ಜ.9 ಮತ್ತು 16ರ ದಿನ ಸೇರಬೇಕಿದ್ದ ಬೆಟಗೇರಿ ಗ್ರಾಮದ ರವಿವಾರ ಸಂತೆ ಸಂಪೂರ್ಣ ರದ್ದು
ಬೆಟಗೇರಿ:ಕರೋನಾ ಮತ್ತು ಓಮಿಕ್ರಾನ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯಾದಾಂತ್ಯ ವಿಕೆಂಡ್ ಕಫ್ರ್ಯೂ ಜಾರಿ ಮಾಡಿರುವ ಹಿನ್ನಲೆಯಲ್ಲಿ ಬೆಟಗೇರಿ ಗ್ರಾಮದಲ್ಲಿ ಜ.9, ಜ.16ರ ದಿನಗಳಂದು ಸೇರಬೇಕಿದ್ದ ರವಿವಾರದ ಸಂತೆಯನ್ನು ಸಂಪೂರ್ಣ ರದ್ದು ಮಾಡಲಾಗಿದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಸಹಕರಿಸಬೇಕು ಎಂದು ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಚ್.ಎನ್.ಬಾವಿಕಟ್ಟಿ ತಿಳಿಸಿದ್ದಾರೆ.
ಜ.7ರಂದು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಬೆಟಗೇರಿ ಗ್ರಾಮದಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಕರೊನಾ ಮತ್ತು ಓಮಿಕ್ರಾನ್ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು, ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಸ್ಥಳೀಯರು ಅನುಸರಿಸಬೇಕು ಎಂದು ಪಿಡಿಒ ಎಚ್.ಎನ್.ಬಾವಿಕಟ್ಟಿ ಅವರು ಮನವಿ ಮಾಡಿಕೊಂಡಿದ್ದಾರೆ.
IN MUDALGI Latest Kannada News