Breaking News
Home / ರಾಜ್ಯ (page 2)

ರಾಜ್ಯ

ಮಹಾಲಕ್ಷ್ಮೀ ದೇವರ ಜಾತ್ರೆಯ ಅಂಗವಾಗಿ ದೇವರ ಬಿಂಬ, ಶಿಖರ, ಕಲಶ, ರಥ, ಗಂಗಾ ಜಲ, ಮೃತ್ತಿಕಗಳ ವೈಭವದ ಮೆರವಣಿಗೆಗೆ ಚಾಲನೆ ನೀಡಿದ- ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಗೋಕಾವಿ ನೆಲದ ಶಕ್ತಿ ದೇವತೆಯಾದ ಮಹಾಲಕ್ಷ್ಮೀ ದೇವರ ಜಾತ್ರೆಯ ಅಂಗವಾಗಿ ದೇವರ ಬಿಂಬ, ಶಿಖರ, ಕಲಶ, ರಥ, ಗಂಗಾ ಜಲ, ಮೃತ್ತಿಕಗಳ ವೈಭವದ ಮೆರವಣಿಗೆಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಿನ್ನೆ ಬುಧವಾರದಂದು ಚಾಲನೆ ನೀಡಿದರು. ನಗರದ ಗುರುವಾರ ಪೇಟೆಯಲ್ಲಿರುವ ಮಹಾಲಕ್ಷ್ಮೀ ಅಮ್ಮನವರ ದೇವಸ್ಥಾನದಿಂದ ಮಹಾಲಕ್ಷ್ಮೀ ದೇವಸ್ಥಾನದವರೆಗೆ ವಿವಿಧ ವಾದ್ಯ ವೃಂದಗಳೊಂದಿಗೆ ಅಪಾರ ಭಕ್ತ ಸಮೂಹದ ಮಧ್ಯ ಮಹಾಲಕ್ಷ್ಮೀ, ಗಣಪತಿ, ಆಂಜನೇಯ, ನಾಗದೇವ, ನವಾಗ್ರಹದೇವರ ಮೂರ್ತಿ ಪ್ರತಿಷ್ಠಾಪನೆ …

Read More »

ಸತೀಶ ಶುಗರ್ಸ್ ನೂತನ ಕಾಂಪ್ರೆಸ್ಡ್ ಬಯೊಗ್ಯಾಸ್ ಉದ್ಘಾಟನಾ ಸಮಾರಂಭ ಜರುಗಿತು.

ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ್ ಶುಗರ್ಸ್ ಕಾರ್ಖಾನೆಯ ಡಿಸ್ಟಿಲರಿ ಘಟಕದಲ್ಲಿ ನೂತನ ಕಾಂಪ್ರೆಸ್ಡ್ ಬಯೊಗ್ಯಾಸ್ ಘಟಕದ ಉದ್ಘಾಟನಾ ಸಮಾರಂಭ ಬುಧವಾರದಂದು ಜರುಗಿತು. ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಹುಲ್ ಸತೀಶ ಜಾರಕಿಹೊಳಿ ಅವರು ನೂತನ ಕಾಂಪ್ರೆಸ್ಡ್ ಬಯೊಗ್ಯಾಸ್ ಘಟಕವನ್ನು ಉದ್ಘಾಟಿಸಿ ಮತ್ತು ಕಾಂಪ್ರೆಸ್ಡ್ ಬಯೊಗ್ಯಾಸ್ ತುಂಬಿದ ವಾಹನಗಳನ್ನು ಹಸಿರು ಬಾವುಟದೊಂದಿಗೆ ಚಾಲನೆ ನೀಡಿ ಮಾತನಾಡಿ ಈ ಇಂಧನವನ್ನು ವಾಹನ ಇಂಧನವನ್ನಾಗಿ ಮತ್ತು ಅಡುಗೆ ಅನಿಲವನ್ನಾಗಿ ಬಳಿಸಲಾಗುತ್ತದೆ. ಈ ಘಟಕದ …

Read More »

ನಾಗನೂರ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ

ಮೂಡಲಗಿ: ತಾಲ್ಲೂಕಿನ ನಾಗನೂರ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಬುಧವಾರದಂದು ಸಾಂಸ್ಕøತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯನ್ನು ಆಚರಿಸಲ್ಲಾಯಿತು. ಈ ಸಮಯದಲ್ಲಿ ಪಂ.ಪಂ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ಮುಖಂಡರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

Read More »

