ಬೆಟಗೇರಿ:ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಶರನವರಾತ್ರಿಯ ಅಂಗವಾಗಿ ಆಯೋಜಿಸಿರುವ ಶ್ರೀದೇವಿ ಪುರಾಣ ಪ್ರವಚನ ಮಂಗಲೋತ್ಸವ ಮತ್ತು 286ನೇ ಬಸವ ಸ್ಮøತಿ ಮಾಸಿಕ ಶಿವಾನುಭವ ಹಾಗೂ ಶಿರಹಟ್ಟಿ ಫಕೀರೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ರವಿವಾರ ಅ.9 ರಂದು ಸಾಯಂಕಾಲ 4 ಗಂಟೆಗೆ ನಡೆಯಲಿದೆ.
ಸ್ಥಳೀಯ ಮೌನಮಲ್ಲಿಕಾರ್ಜುನ ಶ್ರೀಮಠದಲ್ಲಿ 286ನೇ ಬಸವ ಸ್ಮøತಿ ಮಾಸಿಕ ಶಿವಾನುಭವೋತ್ಸವವು ಸಂಜೆ 7ಗಂಟೆಗೆ ನಡೆಯಲಿದ್ದು, ಇಲ್ಲಿಯ ಶ್ರೀಮಠದ ಮೌನಮಲ್ಲಿಕಾರ್ಜುನ ಶಿವಯೋಗಿಗಳ ಅಧ್ಯಕ್ಷತೆ, ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ, ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಸಂಸ್ಥಾನಮಠದ ನೂತನ ಉತ್ತರಾಧಿಕಾರಿ ಫಕೀರದಿಂಗಾಲೇಶ್ವರ ಮಹಾಸ್ವಾಮಿಜಿ ಸಾನಿಧ್ಯ ವಹಿಸಲಿದ್ದಾರೆ.
ಆಗಮಿತ ನಾಡಿನ ಸಕಲ ಹರ-ಗುರು, ಚರಮೂರ್ತಿಗಳ ಸಮ್ಮುಖದಲ್ಲಿ, ಆಗಮಿತ ಗಣ್ಯಮಾನ್ಯರು ಅತಿಥಿ ಸ್ಥಾನದ ಉಪಸ್ಥಿತಿಯಲ್ಲಿ ಪ್ರವಚನ ಜರುಗಲಿದೆ. ಕರಡಿಗುದ್ದಿಯ ವಿರುಪಾಕ್ಷ ರಾಚಣ್ಣವರ ಅನ್ನ ದಾಸೋಹ ಸೇವೆ ನೆರವೇರಿಸಲಿದ್ದಾರೆ. ಮಮದಾಪೂರದ ಚಿದಾನಂದ ಪಟಾತ ಅವರಿಂದ ಸಂಗೀತ ಸೇವೆ, ಕುಮಾರಿ ಲಕ್ಷ್ಮೀ ಒಡೆಯರ ಹಾಗೂ ಸಂಗಡಿಗರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸಂತ-ಶರಣರು, ಗಣ್ಯರು ಸೇರಿದಂತೆ ಶ್ರೀಮಠದಲ್ಲಿ ಆಯೋಜಿಸಿರುವ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು ಪುರಾಣ ಪ್ರವಚನ ಮಂಗಲೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಇಲ್ಲಿಯ ಮೌನ ಮಲ್ಲಿಕಾರ್ಜುನ ಮಠದ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಕ ಸಮಿತಿ ಸಂಚಾಲಕ ಮಂಜುನಾಥ ಶರಣರು ಪ್ರತಿಕಾ ಪ್ರಕಟನೆಗೆ ತಿಳಿಸಿದ್ದಾರೆ.
Check Also
ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ
Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …