ಬೆಟಗೇರಿ:ಗ್ರಾಮದ ಬೀರಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ, ದಾನಿಗಳಿಗೆ ಸತ್ಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೇ.28ರಿಂದ ಮೇ.30 ರವರೆಗೆ ನಡೆಯಲಿದೆ.
ಮೇ.28ರಂದು ಬೆಳಗ್ಗೆ 6 ಗಂಟೆಗೆ ಬೀರಸಿದ್ದೇಶ್ವರ ದೇವರ ಗದ್ದುಗೆಗೆ ಪೂಜೆ, ಅಭಿಷೇಕ ಬಳಿಕ ಜಾತ್ರಾಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಸಾಯಂಕಾಲ 5 ಗಂಟೆಗೆ ಪುರದೇವರ ಹಾಗೂ ಪರಸ್ಥಳದ ವಿವಿಧ ದೇವರ ವಾಲಗ ಕೂಡುವವು, ಮಮದಾಪುರದ ಬೀರಸಿದ್ದೇಶ್ವರ, ಗೋಸಬಾಳ ಬೀರಸಿದ್ಧೇಶ್ವರ, ಮುಗಳಿಹಾಳದ ಮಾಳಿಂಗರಾಯ ದೇವರ ಪಲ್ಲಕ್ಕಿ ಬರಮಾಡಿಕೊಳ್ಳುವದು, ರಾತ್ರಿ 10 ಗಂಟೆಗೆ ಮುಗಳಿಹಾಳ ಮಾಳಿಂಗೇಶ್ವರ ಗಾಯನ ಸಂಘ ಹಾಗೂ ಹಳ್ಳೂರ ಅಮೋಘಸಿದ್ಧೇಶ್ವರ ಗಾಯನ ಸಂಘದವರಿಂದ ಡೊಳ್ಳಿನ ಪದಗಳ ಗಾಯನ ಜರುಗಲಿದೆ.
ಮೇ29ರಂದು ಬೆಳಗ್ಗೆ 6 ಗಂಟೆಗೆ ಬೀರಸಿದ್ದೇಶ್ವರ ದೇವರ ಗದ್ದುಗೆ ಮಹಾಪೂಜೆ, ವiಹಾಭಿಷೇಕ, ಮುಂಜಾನೆ 8 ಗಂಟೆಗೆ ಪಲ್ಲಕ್ಕಿ ಉತ್ಸವ, ನರಗುಂದ ಶ್ರೀಚಕ್ರ ಮಹಿಳಾ ಕಲಾ ತಂಡವರಿಂದ ಡೊಳ್ಳು ಕುಣಿತ, ಮುಂಜಾನೆ11:30ಗಂಟೆಗೆ ದಾನಿಗಳಿಗೆ ಸತ್ಕಾರ ಸಮಾರಂಭ ಬಳಿಕ ಮಹಾಪ್ರಸಾದ ನಡೆಯಲಿದ್ದು, ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ಮಮದಾಪೂರದ ಮೌನ ಮಲ್ಲಿಕಾರ್ಜುನ ಸ್ವಾಮಿಜಿ ದಿವ್ಯ ಸಾನಿಧ್ಯ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಮಾರಂಭ ಉದ್ಘಾಟಿಸಲಿದ್ದು, ಕೌಜಲಗಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಅಧ್ಯಕ್ಷತೆ, ಗ್ರಾಪಂ ಅಧ್ಯಕ್ಷೆ ಬಸವ್ವ ದೇಯಣ್ಣವರ, ಉಪಾಧ್ಯಕ್ಷ ಬಸವಂತ ಕೋಣಿ, ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಸಂತ-ಶರಣರು, ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಅನ್ನಸಂತರ್ಪನೆ ನಡೆದು, ಮಧ್ಯಾಹ್ನ 2 ಗಂಟೆಗೆ ಹಾಲಲ್ಲಿ, 3 ಗಂಟೆಗೆ ನಾಲ್ಕು ಹಲ್ಲಿನ, ಸಾಯಂಕಾಲ 4 ಗಂಟೆಗೆ ಓಪನ್ ಟಗರಿನ ಕಾಳಗ ಸ್ಪರ್ಧೆ ನಡೆದ ಬಳಿಕ ವಿಜೇತರಾದವರಿಗೆ ನಗದು ಬಹುಮಾನ, ಪ್ರಶಸ್ತಿ ವಿತರಣೆ ಜರುಗಲಿದೆ.
ಮೇ.30ರಂದು ಮುಂಜಾನೆ 8 ಗಂಟಗೆ ಬೀರಸಿದ್ದೇಶ್ವರ ದೇವರ ಗದ್ದುಗೆ ಪೂಜೆ, ಅಭಿಷೇಕ, ಭಂಢಾರ ಒಡೆಯುವ ಕಾರ್ಯಕ್ರಮದ ಬಳಿಕ ಜಾತ್ರಾ ಮಹೋತ್ಸವ ಸಮಾರೊಪಗೊಳ್ಳಲಿದೆ. ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವವರು ಮೊ.ನಂ. 9902897489,9880850851 ಗೆ ಸಂಪರ್ಕಿಸಬೇಕೆಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸುಭಾಷ ಕರೆಣ್ಣವರ, ಉಪಾಧ್ಯಕ್ಷ ಮಾಯಪ್ಪ ಬಾಣಸಿ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.