ಮೂಡಲಗಿ: ಕಳೆದ 40 ವರ್ಷಗಳಿಂದ ಸಹಕಾರ. ಸಾಮಾಜಿಕ, ರಾಜಕೀಯ ಚಟುವಟಿಕೆಗಳ ಮೂಲಕ ಈ ಭಾಗದ ಜನರ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಅದರ ಮುಂದುವರೆದ ಭಾಗವಾಗಿ ನನ್ನ ಸೇವೆಯನ್ನು ಇನ್ನಷ್ಟು ನಿಕಟಗೊಳಿಸಬೇಕೆಂಬ ಹಂಬಲದೊಂದಿಗೆ ಸಮೀಪದ ಯಾದವಾಡ ಪಟ್ಟಣದಲ್ಲಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ ಕಲ್ಲೋಳಿ ಇದರ ನೂತನ 3ನೇ ಶಾಖೆಯನ್ನು ಪ್ರಾರಂಭಿಸುತ್ತಿದ್ದೆವೆಂದು ರಾಜ್ಯಸಭಾ ಸಂಸದ ಹಾಗೂ ಸಂಸ್ಥಾಪಕ ಅಧ್ಯಕ್ಷ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು. ಶುಕ್ರವಾರ ತಾಲೂಕಿನ …
Read More »‘ಶಾಲಾ ಕೊಠಡಿಗಳು ಪಠ್ಯದೊಂದಿಗೆ ಸಾಂಸ್ಕøತಿಕ ತಾಣವಾಗಬೇಕು’- ಸಾಹಿತಿ, ಪತ್ರಕರ್ತರ ಬಾಲಶೇಖರ ಬಂದಿ
ಗೋಕಾಕದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪಠ್ಯ, ಸಹಪಠ್ಯ ನವರಾತ್ರಿ ಉತ್ಸವ-2024 ವನ್ನು ಮೂಡಲಗಿ ಸಾಹಿತಿ, ಪತ್ರಕರ್ತರ ಬಾಲಶೇಖರ ಬಂದಿ ಉದ್ಘಾಟಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಬಿ.ಕೆ. ಕುಲಕರ್ಣಿ, ಪ್ರಾಚಾರ್ಯರಾದ ಎ.ಬಿ. ಪಾಟೀ, ಐ.ಎಸ್. ಪವಾರ ಚಿತ್ರದಲ್ಲಿರುವರು. ಗೋಕಾಕ: ‘ದೇಶದ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಸಮಾಜದಲ್ಲಿ ಪ್ರಮುಖವಾಗಿದೆ’ ಎಂದು ಮೂಡಲಗಿಯ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ಇಲ್ಲಿಯ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪಠ್ಯ …
Read More »ಹಬ್ಬಗಳ ಆಚರಣೆಗಳಿಂದಲೇ ಭಾರತ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಮೂಡಲಗಿ: ಭಾರತ ಹಳ್ಳಿಗಳ ದೇಶ, ಹಬ್ಬಗಳ ದೇಶ. ವಿಶೇಷ ಹಬ್ಬಗಳ ಆಚರಣೆಗಳಿಂದ ಇಡೀ ವಿಶ್ವವೇ ಇಂದು ನಮ್ಮನ್ನು ಗುರುತಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ 41ನೇ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದ ಸಚಿವರು, ಭಾರತದಲ್ಲಿ ಎಲ್ಲಾ ಸಮುದಾಯಗಳು ಸೇರಿ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ನಮ್ಮ ಹಬ್ಬಗಳ ವೈಶಿಷ್ಟ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ರಾಜ್ಯದ ಅತಿದೊಡ್ಡ …
Read More »ಕಾಳಿಕಾ ದೇವಸ್ಥಾನದಲ್ಲಿ ಶೈಲಪುತ್ರಿ ಅಲಂಕಾರ
ಮೂಡಲಗಿ: ಮೂಡಲಗಿ ಪಟ್ಟಣದ ಲಕ್ಷ್ಮೀ ನಗರದಲ್ಲಿನ ಕಾಳಿಕಾ ದೇವಸ್ಥಾನದಲ್ಲಿ ಕಾಳಿಕಾದೇವಿಯು ನವರಾತ್ರಿಯ ಶುಕ್ರವಾರ ಪ್ರಥಮ ದಿನದಂದು ಶೈಲಪುತ್ರಿ ಅಲಂಕಾರದಲ್ಲಿ ಕಂಗೋಳಿಸುತ್ತಿರುವುದು.
