ಬೆಟಗೇರಿ:ಗ್ರಾಮದ ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ಶಾಖೆಯಲ್ಲಿ ಅಖಿಲ ಭಾರತ ಸಹಕಾರಿ ಸಪ್ತಾಹ ಪ್ರಯುಕ್ತ ಸಹಕಾರಿ ಸಪ್ತಾಹ ಧ್ವಜಾರೋಹಣ ರವಿವಾರದಂದು ನಡೆಯಿತು.
ಶಾಖೆಯ ಮುಖ್ಯ ಕಾರ್ಯನಿವಾಹಕ ವಿಠಲ ನೇಮಗೌಡರ ಅವರು, ಸಹಕಾರಿ ಪಿತಾಮಹ ಶಿದ್ದನಗೌಡ ಪಾಟೀಲ ಅವರ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಬಳಿಕ ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ವಿವೇಕ ಬಬಲಿ, ಲಕ್ಕಪ್ಪ ಕೊತಂಬರಿ, ವೀರೇಶ ಮಠದ, ಮಲ್ಲಿಕಾರ್ಜುನ ಸಣ್ಣಬಾಲಪ್ಪಗೋಳ, ಬನಪ್ಪ ಚಂದರಗಿ, ಅರ್ಜುನ ಮುತವಾಡ, ಸೊಸಾಯಿಟಿ ಸಲಹಾ ಸಮಿತಿ ಸದಸ್ಯರು, ಸಹಕಾರಿ ಧುರಿಣರು, ಗಣ್ಯರು, ಇತರರು ಇದ್ದರು.
