Breaking News
Home / ಬೆಳಗಾವಿ (page 13)

ಬೆಳಗಾವಿ

ಎನ್ಡಿಡಿಬಿ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರಿಗೆ ಗೌರವ ಸಮರ್ಪಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ಗುಜರಾತ್ ದಲ್ಲಿರುವ ಎನ್ಸಿಡಿಎಫ್ಐ ಹೊಸ ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಎನ್ಡಿಡಿಬಿ ಚೇರಮನ್ನರೂ ಆಗಿರುವ ಎನ್ಸಿಡಿಎಫ್ಐ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರನ್ನು ಆಡಳಿತ ಮಂಡಳಿಯ ಸದಸ್ಯರು ಸತ್ಕರಿಸಿ, ಗೌರವಿಸಿದರು. ಎನ್ಸಿಡಿಎಫ್ಐ ನಿರ್ದೇಶಕರೂ ಆಗಿರುವ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಸಂಸ್ಥೆಯ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರಿಗೆ ಇತರ ಆಡಳಿತ ಮಂಡಳಿಯ ಸದಸ್ಯರು ನಿನ್ನೆ ಸೋಮವಾರದಂದು ಜರುಗಿದ …

Read More »

ಮೂಡಲಗಿ: ಸರ್ಕಾರಿ ಶಾಲೆಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೊಪ್ಪದಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅವರ ಸಹಕಾರದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗಿರುವ ಎಲ್‌ಕೆಜಿ-ಯುಕೆಜಿ ಮಕ್ಕಳಿಗಾಗಿ ಆಟದ ಮನೆ, ಸ್ಥಳೀಯ ದೇಣಿಗೆದಾರರಿಂದ ಉಚಿತವಾಗಿ ಸಮವಸ್ತ್ರ, ಅಭ್ಯಾಸ ಪುಸ್ತಕ ಹಾಗೂ ಶಾಲಾ ಬ್ಯಾಗ ವಿತರಿಸುವ ಕಾರ್ಯ ಶ್ಲಾಘನಿಯವಾದು ಎಂದು ಬಿಇಒ ಅಜೀತ ಮನ್ನಿಕೇರಿ ಹೇಳಿದರು. ಮೂಡಲಗಿ ತಾಲೂಕಿನ ಕೊಪ್ಪದಟ್ಟಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ …

Read More »

*ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ*

ಗೋಕಾಕ : ಸಹಕಾರಿ ಸಂಘಗಳ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDFI) ಗುಜರಾತ್ ನ ಆನಂದ್ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ನೂತನ ಕಟ್ಟಡವನ್ನು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಷಾ ಅವರು ಲೋಕಾರ್ಪಣೆ ಮಾಡಿದರು. ಗುಜರಾತ್ ರಾಜ್ಯದಲ್ಲಿರುವ ಆನಂದ್ ನಗರದಲ್ಲಿ ನಿನ್ನೆ ಭಾನುವಾರದಂದು ಸುಮಾರು ೩೦ ಕೋಟಿ ರೂಪಾಯಿ ವೆಚ್ಚದ ಎನ್ಸಿಡಿಎಫ್ಐ ಕಚೇರಿಯ ನೂತನ ಕಟ್ಟಡವನ್ನು …

Read More »

19ನೇ ಶಿವಾನುಭವ ಗೋಷ್ಠಿ, ‘ಶುದ್ಧ ಕಾಯಕದಿಂದ ಜೀವನದಲ್ಲಿ ಸಂತೃಪ್ತಿ’

ಮೂಡಲಗಿ: ‘ಪ್ರಾಮಾಣಿಕತೆ ಮತ್ತು ಶುದ್ಧ ಕಾಯಕದಿಂದ ಜೀವನದಲ್ಲಿ ಆನಂದ ಮತ್ತು ಸಂತೃಪ್ತಿ ದೊರೆಯುತ್ತದೆ” ಎಂದು ಅರಭಾವಿ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದ 19ನೇ ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಅನ್ಯ ಮಾರ್ಗದಿಂದ ಮಾಡುವ ಗಳಿಕೆ ಕ್ಷಣಿಕ ತೃಪ್ತಿಯಾಗಿದ್ದು, ಅದು ಆತ್ಮವಂಚನೆಗೆ ಕಾರಣವಾಗುತ್ತದೆ ಎಂದರು. ಶಿವಾನುಭವ ಗೋಷ್ಠಿಯಲ್ಲಿ ಚಿಂತನ ಮಾಡಿದ ಕಂಕಣವಾಡಿಯ ಮಾರುತಿ ಶರಣರು ಮಾತನಾಡಿ ಮನ:ಶುದ್ಧಿಗಾಗಿ ಮತ್ತು ಸದ್ವಿಚಾರಕ್ಕಾಗಿ …

Read More »

 ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 103ನೇ ಅನ್ನದಾಸೋಹ

ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ ಶಿವಯ್ಯ ದುಂಡಯ್ಯ ಹಿರೇಮಠ ಅವರ ಸ್ಮರಣೆಯಲ್ಲಿ 103ನೇÀ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಬಸವೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿ ನಿರ್ದೇಶಕ ಶ್ರೀಕಾಂತ ಹಿರೇಮಠ ಅವರು ಅನ್ನದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿ ‘ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ. ಲಯನ್ಸ್ ಕ್ಲಬ್‍ವು ರೋಗಿಗಳಿಗೆ ಅನ್ನದಾಸೋಹ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ’ …

