ಜೂ.12 ರಿಂದ ಜೂ.14ರ ಬೆಳಗ್ಗೆ 6 ಗಂಟೆ ತನಕ ಬೆಟಗೇರಿ ಗ್ರಾಮ ಸಂಪೂರ್ಣ ಲಾಕ್
ಬೆಟಗೇರಿ:ಕರೊನಾ ಎರಡನೇ ಅಲೆ ಮಟ್ಟಹಾಕುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳ ಆದೇಶದ ಮಾರ್ಗಸೂಚಿಯಂತೆ ಶನಿವಾರ ಜೂ.12 ಮತ್ತು ಜೂ.13 ಹಾಗೂ ಜೂ.14ರ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಅಗತ್ಯ ಸೇವೆ ಹೊರತುಪಡಿಸಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸಂಪೂರ್ಣ ವಿಕೆಂಡ್ ಲಾಕ್‍ಡೌನ್ ಜಾರಿಗೊಳಿಸಲಾಗಿದೆ ಎಂದು ಕುಲಗೋಡ ಪೊಲೀಸ್ ಠಾಣೆಯ ಸ್ಥಳೀಯ ಬೀಟ್ ಪೊಲೀಸ್ ಪೇದೆ ಕಲ್ಮೇಶ ಬಾಗಲಿ ಹೇಳಿದ್ದಾರೆ.
ಬೆಟಗೇರಿ ಗ್ರಾಮ ಪಂಚಾಯತಿ ಗ್ರಾಮ ಪಂಚಾಯತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಕರೋನಾ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಆದೇಶದ ಮಾರ್ಗಸೂಚಿ ನಿಯಮಗಳನ್ನು ಗ್ರಾಮದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಹಿನ್ನಲೆಯಲ್ಲಿ ಶುಕ್ರವಾರ ಜೂ.11ರಂದು ಇಲ್ಲಿಯ ಪ್ರಮುಖ ಸ್ಥಳ, ಬೀದಿಗಳಲ್ಲಿ ಧ್ವನಿವರ್ದಕದ ಮೂಲಕ ಪ್ರಚಾರ ಕೈಗೊಂಡು ಮಾತನಾಡಿದರು.
ಬೆಳಗಾವಿ ಜಿಲ್ಲಾಧಿಕಾರಿಗಳ ಆದೇಶದಂತೆ, ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ, ಗೋಕಾಕ ಮತ್ತು ಮೂಡಲಗಿ ಪೊಲೀಸ್ ಠಾಣೆಗಳ ಮೇಲಾಧಿಕಾರಿಗಳ ಹಾಗೂ ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಹನಮಂತ ನರಳೆ ಅವರ ಮಾರ್ಗದರ್ಶನದಂತೆ ಜೂ.11ರಿಂದ ಜೂ.14ರ ಬೆಳಗ್ಗೆ 6 ಗಂಟೆವರೆಗೆ ಯಾರೂ ಅನವಶ್ಯಕವಾಗಿ ತಿರುಗಾಡುವುದು ಮಾಡಬಾರದು. ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸುವುದರ ಜೋತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕರೊನಾ ವೈರಸ್ ನಿಯಂತ್ರಣಾ ಕ್ರಮಗಳನ್ನು ತಪ್ಪದೇ ಅನುಸರಿಬೇಕು. ಪ್ರತಿಯೊಬ್ಬರಿಗೂ ಜೀವವಿದ್ದರೆ ಜೀವನ, ಕರೋನಾ ಬಗ್ಗೆ ಭಯಪಡಬೇಡಿ, ಮನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯ ಬೀಟ್ ಪೊಲೀಸ್ ಪೇದೆ ಕಲ್ಮೇಶ ಬಾಗಲಿ ತಿಳಿಸಿದರು.
ಬೆಟಗೇರಿ ಗ್ರಾಮದಲ್ಲಿ ವಿಕೆಂಡ್ ಲಾಕ್‍ಡೌನ್ ಜಾರಿಗೊಳಿಸಲಾದ ಕುರಿತು ಸ್ಥಳೀಯ ಪ್ರಮುಖ ಸ್ಥಳ, ಬೀದಿಗಳಲ್ಲಿ ಧ್ವನಿವರ್ದಕದ ಮೂಲಕ ಪ್ರಚಾರ ಕೈಗೊಂಡು ಸ್ಥಳೀಯರಲ್ಲಿ ಗ್ರಾಪಂ ಸಿಬ್ಬಂದಿ, ಪೊಲೀಸ್ ಪೇದೆ ಕಲ್ಮೇಶ್ ಬಾಗಲಿ ಮನವರಿಕೆ ಮಾಡಿದರು.
ಬಾಕ್ಸ್ ಐಟಮ್: ಭಾನುವಾರ ಸಂತೆ ರದ್ದು: ಇನ್ನೂ ಲಾಕ್ ಡೌನ್ ಸಂಪೂರ್ಣ ತೆರವಾಗಿಲ್ಲಾ, ಆದ್ದರಿಂದ ಬೆಟಗೇರಿ ಗ್ರಾಮದಲ್ಲಿ ಜೂ.12 ರಂದು ನಡೆಯಬೇಕಾಗಿದ್ದ ಭಾನುವಾರ ಸಂತೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಗ್ರಾಮದ ಹಾಗೂ ಸುತ್ತಲಿನ ಹತ್ತೂರಿನ ನಾಗರಿಕರು, ರೈತರು, ಅಂಗಡಿ-ಮುಂಗಟ್ಟು ವ್ಯಾಪಾರಸ್ಥರು ಜೂ.12ರ ರವಿವಾರದ ಸಂತೆಗೆ ಯಾರೂ ಬರದೇ ಕರೊನಾ 2ನೇ ತಡೆಗಟ್ಟುವ ನಿಟ್ಟಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಸಹಕರಿಸಬೇಕು ಎಂದು ಸ್ಥಳೀಯ ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ ಕೋರಿದ್ದಾರೆ.
ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಬಸವರಾಜ ಪಣದಿ, ಈರಣ್ಣ ದಂಡಿನ, ಮಂಜು ಕಂಬಿ, ಶಿವಾನಂದ ಐದುಡ್ಡಿ, ಗ್ರಾಪಂ ಮತ್ತು ಪಿಎಚ್‍ಸಿ ಸಿಬ್ಬಂದಿ, ಮತ್ತೀತರರು ಇದ್ದರು.