Read More »ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ: ಸುಭಾಸ ಢವಳೇಶ್ವರ
ಮೂಡಲಗಿ: ಇಡೀ ಜಗತ್ತು ವಾಣಿಜ್ಯೀಕರಣವಾಗಿದೆ. ಪ್ರತಿಯೊಬ್ಬರೂ ನಿತ್ಯದ ಬದುಕಿನಲ್ಲಿ ಆನಲೈನ್ ವ್ಯವಹಾರ ಅವಲಂಬಿಸಿದ್ದಾರೆ. ಹೀಗಾಗಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ ಎಂದು ಪಟ್ಟಣದ ದಿ.ಮೂಡಲಗಿ ಕೋ-ಆಪರೇಟಿವ್ ಬ್ಯಾಂಕ ಅಧ್ಯಕ್ಷ ಹಾಘೂ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್. ಜಿ. ಢವಳೇಶ್ವರ ಹೇಳಿದರು. ತಾಲೂಕಿನ ನಾಗನೂರ ಪಟ್ಟಣದ ಅಥರ್ವ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮೂಡಲಗಿ ಕೋ ಆಪರೇಟಿವ್ ಬ್ಯಾಂಕ್ಗೆ ಭೇಟ್ಟಿ ನೀಡಿದ ವೇಳೆ ಮಾತನಾಡಿದ ಅವರು ಇ …
Read More »ದೇವರ ಆಶೀರ್ವಾದ ಇದ್ದರೆ ಏನೆಲ್ಲ ಪಡೆಯಬಹುದು- ಶಿವಾಪೂರ(ಹ)ದ ಅಡವಿಸಿದ್ದರಾಮ ಮಹಾಸ್ವಾಮಿಗಳು
ಮೂಡಲಗಿ: ದೇವರ ಆಶೀರ್ವಾದ ಇದ್ದರೆ ಏನೆಲ್ಲ ಪಡೆಯಬಹುದು. ಪುಣ್ಯದ ಸಾಮಾಜಿಕ ಕಾರ್ಯಮಾಡುವರ ಜೀವನ ಸುಖಮಯವಾಗುವುದು ಎಂದು ಶಿವಾಪೂರ(ಹ)ದ ಅಡವಿಸಿದ್ದರಾಮ ಮಹಾಸ್ವಾಮಿಗಳು ಹೇಳಿದರು. ಅವರು ತಾಲೂಕಿನ ಶಿವಾಪೂರ(ಹ) ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದಲ್ಲಿ ನಡೆದ 9ನೇಯ ಶಿವಾನುಭವ ಗೋಷ್ಠಿಯ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ ನವರಾತ್ರಿ ಉತ್ಸವ ಆಚರಣೆ ಮಹತ್ವದ್ದು, ಬನ್ನಿ ತಪ್ಪಲಿನಲ್ಲಿ ದೈವಿ ಶಕ್ತಿ ಅಡಗಿದೆ ಮಹಾ ನವರಾತ್ರಿ ವಿಶೇಷ ಹಬ್ಬವು 9 ದಿನ ದೀಪ ಹಚ್ಚಿ ನವರಾತ್ರಿ …
Read More »‘ಪುಣ್ಯಾರಣ್ಯ ಪುಷ್ಪ’ ಸಂಸ್ಮರಣಗ್ರಂಥ ಬಿಡುಗಡೆ; ಶ್ರೀಗಳ ಗದ್ದುಗೆ ಉದ್ಘಾಟನೆ ಅರಭಾವಿ ಲಿಂ.ಸಿದ್ಧಲಿಂಗ ಶ್ರೀಗಳು ಭಕ್ತರೋದ್ಧರಕ್ಕಾಗಿ ಜೀವಿ ಸವಿಸಿದ ಪುಣ್ಯ ಪುರುಷರು’- ತೋಂಟದ ಸಿದ್ಧರಾಮ ಸ್ವಾಮಿಗಳು