ಸಂಸ್ಕ್ರತಿ ಪರಂಪರೆಯನ್ನು ಯುವಜನಾಂಗ ಗೌರವಿಸಬೇಕು-ಮುರಳಿ ವಜ್ಜರಮಟ್ಟಿ

ಮೂಡಲಗಿ: ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಿ ಮಹಿಮಾ ಪುರುಷರು ಆಶೀರ್ವಾದ ಸರ್ವರಮೇಲೂ ಇರಲಿ, ಸಂಸ್ಕ್ರತಿ ಪರಂಪರೆಯನ್ನು ಯುವಜನಾಂಗ ಗೌರವಿಸಬೇಕು ಎಂದು ಪುಲಗಡ್ಡಿಯ ಮುಖಂಡ ಮುರಳಿ ವಜ್ಜರಮಟ್ಟಿ ಹೇಳಿದರು. ಅವರು ಬುಧವಾರದಂದು ತಾಲೂಕಿನ ಫುಲಗಡ್ಡಿ ಗ್ರಾಮದಲ್ಲಿ ಶ್ರೀ ಗುರು ಚಕ್ರವರ್ತಿ ಸದಾಶಿವ ಶಿವಯೋಗಿ ಆಶ್ರಮದ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಶಿಕ್ಷಣ ಪಡೆದು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಅರಭಾವಿ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ …

Read More »

ಕಲ್ಲೋಳಿಯಲ್ಲಿ ಸಂಭ್ರಮದಲ್ಲಿ ಜರುಗಿದ ಬಸವ ಜಯಂತ್ಯೋತ್ಸವ: ನೂರು ಜೋಡಿ ಎತ್ತುಗಳ ಮೆರವಣಿಗೆ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ಹಾಗೂ ಬಸವ ಕೇಂದ್ರ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಬುಧವಾರ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಅಲಂಕೃತ ಎತ್ತುಗಳ ಜೋಡಿಗಳ ಮೆರವಣಿಗೆಗೆ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ ಅವರು ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ ‘ಬಸವ ಜಯಂತಿ ಉತ್ಸವದಲ್ಲಿ ಕಳೆದ ಎರಡು ದಶಕಗಳಿಂದ ಬಸವೇಶ್ವರ ಸೊಸೈಟಿಯಿಂದ …

Read More »

ಡಾ.ಅಂಬೇಡ್ಕರ್ ಸಮಾನತೆ ತತ್ವದಡಿ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ

ಮೂಡಲಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನ ಸಮಾನತೆಯ ಪಂಕ್ತಿ ಹಾಗೂ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕ್ಷೇತ್ರದಲ್ಲಿ ಸದಾ ಕೆಲಸ ಮಾಡುತ್ತಿದ್ದು, ಎಲ್ಲ ಜಾತಿ, ಜನಾಂಗದವರಿಗೂ ಸರಿಸಮಾನವಾಗಿ ಅವಕಾಶ ಕಲ್ಪಿಸಲಾಗಿದೆ. ಜತೆಗೆ, ಅವರ ಕೆಲಸ ಕಾರ್ಯಗಳನ್ನು ಕೂಡ ಸರಿಸಮಾನ ದೃಷ್ಟಿಯಿಂದ ಮಾಡಿರುವ ತೃಪ್ತಿ ನನ್ನದಾಗಿದೆ ಎಂದು ಬೆಮುಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲೂಕಿನ ಕುಲಗೋಡ ಗ್ರಾಮದ ಎನ್.ಎಸ್.ಎಫ್ ಶಾಲಾ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನೋತ್ಸವ …

Read More »

ಮಹಾಲಕ್ಷ್ಮೀ ಅರ್ಬನ್ ಸೊಸಾಯಿಟಿಗೆ ರೂ 4.02 ಕೋಟಿ ಲಾಭ-ಗಾಣಿಗೇರ

ಮಹಾಲಕ್ಷ್ಮೀ ಅರ್ಬನ್ ಸೊಸಾಯಿಟಿಗೆ ರೂ 4.02 ಕೋಟಿ ಲಾಭ-ಗಾಣಿಗೇರ ಮೂಡಲಗಿ: ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಶೀ ಮಹಾಲಕ್ಷ್ಮೀ ಅರ್ಬನ ಕೋ-ಆಪ ಕ್ರೆಡಿಟ್ ಸೊಸೈಟಿಯು ಕಳೆದ ಮಾರ್ಚ ಅಂತ್ಯಕ್ಕೆ 4.02 ಕೋಟಿ ರೂ ನಿವ್ವಳ ಲಾಭ ಹೊಂದಿ ಪ್ರಗತಿ ಪತಥದತ್ತ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಮಲ್ಲಪ್ಪ ಗುರಪ್ಪ ಗಾಣಿಗೇರ ಹೇಳಿದರು. ಅವರು ಪಟ್ಟಣದ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಸಭಾ ಭವನದಲ್ಲಿ ಸೊಸೈಟಿಯ ಕಛೇರಿಯಲ್ಲಿ …