Read More »

‘ಸಮಾಜ ಸೇವೆಯಲ್ಲಿ ನಿಸ್ವಾರ್ಥತೆ ಇರಲಿ’- ರಾಜಶೇಖರ ಹಿರೇಮಠ

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 2025-26ನೇ ಸಾಲಿನ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ವಿಶಾಲ ಶೀಲವಂತ ಅವರಿಗೆ ಅತಿಥಿಗಳು ಅಧಿಕಾರ ಹಸ್ತಾಂತರಿಸಿದರು. ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಪದಗ್ರಹಣ ಮೂಡಲಗಿ: ‘ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯು ನಿಜವಾದ ಸಮಾಜ ಸೇವೆಯಾಗುತ್ತದೆ’ ಎಂದು ಡಿಸ್ಟ್ರೀಕ್ಟ್ ಲಯನ್ಸ್ ಪಸ್ಟ್ ಡಿಸ್ಟ್ರೀಕ್ಟ್ ಗವರ್ನರ್ ಬೆಳಗಾವಿಯ ರಾಜಶೇಖರ ಹಿರೇಮಠ ಹೇಳಿದರು. ಇಲ್ಲಿಯ ಎಸ್‍ಎಸ್‍ಆರ್ ಪ್ರೌಢ ಶಾಲೆಯ ಕಲ್ಮೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ …

Read More »

ಬೆಟಗೇರಿ ಗ್ರಾಮದಲ್ಲಿ ಕಟ್ಟಾ ವಾರ ಆಚರಣೆ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮಳೆಗಾಗಿ ಇದೇ ಮಂಗಳವಾರ ಜು.1 ಸೇರಿದಂತೆ ಮುಂದೆ ಬರುವ ವಾರದ ಪ್ರತಿ ಮಂಗಳವಾರ ಜು.8, ಶುಕ್ರವಾರ ಜು.11 ಮಂಗಳವಾರ ಜು.15, ಮಂಗಳವಾರ ಜು.22 ಸೇರಿ ಒಟ್ಟು 5 ದಿನ ಸಂಪ್ರದಾಯದಂತೆ ವಾರ ಹಿಡಿಯಲಾಗಿದೆ. ಜು.1ರಂದು ಮುಂಜಾನೆ 9 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವದ ಮೂಲಕ ಗ್ರಾಮದ …

Read More »

ಮೂಡಲಗಿ ಮತ್ತು ಗೋಕಾಕ ತಾಲ್ಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಅದರ ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದಯುತ ಸಭೆ

ಗೋಕಾಕ- ರೈತರ ಶ್ರೆಯೋಭಿವೃದ್ಧಿಗಾಗಿ ರೈತಮಿತ್ರನಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಸೇರಿ ೫೧೯.೭೨ ಕೋಟಿ ರೂಪಾಯಿಗಳನ್ನು ಶೂನ್ಯ ಬಡ್ಡಿದರದಲ್ಲಿ ರೈತರಿಗೆ ವಿತರಿಸಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಸೋಮವಾರದಂದು ನಗರದ ಹೊರ ವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಸಭಾ ಭವನದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲ್ಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು …

Read More »

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

ಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ ‘ಭಟ್ಟಿನೀಯ ಭ್ರಾಂತಿ ಚಿತ್ತ’ ಕವನ ಸಂಕಲನವನ್ನು ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಕೋಕಾರ್ಪಣೆಗೊಳಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಮತ್ತತರರು ಚಿತ್ತದಲ್ಲಿರುವರು ಚಿದಾನಂದ ಹೂಗಾರ ಅವರ ‘ಭಟ್ಟಿನೀಯ ಭ್ರಾಂತಿ ಚಿತ್ತ’ ಕವನ ಸಂಕಲನ ಬಿಡುಗಡೆ. ‘ಕಾವ್ಯವು ಓದುಗರ ಹೃದಯ ತಟ್ಟುವಂತಿರಬೇಕು’- ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಮೂಡಲಗಿ: ‘ಕಾವ್ಯವು …

Read More »

ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ ಚಿದಾನಂದ ಮ ಹೂಗಾರ ಇವರ *ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ

ಮೂಡಲಗಿ -ಶಿವಾಪೂರ ಹ ಗ್ರಾಮದ ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ ಚಿದಾನಂದ ಮ ಹೂಗಾರ ಇವರ *ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವನ್ನು ಮೂಡಲಗಿಯ ಚೈತನ್ಯ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ರವಿವಾರ ದಿವಸ ಮುಂಜಾನೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇ.ಮೂ ಶ್ರೀ ಚರಮೂರ್ತೇಶ್ವರ ಮಹಾಸ್ವಾಮಿಗಳು ಮಮದಾಪೂರ ಇವರು ವಹಿಸಿಕೊಳ್ಳುವರು. ಉದ್ಘಾಟಕರಾಗಿ ಶ್ರೀ ಮಲ್ಲನಗೌಡ ಶಂ.ಪಾಟೀಲ ಶಿವಾಪೂರ ಗ್ರಾಮದ …

Read More »