ದಾಸ ಸಾಹಿತ್ಯದಲ್ಲಿ ಕನಕದಾಸರಿಗೆ ಶ್ರೇಷ್ಠ ಸ್ಥಾನವಿದೆ: ರಮೇಶ ಹಾಲಣ್ಣವರ
ಬೆಟಗೇರಿ:ಕನಕದಾಸರು ರಚಿಸಿದ ಕೃತಿಗಳು ಇಂದಿಗೂ ಸಹ ಜನಸಾಮಾನ್ಯರ ನಾಲಿಗೆಯ ಮೇಲೆ ನಲಿದಾಡುತ್ತಿವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕನಕದಾಸ ಅಭಿಮಾನಿ ಬಳಗದ ಸಂಚಾಲಕ ರಮೇಶ ಹಾಲಣ್ಣವರ ಹೇಳಿದರು.
ಬೆಟಗೇರಿ ಗ್ರಾಮದ ಕನಕದಾಸÀ ಅಭಿಮಾನಿ ಬಳಗದ ಸಹಯೋಗದಲ್ಲಿ ಸೋಮವಾರ ನ.22 ರಂದು ನಡೆದ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾರಸ್ವತ ಲೋಕದ ದಾಸ ಸಾಹಿತ್ಯದಲ್ಲಿ ಕನಕದಾಸರಿಗೆÉ ಶ್ರೇಷ್ಠ ಸ್ಥಾನವಿದೆ ಎಂದರು.
ಸುರೇಶ ವಡೇರ ಸಾನಿಧ್ಯ ವಹಿಸಿ ಕನಕದಾಸರ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ನೆರವೇರಿಸಿದರು. ಸ್ಥಳೀಯ ಕನಕದಾಸ ವೃತ್ತದಲ್ಲಿ ಪುತ್ಥಳಿಗಳಿಗೆ ಪೂಜೆ, ಪುಷ್ಪಾರ್ಪನೆ, ಸಿಹಿ ವಿತರಣೆ ಕಾರ್ಯಕ್ರಮ ಜರುಗಿತು.
ಎಮ್.ಎ.ಹೊರಟ್ಟಿ, ಬಿಡಿ.ಚಂದರಗಿ, ಭೀಮಶಿ ಬಾಣಸಿ, ಮಹಾದೇವ ತಪಸಿ, ವಿಠಲ ಚಂದರಗಿ, ಬಸು ಬಂಡಿಗಣಿ, ಮಹಾನಿಂಗ ಕುರಿ, ನಾಗಪ್ಪ ಉದಗಟ್ಟಿ, ಮಾಯಪ್ಪ ಕೋಣಿ, ಕನಕಶ್ರೀ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರು, ಕನಕದಾಸÀ ಅಭಿಮಾನಿ ಬಳಗದ ಸದಸ್ಯರು, ಗಣ್ಯರು, ಯುವಕರು, ಸ್ಥಳೀಯರು ಇದ್ದರು. .