾಟೀಲ, ಗೋಪಾಲ ಗುಡ್ಲಿ, ಕಲ್ಮಶ ಬಾಗಲಿ, ಗ್ರಾಪಂ ಸದಸ್ಯರು, ಶಾಲೆಯ ಎಸ್‍ಡಿಎಂಸಿ ಸದಸ್ಯರು, ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