Read More »

ಇಸ್ರೋದ ಮಾಜಿ ಅಧ್ಯಕ್ಷ, ವಿಜ್ಞಾನಿ ಪ್ರೊ.ಕೆ. ಕಸ್ತೂರಿ ರಂಗನ ನಿಧನ

ಇಸ್ರೋದ ಮಾಜಿ ಅಧ್ಯಕ್ಷ, ವಿಜ್ಞಾನಿ ಪ್ರೊ.ಕೆ. ಕಸ್ತೂರಿ ರಂಗನ್‌ ಅವರು ನಿಧನ ಸುದ್ದಿ ಕೇಳಿ ಆಘಾತವಾಗಿದೆ. ರಂಗನ್‌ ಅವರು ಕೇವಲ ಬಾಹ್ಯಾಕಾಶ ಮಾತ್ರವಲ್ಲ, ಪರಿಸರ, ಶಿಕ್ಷಣ, ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜತೆಗೆ ಕ್ರಿಯಾಶೀಲರಾಗಿ ಹಲವಾರು ಕೊಡುಗೆಗಳನ್ನು ಅವರು ನೀಡಿದ್ದಾರೆ. ಅವರನ್ನು ಕಳೆದುಕೊಂಡ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. *-ಬಾಲಚಂದ್ರ …

Read More »

ಪಹಲ್ಗಾಮನಲ್ಲಿ ನಡೆದ ಹಿಂದುಗಳ ಹತ್ಯೆಯನ್ನು ಖಂಡಿಸಿ ಮೌನ ಪ್ರತಿಭಟನೆ

ಮೂಡಲಗಿ: ಕಾಶ್ಮೀರದ ಪಹಲ್ಗಾಮನಲ್ಲಿ ನಡೆದ ಹಿಂದುಗಳ ಹತ್ಯೆಯನ್ನು ಖಂಡಿಸಿ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ಅರಭಾಂವಿ ಮಂಡಲ ವತಿಯಿಂದ ಪ್ರತಿಭಟಿಸಿ ಘಟನೆಯಲ್ಲಿ ಹತರಾದವರಿಗೆ ಮೇಣದಬತ್ತಿ ಹಿಡಿದು ಮೌನ ಪ್ರತಿಭಟನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪಾಂಡುರಂಗ ಮಹೇಂದ್ರಕರ. ಕುಮಾರ ಗಿರಡ್ಡಿ, ಬಸವರಾಜ್ ಪಾಟೀಲ್, ಡಾ. ಬಸವರಾಜ ಪಾಲಭಾಂವಿ. ಪರಪ್ಪ ಹಡಪದ, ಮಲ್ಲು ಯಾದವಾಡ ಜಗದೀಶ್ ತೇಲಿ, ಸೋಮಯ್ಯ ಹಿರೇಮಠ್, ಮಲ್ಲಪ್ಪ ಢವಳೇಶ್ವರ, ಶೀತಲ್ …

Read More »

ಚಿದಾನಂದ್ ಪವಾರಿಗೆ ರಾಷ್ಟ್ರೀಯ“ಆಸ್ಪೀ ಎಲ್.ಎಂ.ಪಟೇಲ್”ಪ್ರಶಸ್ತಿ ಪ್ರಧಾನ

ಮೂಡಲಗಿ: ಮುಂಬೈನ ಆಸ್ಪೀ ಫೌಂಡೇಶನದಿಂದ ಪ್ರಗತಿ ಪರ ರೈತರಿಗೆ ಕೊಡಮಾಡು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ “ಆಸ್ಪೀ ಎಲ್.ಎಂ.ಪಟೇಲ್” 2022 ಪ್ರಶಸ್ತಿಗೆ ತೋಟಗಾರಿಕೆ ವಿಭಾಗದ ಅಡಿಯಲ್ಲಿ ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದ ಪ್ರಗತಿ ಪರ ರೈತ ಚಿದಾನಂದ್ ಪರಸಪ್ಪ ಪವಾರ್ ಆಯ್ಕೆಗೊಂಡು ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ “ಆಸ್ಪೀ ಎಲ್.ಎಂ.ಪಟೇಲ್” 2022 ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ಶುಕ್ರವಾರದಂದು ಮುಂಬೈನ ಪ್ರತಿಷ್ಠಿತ ಹೊಟೇಲನಲ್ಲಿ ಜರುಗಿದ ಪ್ರಶಸ್ತಿ ಸಮಾರಂಭದಲ್ಲಿ ಉತ್ತರ ಪ್ರದೇಶದ ಸಂಸತ ಸದಸ್ಯ ಶಶಾಂಕ್‍ಮಣಿ …

Read More »