ಬೆಟಗೇರಿ: ಭಾರತ ದೇಶ ಧಾರ್ಮಿಕ ಸಂಪ್ರದಾಯ, ಆಚರಣೆ, ಸಂಸ್ಕøತಿ ಪರಂಪರೆಯಲ್ಲಿ ಶ್ರೇಷ್ಠ ಸ್ಥಾನದಲ್ಲಿದೆ. ಪ್ರತಿಯೊಬ್ಬರು ನಾಡಿನ ಸಂಸ್ಕøತಿ, ಸಂಪ್ರದಾಯಗಳನ್ನು ಉಳಿಸಿ ಬೆಳಸಬೇಕಿದೆ ಎಂದು ಮಮದಾಪೂರ ಚಿಂತಾಮನಿ ಪಾವಟೆ ಪ್ರೌಢ ಶಾಲೆ ಮುಖ್ಯೋಪಾಧ್ಯಯ ಅಶೋಕ ತೋಟಗಿ ಹೇಳಿದರು.
ಸಮೀಪದ ಮಮದಾಪೂರ ಏಳು ಕೋಣೆ ಬಸವೇಶ್ವರ ದೇವಸ್ಥಾನದಲ್ಲಿ ಮೂಡಲಗಿ ಕೇಂದ್ರ ಹಾಗೂ ಕೌಜಲಗಿ ವಲಯದ ಶ್ರೀಕ್ಷೇಧಗ್ರಾಯೋ, ಮಮದಾಪೂರ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಡಿ.13 ರಂದು ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಮಾತನಾಡಿದರು.
ಸ್ಥಳೀಯ ನಿವೃತ್ತ ಉಪನ್ಯಾಸಕ ಬಿ.ಜಿ.ಪಾವಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ನೆಮ್ಮದಿ ಅವಶ್ಯಕವಾಗಿದೆ. ಡಾ.ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿರುವ ಕಾರ್ಯಗಳು ಶ್ಲಾಘನೀಯವಾಗಿವೆ ಎಂದರು.
ಬೆಳಗಾವಿ ಜಿಲ್ಲಾ-2 ಗೋಕಾಕ ವಿಭಾಗದ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಗ್ರಾಮಾಭಿವೃದ್ದಿ ಯೋಜನೆಯೂ ಕೇವಲ ಸಾಲ ನೀಡುವ ಉದ್ದೇಶಕ್ಕಾಗಿ ಪ್ರಾರಂಭವಾಗಿಲ್ಲ. ಮಹಿಳೆಯರಲ್ಲಿ ಸಂಘಟನಾ ಶಕ್ತಿ ರೂಪಿಸುವ, ಧಾರ್ಮಿಕ ಕಾರ್ಯಕ್ರಮ, ಪರಿಸರ ಜಾಗೃತಿ, ಸ್ವಾಸ್ಥ ಸಂಕಲ್ಪ, ಕೃಷಿ, ಸ್ವಚ್ಛ ಭಾರತ ಅಭಿಯಾನಗಳ ಜೊತೆಯಲ್ಲಿ ನಿರುದ್ಯೋಗದ ಸಮಸ್ಯೆಗಳನ್ನು ದೂರು ಮಾಡುವ ಉದ್ಧೇಶದಿಂದ ಯೋಜನೆ ಪ್ರಾರಂಭವಾಗಿದೆ ಎಂದರು.
ಮಮದಾಪೂರ ಚರಮೂರ್ತಿಶ್ವರ ಸ್ವಾಮಿಜಿ ದಿವ್ಯ ಸಾನಿಧ್ಯ, ಶಿವಯ್ಯ ಹಿರೇಮಠ ಸಮ್ಮುಖ, ದ್ದರು. ಯುವ ಮುಖಂಡ ಸುರೇಶ ಸನದಿ ಅತಿಥಿಗಳಾಗಿ ಮಾತನಾಡಿದರು. 101 ಜನ ದಂಪತಿಗಳು ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಪಂ ಮಾಜಿ ಸದಸ್ಯ ಸಿದ್ದಪ್ಪ ಕಮತ, ಗ್ರಾ.ಪಂ ಅಧ್ಯಕ್ಷ ಶಿವನಗೌಡ ಕಮತ, ಸುರೇಶಗೌಡ ಪಾಟೀಲ, ಮಹಾಂತೇಶ ಜನ್ಮಟ್ಟಿ, ಮೂಡಲಗಿ ಕೇಂದ್ರ ಶ್ರೀಕ್ಷೇಧಗ್ರಾಯೋ ಯೋಜನಾಧಿಕಾರಿ ದೇವರಾಜ ನಾಯ್ಕ, ಕೌಜಲಗಿ ವಲಯದ ಮೇಲ್ವಿಚಾರಕ ಗುರುರಾಜ ಹಾದಿಮನಿ, ರಾಘವೇಂದ್ರ ಪಟಗಾರ, ಈರಣ್ಣ ಅಂಗಡಿ, ಬಾಹುಬಲಿ ಬಾಗೇವಾಡಿ, ವಿಜಯಾ ಚಲವಾದಿ, ಈರಪ್ಪ ಸೊಂಡೊರ, ರವೀಂದ್ರ ಮನ್ನಿಕೇರಿ, ಪೂಜಾ ಸಮಿತಿ ಸದಸ್ಯರು, ಕೌಜಲಗಿ ವಲಯದ ಎಲ್ಲ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಸ್ವ ಸಹಾಯ ಸಂಘದ ಸದಸ್ಯರು, ನವ ಜೀವನ ಸಮಿತಿ ಸದಸ್ಯರು, ಗಣ್ಯರು, ಗ್ರಾಮಸ್ಥರು ಇದ್ದರು.
