Breaking News
Home / Recent Posts / ಸಶಕ್ತ ಭಾರತ ದೇಶದ ನಿರ್ಮಾಣದಲ್ಲಿ ಸದೃಢ ಯುವಕರ ಪಾತ್ರ ಅತ್ಯಂತ ಮಹತ್ವದಾಗಿದೆ- ಸಿಪಿಐ ವೆಂಕಟೇಶ ಮುರನಾಳ

ಸಶಕ್ತ ಭಾರತ ದೇಶದ ನಿರ್ಮಾಣದಲ್ಲಿ ಸದೃಢ ಯುವಕರ ಪಾತ್ರ ಅತ್ಯಂತ ಮಹತ್ವದಾಗಿದೆ- ಸಿಪಿಐ ವೆಂಕಟೇಶ ಮುರನಾಳ

Spread the love

ಬೆಟಗೇರಿ:ಸಶಕ್ತ ಭಾರತ ದೇಶದ ನಿರ್ಮಾಣದಲ್ಲಿ ಸದೃಢ ಯುವಕರ ಪಾತ್ರ ಅತ್ಯಂತ ಮಹತ್ವದಾಗಿದೆ. ಬಾಲಕರು ಭವಿಷ್ಯತ್ತಿನ ಭಾರತದ ಶಿಲ್ಪಿಗಳಾಗಿದ್ದಾರೆ. ಪೊಲೀಸ್ ಇಲಾಖೆ ಮತ್ತು ನಾಗರಿಕರ ನಡುವೆ ಸ್ನೇಹ, ಸೌಹಾರ್ದತೆ ಅವಶ್ಯಕವಾಗಿದೆ ಎಂದು ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಹೇಳಿದರು.


ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಡಿ.2ರಂದು ಸ್ಟೂಡೆಂಟ್ ಪೊಲೀಸ್ ಕೆಡೆಟ್ ನೂತನ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿ, ಪರಿಸರ ಪ್ರಜ್ಞೆ,, ಪರಧರ್ಮ, ದುಶ್ಚಟಗಳ ನಿರ್ಮೂಲನೆ ಸೇರಿದಂತೆ ಮಾನವೀಯ ಮೌಲ್ಯಗಳನ್ನು ಅನುಷ್ಠಾನ ತರುವಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಗುರುತರ ಹೊಣೆ ಹೊಂದಿದೆ. ಮಕ್ಕಳು ಯಾವುದೇ ದುಶ್ಚಟಗಳಿಗೆ ದಾಸರಾಗಬಾರದು ಎಂದರು.
ಸ್ಥಳೀಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋಕಾಕ ಚರ್ಮರೋಗ ತಜ್ಞ ಡಾ.ಪ್ರಮೋದ ಎತ್ತಿನಮನಿ ಅವರು ಫೀಟ್ ಇಂಡಿಯಾ ಅಭಿಯಾನದಡಿಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯದ ಕುರಿತು, ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಗೋವಿಂದೇಗೌಡ ಪಾಟೀಲ ಮತ್ತು ಬೆಳಗಾವಿ ಕೆಎಸ್‍ಆರ್‍ಪಿ ಡ್ರೀಲ್ ಬೋಧಕ ಶ್ರೀನಿವಾಸಗೌಡರ ಅವರು, ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆ ಮತ್ತು ತರಬೇತಿ ಸದುಪಯೋಗದ ಕುರಿತು ಮಾತನಾಡಿದರು.
ಪೊಲೀಸ್ ಪೇದೆ ಎಂ.ಬಿ.ಆಡಿನ, ಮಹೇಶ ಕಂಬಾರ, ಶ್ರೀಶೈಲ ಗಾಣಗಿ, ಶಿವಾಜಿ ನೀಲಣ್ಣವರ, ರಾಮಣ್ಣ ಬಳಿಗಾರ, ವಿಠಲ ಕೋಣಿ, ಮೋಹನ ತುಪ್ಪದ, ಜಿ.ಆರ್.ಬಾಗೋಜಿ, ಶುಭಾ ಬಿ., ಬಿ.ಬಿ.ಬಿರಾದಾರ, ಎ.ಬಿ.ತಾಂವಶಿ, ಪಿ.ಎಂ.ಕುರಬೇಟ, ಶಾಲೆಯ ಎಸ್‍ಡಿಎಂಸಿ ಸದಸ್ಯರು, ಶಿಕ್ಷಕರು, ಅತಿಥಿ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