Breaking News
Home / ಬೆಳಗಾವಿ (page 28)

ಬೆಳಗಾವಿ

ಯೋಜನೆಗಳ ಸದುಪಯೋಗವಾಗಲಿ’ ಕಾರ್ಮಿಕರಿಗೆ ಕಿಟ್ ವಿತರಣೆ | ಗುರುತಿನ ಚೀಟಿ ಮಾಡಿಸಿಕೊಳ್ಳಿ: ಬಾಲಚಂದ್ರ ಜಾರಕಿಹೊಳಿ

ಮೂಡಲಗಿ ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂತಹ ಯೋಜನೆಗಳ ಸದುಪಯೋಗಕ್ಕೆ ಶಾಸಕ ಮತ್ತು ಬೆವೆಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಲಹೆ ಮಾಡಿದರು. ಪಟ್ಟಣದ ಪುರಸಭೆ ಕಾರ್ಯಲಯದ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು ಕಾರ್ಮಿಕರ ಏಳೆಗಾಗಿ ಇರುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಕಟ್ಟಡಗಳ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. 60 ವರ್ಷ ಮೇಲ್ಪಟ್ಟ ನೋಂದಾಯಿತ ಕಾರ್ಮಿಕರಿಗೆ ಸರ್ಕಾರ ಪ್ರತಿ ತಿಂಗಳು 3 ಸಾವಿರ ರೂ. …

Read More »

ಕಠಿಣ ಪರಿಶ್ರಮ ಅರ್ಪಣಾ ಮನೋಭಾವ ಕ್ರೀಡಾ ಸಾಧನೆಗೆ ಸ್ಪೂರ್ತಿ : ಲಕ್ಷ್ಮೀ ರಡರಟ್ಟಿ

ಮೂಡಲಗಿ : ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ ದೃಢವಾದ ಸಂಕಲ್ಪ ಮತ್ತು ಅರ್ಪಣಾ ಮನೋಭಾವ ಈ ಮೂರು ಗುಣಗಳು ನಿಮ್ಮಲ್ಲಿದ್ದರೆ ನಿಮ್ಮ ಸಾಧನೆಗೆ ಮೆರೆಗಳೇ ಇರುವುದಿಲ್ಲ ಸಾಧನೆ ಮಾಡುವ ಛಲದೊಂದಿಗೆ ದೈಹಿಕ ಕ್ಷಮತೆ ಮತ್ತು ಕ್ರೀಡಾ ಸ್ಪೂರ್ತಿ ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದವರೆಗೆ ನಮ್ಮನ್ನು ಬೆಳಸುತ್ತದೆ ಕ್ರೀಡೆ ಶೈಕ್ಷಣಿಕ ಸಾಧನೆಯ ಮತ್ತೋಂದು ಕ್ಷೇತ್ರ ಕ್ರೀಡಾ ಸಾದನೆಯು ಶೈಕ್ಷಣಿಕ ಸಾದನೆಯ ಮೆಟ್ಟಿಲು ಎಂದು ಅಂತರಾಷ್ಟ್ರೀಯ ಮಟ್ಟದ ಪ್ಯಾರಾ ಟೆಕ್ವಾಂಡೊ ಚಾಂಪಿಯನ್ ಲಕ್ಷ್ಮಿ …

Read More »

*ಬೆಳಗಾವಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ*

ಬೆಳಗಾವಿ: ಯುವ ಜನಾಂಗಕ್ಕೆ ಯುವಜನೋತ್ಸವ ಕೇವಲ ಮೋಜು ಮಸ್ತಿಗಾಗಿ ಮಾತ್ರವಲ್ಲ; ಅದು ಉಜ್ವಲ ಭವಿಷ್ಯದ ಸೂಚಕ ಹಾಗೂ ಜೀವನ ಮೌಲ್ಯಗಳಿಗೆ ದಾರಿ ದೀಪವಾಗಬಲ್ಲದು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೂ ಸಿ. ಎಮ್ ತ್ಯಾಗರಾಜ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ ಯುವ ಕೇಂದ್ರ ಬೆಳಗಾವಿ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಬೆಳಗಾವಿ , ಕರ್ನಾಟಕ …

