ಬೆಟಗೇರಿ ಸುತ್ತಮುತ್ತ ಮಂಜು ಬಿದ್ದರಿಂದ ಆತಂಕದಲ್ಲಿ ರೈತರು.!
ಬೆಟಗೇರಿ:ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಶನಿವಾರ ಡಿ.25 ರಂದು ಬೆಳಗ್ಗೆ 6.30 ಗಂಟೆಯಿಂದ 9.30 ಗಂಟೆವರೆಗೆ ಹೊಗೆ ಮಿಶ್ರಿತ ನೀರು ಮಂಜು ಬಿದ್ದಿದ್ದರಿಂದ ಇಲ್ಲಿಯ ಮುಖ್ಯ ರಸ್ತೆಗಳ ಮೇಲೆ ಸಂಚರಿಸುವ ದ್ವಿಚಕ್ರ ವಾಹನ ಸೇರಿದಂತೆ ವಿವಿಧ ವಾಹನ ಚಾಲಕರು ಮುಂದೆ ಸಾಗಲು ದಾರಿ ಕಾಣದೇ ಹರಸಾಹಸ ಮಾಡುವಂತಾಗಿತ್ತು.
ಒಂದಡೆ ಇಲ್ಲಿಯ ರಸ್ತೆಗಳ ಮೇಲೆ ವಾಹನ ಸವಾರರು ಜೀವಭಯದಲ್ಲಿ ಓಡಾಡುವ ದುಸ್ಥಿತಿ ಎದುರಾದರೆ, ಇನ್ನೂಂದಡೆ ಮಂಜು ಆವರಿಸುತ್ತಿವುದರಿಂದ ಗೋಧಿ, ಸದಕ, ಕಡಲೆ, ತರಕಾರಿ ಬೆಳೆಗಳು ಸೇರಿದಂತೆ ಹೂವು ಬಿಟ್ಟಿರುವ-ಬಿಡುತ್ತಿರುವ ಕೆಲವು ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗುವ ಆತಂಕದ ಪರಿಸ್ಥಿತಿ ಸ್ಥಳೀಯ ರೈತರನ್ನು ಚಿಂತಿತರನ್ನಾಗಿಸಿದೆ.
ಕಳೆದ ಎರಡ್ಮೂರು ವರ್ಷಗಳಿಂದ ಒಂದಿಲ್ಲೊಂದು ಪ್ರಕೃತಿ ವಿಕೂಪಕ್ಕೆ ರೈತರು ತುತ್ತಾಗಿ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಹೊಗೆ ಅಥವಾ ನೀರಿನ ಮಂಜು ನಿತ್ಯ ಹೀಗೆಯೇ ಬೀಳುವುದರಿಂದ ಗೋಧಿ, ಸದಕ, ಕಡಲೆ ಮತ್ತು ಮಾವು ಸೇರಿದಂತೆ ತೋಟಗಾರಿಕೆ ಕೆಲವು ಬೆಳೆಗಳ ಹೂವು ಕಾಯಿ ಹಿಡಿಯದೇ ಕತ್ತರಿಸಿ ನೆಲಕ್ಕೆ ಬಿದ್ದು ಬೆಳೆಗಳು ಪೂರ್ಣ ಹಾಳಾಗುತ್ತವೆ. ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಈ ಭಾಗದ ರೈತರಿಗೆ ಬೆಳೆಗಳ ಸಂರಕ್ಷಣೆ ಕುರಿತು ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಅಂಬುವುದು ಸ್ಥಳೀಯ ರೈತರು ಹೇಳಿದ್ದಾರೆ.
ವರದಿ: ಅಡಿವೇಶ ಮುಧೋಳ.