ಮೂಡಲಗಿ : ರೈತಾಪಿ ವರ್ಗದ ಸದಸ್ಯರುಗಳ ಖರ್ಚು ಕಡಿಮೆ ಮಾಡಿ ಆದಾಯ ಮೂಲಗಳನ್ನು ಹೆಚ್ಚಿಸಲು ಪ್ರೋತ್ಸಾಹಕ ಯೋಜನೆಗಳನ್ನು ಸಮರ್ಪಕವಾಗಿ ನೀಡುವದು. ರೈತರ ಉತ್ಪನ್ನಗಳನ್ನು ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ನೇರ ಮಾರುಕಟ್ಟೆ ಸೌಲಭ್ಯ ಒದಗಿಸುವದು ರಾಯಣ್ಣ ಕುರಿ ಮತ್ತು ಆಡು ಉತ್ಪಾದಕರ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಾರೋಡ ಪಡೆಪ್ಪಗೋಳ ತರಭೇತಿಯಲ್ಲಿ ಹೇಳಿದರು.
ಅವರು ತಾಲೂಕಿನ ಭೈರನಟ್ಟಿ ಗ್ರಾಮದಲ್ಲಿ ವಿವಿದೆಡೆ ಕುರಿಗಾಹಿಗಳಿಗೆ ತರಭೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು. ಕುರಿಗಾರರಿಗೆ ಕುರಿಗಳ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವದು ಅತ್ಯವಶ್ಯಕವಾಗಿದೆ. ಕುರಿಗಳಿಗೆ ಅವಶ್ಯಕವಿರುವ ಔಷಧೋಪಚಾರ, ಸುಧಾರಿತ ತಳಿಗಳ ಬಗ್ಗೆ ಹೆಚ್ಚಿನ ಅರಿವು ಕುರಿಗಾಹಿಗಳು ತಿಳಿಯ ಬೇಕು. ಸಂಸ್ಥೆಯವತಿಯಿಂದ ಅನೇಕ ಯೋಜನೆಗಳಿದ್ದು ಅವುಗಳನ್ನು ಸಮರ್ಪಕ ರೀತಿಯಲ್ಲಿ ಉಪಯೋಗ ಪಡೆದುಕೋಳ್ಳ ಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಉದ್ದಪ್ಪ ಖಿಲಾರಿ, ಸಚಿನ ದೊಡ್ಡಶಿವಪ್ಪಗೋಳ ಹಾಗೂ ಬೈರನಟ್ಟಿ, ಹೊಸಟ್ಟಿಯ ಕುರಿಗಾಹಿಗಳು ತರಭೇತಿ ಕಾರ್ಯಕ್ರಮದಲ್ಲಿದ್ದರು.
ಪೋಟೋ ಫೈಲ್ ನಂ > 2ಎಮ್.ಡಿ.ಎಲ್.ಜಿ1ಎ