ಬೆಟಗೇರಿ: ಗ್ರಾಮದ ಮಾರುತಿ ದೇವರ ದೇವಾಲಯದಲ್ಲಿ ಕಾರ್ತಿಕೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಡಿ.25 ರಂದು ಸಂಭ್ರಮದಿಂದ ನಡೆದವು.
ಬೆಳೆಗ್ಗೆ 6 ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಕುಂಕುಮ, ಎಲೆ ಪೂಜೆ ಜರುಗಿ, ಪುರ ಜನರಿಂದ ಪೂಜೆ, ನೈವೈದ್ಯ ಸಮರ್ಪನೆ, ರಾತ್ರಿ 7 ಗಂಟೆಗೆ ದೀಪೋತ್ಸವ, ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಕಾಯಿ, ಕಾರಿಕ ಹಾರಿಸುವ, ಸಿಹಿ ಹಂಚುವದು ವೈಭವದಿಂದ ನಡೆಯಿತು.
ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ತಾಪಂ ಗ್ರಾಪಂ, ಹಾಲಿ. ಮಾಜಿ ಸದಸ್ಯರು, ಗಣ್ಯರು ದೇಪ ಹಚ್ಚುವುದರ ಮೂಲಕ ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ ಕರಡಿ ಮಜಲು ತಂಡದವರಿಂದ ಕರಡಿ ಮತ್ತು ಕಣಿ ವಾದನ ನಡೆಯಿತು. ಮಹಾಪ್ರಸಾದ ಜರುಗಿದ ಬಳಿಕ ಕಾರ್ತಿಕೋತ್ಸವ ಸಂಪನ್ನಗೊಂಡಿತು. ಸ್ಥಳೀಯ ಗಣ್ಯರು, ಗ್ರಾಮಸ್ಥರು, ಭಕ್ತರು, ಕಾರ್ತಿಕೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಇತರರು ಇದ್ದರು.