Read More »

ಪ್ರತಿಯೊಬ್ಬರ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅಮೂಲ್ಯವಾಗಿದೆ:ಬಸವರಾಜ ಉಮರಾಣಿ

ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾರಿಗೂ ಮೋಸಮಾಡದೇ ಹಾಗೂ ದುಶ್ಚಟಗಳ ದಾಸರಾಗದೇ ಉತ್ತಮ ರೀತಿಯಲ್ಲಿ ಬದುಕಬೇಕು ಎಂದು ಮಾನವ ಕಂಪ್ಯೂಟರ್ ಎಂದು ಖ್ಯಾತರಾದ ಅಥಣಿಯ ಬಸವರಾಜ ಉಮರಾಣಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅ.28ರಂದು ಹಮ್ಮಿಕೊಂಡ ಪ್ರೇರಣಾ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅಮೂಲ್ಯವಾಗಿದೆ ಎಂದರು. ಮಾನವ ಕಂಪ್ಯೂಟರ್ ಎಂದು ಖ್ಯಾತರಾದ ಬಸವರಾಜ ಉಮರಾಣಿ ಅವರು ತಮ್ಮ ಬದುಕಿನ ಕೇಲವು …

Read More »

ಬೆಟಗೇರಿ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಸಂಪನ್ನ

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಸೋಮವಾರ ಅ.27 ಮತ್ತು ಮಂಗಳವಾರ ಅ.28ರಂದು ಸಂಭ್ರಮದಿಂದ ನಡೆಯಿತು. ಸೋಮವಾರ ಅ.27 ರಂದು ಬೆಳಗ್ಗೆ, ಸಂಜೆ 6ಗಂಟೆಗೆ ಇಲ್ಲಿಯ ಲಕ್ಷ್ಮೀದೇವಿಯ ಗದ್ಗುಗೆಗೆ ಪೂಜೆ, ನೈವೇದ್ಯ ಸಮರ್ಪಿಸುವ, ದೇವರನ್ನು ಗದ್ಗುಗೆಗೊಳಿಸುವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಂಗಳವಾರ ಅ.28ರಂದು ಬೆಳಗ್ಗೆ 6ಗಂಟೆಗೆ ಲಕ್ಷ್ಮೀದೇವಿಯ ಗದ್ಗುಗೆಗೆ ಮಹಾಪೂಜೆ, ಮಹಾಭಿಷೇಕ, ನೈವೇದ್ಯ ಸಮರ್ಪಿಸುವ, ಲಕ್ಷ್ಮೀದೇವಿಯ ಆರಾಧನೆ, ಸುಮಂಗಲೆಯರಿಂದ ಶ್ರೀದೇವಿಗೆ ಉಡಿ ತುಂಬುವುದು, ವಿಶೇಷ …

Read More »

ಬೆಟಗೇರಿ ಲಕ್ಷ್ಮೀದೇವಿಗೆ ಅಲಂಕಾರ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಪ್ರಯುಕ್ತ ಅ.28ರಂದು ಶ್ರೀದೇವಿ ಗದ್ಗುಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

Read More »

ಮೂಡಲಗಿ- ಅರಭಾವಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿದ್ದು, ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ವಸತಿ ಶಾಲೆಗಳನ್ನು ಆರಂಭಿಸಿದ್ದು, ಇದರಿಂದ ಶಿಕ್ಷಣದ ಗುಣಮಟ್ಟವು ದಿನದಿಂದ ದಿನಕ್ಕೆ ಸುಧಾರಣೆಗೊಳ್ಳುತ್ತಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪ್ರಶಂಸೆ ವ್ಯಕ್ತಪಡಿಸಿದರು. ತಾಲ್ಲೂಕಿನ ಸುಣಧೋಳಿ (ಬಳೋಲ ಮಡ್ಡಿ) ಗ್ರಾಮದಲ್ಲಿ ಸುಮಾರು 16 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಿರುವ ಅಲ್ಪ ಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಭೂಮಿ ಪೂಜೆಯನ್ನು ನೆರವೇರಿಸಿ …

