ಕೊರೊನಾ ಭೀತಿ : ಶ್ರೀಶೈಲ ಪಾದಯಾತ್ರೆಯಿಂದ ಬಂದಂತಹ ಭಕ್ತಾದಿಗಳಿಗೆ ದಿನವೀಡಿ ಕಾಯಿಸಿ ಜಾಗೃತಿ ಮೂಡಿಸದ ಅಧಿಕಾರಿಗಳು
ಮೂಡಲಗಿ : ಸಮೀಪದ ಶಿವಾಪೂರದ ಅಡವಿಸಿದೇಶ್ವರ ದೇವಸ್ಥಾನದಲ್ಲಿ ಎರಡು ದಿನಗಳಿಂದ ಶ್ರೀಶೈಲದಿಂದ ಬಂದಂತಹ ಭಕ್ತಾದಿಗಳಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾ.ಪಂ ಅಧಿಕಾರಿಗಳು ಯಾರು ಬೇಟಿ ಕೂಡದೇ, ಪರಿಶೀಲನೆ ಮಾಡದೆ ಮತ್ತು ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡದೆ, ವೈರಸ್ ಹರಡದಂತೆ ಯಾವ ಮುಂಜಾಗ್ರತಾ ಕ್ರಮಗಳನ್ನು ತಿಳಿಸದೆ ಬೇಜವಾಬ್ದಾರಿ ತೋರಿದ್ದಾರೆ.
ಇಲ್ಲಿಯ ಶಿವಾಪೂರ ಮಠದ ಅಡವಿಸಿದೇಶ್ವರ ಮಠದಲ್ಲಿ ತಂಗಿದ ಶ್ರೀಶೈಲಕ್ಕೆ ತೇರಳಿ ಮರಳಿದ ಸುಮಾರು 68 ಭಕ್ತಾದಿಗಳು ಇಲ್ಲಿ ಉಳಿದ್ದಿದ್ದಾರೆ.
ಈ ವಿಷಯ ತಿಳಿದ ಸಾವ೯ಜನಿಕರೆ ವೈದ್ಯಾಧಿಕಾರಿಗಳ ಗಮನಕ್ಕೆ ತಂದರು ಇನ್ನು ವರೆಗೆ ಕ್ರಮ ಕೈಗೋಳ್ಳದಿದ್ದಾಗ ಸಾವ೯ಜನಿಕರು ಕೊನೆಗೆ ಪತ್ರಕರ್ತರಿಗೆ ವಿಷಯ ಮುಟ್ಟಿಸಿದ್ದಾಗ ಭಕ್ತಾದಿಗಳಿಗೆ ಖುದ್ದಾಗಿ ಭೇಟಿ ಆದಾಗ ತಮ್ಮ ಅಳಲನ್ನು ತೋಡಿಕೊಂಡರು.
ಈ ವರ್ಷವೂ ಯುಗಾದಿ ಮುಗಿದಮೇಲೆ ಸ್ವಗ್ರಾಮಕ್ಕೆ ಆಗಮಿಸಬೇಕಾದ ಭಕ್ತರು ಕೊರೊನಾ ಭೀತಿಯಿಂದ ಯುಗಾದಿ ಮುಂಚಿತವಾಗಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಇದರಿಂದ ಗ್ರಾಮದ ಒಳಗಡೆ ಬರಲು ಅವಕಾಶವಿಲ್ಲ. ಯಾಕೆಂದರೆ ಶ್ರೀಶೈಲದಿಂದ ಕಂಬಿ ಮಲ್ಲಯ್ಯ ಬರುವವರೆಗೂ ಭಕ್ತರು ಊರ ಒಳಗಡೆ ಹೋಗುವಂತಿಲ್ಲ ಎಂಬ ಪದ್ಧತಿ ಇದೆ.
ಇದರ ನಡುವೆ ಭಕ್ತಾದಿಗಳಿಗೆ ಕೊರೊನಾ ಭೀತಿ ಎದುರಾಗಿದಲ್ಲದೆ ಅಧಿಕಾರಿಗಳ ಬೇಜವಾಬ್ದಾರಿಗೆ ಮೌನವಾಗಿದ್ದಾರೆ.
ವರದಿ : ಈಶ್ವರ ಢವಳೇಶ್ವರ
ಮೂಡಲಗಿ