Read More »

.ಕ್ರೀಡಾಪಟುಗಳು ಕ್ರೀಡೆಯ ಜೊತೆಗೆ ಶೈಕ್ಷಣಿಕವಾಗಿ ಬೆಳೆಯಬೇಕು . ಅಂದಾಗ ಮಾತ್ರ ಕ್ರೀಡೆಗೆ ಮೆರಗು ಬರುತ್ತದೆ- ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ

ಮೂಡಲಗಿ: ಕ್ರೀಡಾಪಟುಗಳು ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಾಗ ಮಾತ್ರ ಜನಮಾನಸದಲ್ಲಿ ಉಳಿಯುತ್ತಾರೆ. ಕ್ರೀಡಾಪಟುಗಳು ಕ್ರೀಡೆಯ ಜೊತೆಗೆ ಶೈಕ್ಷಣಿಕವಾಗಿ ಬೆಳೆಯಬೇಕು . ಅಂದಾಗ ಮಾತ್ರ ಕ್ರೀಡೆಗೆ ಮೆರಗು ಬರುತ್ತದೆ ಜನ್ಮ ನೀಡಿದ ತಂದೆ ತಾಯಿ ಹಾಗೂ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು .ಕ್ರೀಡೆಯಲ್ಲಿ ಬೆಳೆಯುವುದರಿಂದ ಉತ್ತಮ ನಾಯಕರಾಗುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು . ಅವರು ತಾಲ್ಲೂಕಿನ ನಾಗನೂರು ಪಟ್ಟಣದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ …

Read More »

ಅ.26 ರಂದು ಹೇಮ-ವೇಮ ಸೊಸಾಯಿಟಿ ಉದ್ಘಾಟನೆ

ಅ.26 ರಂದು ಹೇಮ-ವೇಮ ಸೊಸಾಯಿಟಿ ಉದ್ಘಾಟನೆ ಮೂಡಲಗಿ: ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಶ್ರೀ ಹೇಮ-ವೇಮ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಉದ್ಘಾಟನಾ ಸಮಾರಂಭ ರವಿವಾರ ಅ.26ಂದು ಮುಂಜಾನೆ 9 ಗಂಟೆಗೆ ಶ್ರೀ ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿ ಪೂಜೆಯೊಂದಿಗೆ ಜರುಗಲಿದೆ. ಸಮಾರಂಭದ ಸಾನ್ನಿಧ್ಯವನ್ನು ಮೂಡಲಗಿಯ ಶ್ರೀ ದತ್ತಾತ್ರಯಬೋಧ ಸ್ವಾಮಿ, ರಂಗಪೂರ-ಮುನ್ಯಾಳದ ಶ್ರೀ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ಸುಣಧೋಳಿಯ ಶ್ರೀ ಶಿವಾನಂದ ಸ್ವಾಮಿಜಿ, ಶ್ರೀ ಚಿದಾನಂದ ಅಜ್ಜಾ, …

Read More »

ಗ್ರಾಮೀಣ ಭಾಗದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ : ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಮೂಡಲಗಿ: ಗ್ರಾಮೀಣ ಭಾಗದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಕ್ರೀಡಾಪಟುಗಳ ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರ ಹಾಗೂ ಸಂಘ -ಸಂಸ್ಥೆಗಳು ಸಹಾಯ ಸಹಕಾರ ನೀಡಬೇಕೆಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು . ಅವರು ತಾಲೂಕಿನ ನಾಗನೂರು ಪಟ್ಟಣದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮೂಡಲಗಿ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ನಾಗನೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ …

Read More »