ಮೂಡಲಗಿ ತಾಲ್ಲೂಕಿನ ಅರಭಾವಿಯ ದುರದುಂಡೀಶ್ವರ ಪುಣ್ಯಾರಣ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ಸಿದ್ದಗೊಳಿಸಿದ್ದ ‘ಪುಣ್ಯಾರಣ್ಯ ಪುಷ್ಪ’ ಸಂಸ್ಮರಣ ಸಂಪುಟವನ್ನು ಗದಂಗ-ಡಂಬಳದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಮತ್ತು ಅರಭಾವಿ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಬಿಡುಗಡೆಗೊಳಿಸಿದರು’ ಮೂಡಲಗಿ: ಅರಭಾವಿಮಠದ ಸಿದ್ದಲಿಂಗ ಸ್ವಾಮಿಗಳು ತಮ್ಮ ಜೀವನದುದ್ದಕ್ಕೂ ಭಕ್ತರ ಬಗ್ಗೆ ಅಪಾರ ಪ್ರೀತಿ, ಅನುಕಂಪವನ್ನು ಹೊಂದಿ, ಭಕ್ತರೋದ್ದಾಕ್ಕಾಗಿ ತಮ್ಮ ಜೀವನವನ್ನು ಸವಿಸಿದ ಪುಣ್ಯ ಪುರುಷರಾಗಿದ್ದರು’ ಎಂದು ಗದಗ-ಡಂಬಳದ ಜಗದ್ಗುರು …
Read More »ಗ್ರಾಮದ ಧ್ವಾರ ಬಾಗಿಲುಗಳು ಗ್ರಾಮೀಣ ಜನಜೀವನದ ನೈಜ ಪ್ರತಿಬಿಂಬಗಳಾಗಿವೆ – ರಾಜ್ಯಸಭಾ ಸಂಸದ ಈರಣ್ಣ ಕಡಾಡಿ
ಮೂಡಲಗಿ: ಗ್ರಾಮದ ಧ್ವಾರ ಬಾಗಿಲುಗಳು ಗ್ರಾಮೀಣ ಜನಜೀವನದ ನೈಜ ಪ್ರತಿಬಿಂಬಗಳಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ತಾಲೂಕಿನ ವೆಂಕಟಾಪೂರ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೂತನವಾಗಿ ನಿರ್ಮಾಣಗೊಂಡ ಧ್ವಾರ ಬಾಗಿಲ ಕಾಮಗಾರಿಯನ್ನು ವಿಕ್ಷಣೆ ಮಾಡಿ ಮಾತನಾಡಿದ ಅವರು ಪುರಾತನ ಕಾಲದಿಂದಲೂ ಪ್ರತಿ ಗ್ರಾಮಕ್ಕೂ ಧ್ವಾರ ಬಾಗಿಲುಗಳು ಇರುವುದು ರೂಡಿಗತವಾಗಿತ್ತು. ಗ್ರಾಮದ ಹಿರಿಯರೂ ಬಂದು ಕೂಡುತ್ತಿದ್ದರು ಗ್ರಾಮಕ್ಕೆ ಹೊಸಬರು …
Read More »ನವರಾತ್ರಿ ಉತ್ಸವ ನಿಮಿತ್ಯ ಅ.5ರಿಂದ ಮೂರು ದಿನಗಳ ಕಾಲ ಮೂಡಲಗಿಯಲ್ಲಿ ಕೃಷಿ ಮೇಳ ಆಯೋಜನೆ
ಮೂಡಲಗಿ : ಪಟ್ಟಣದ ನವರಾತ್ರಿ ಉತ್ಸವ ಕಮೀಟಿಯಿಂದ ಅ.3ರಿಂದ ಜರಗುವು 9 ದಿನಗಳ ನವರಾತ್ರಿ ಉತ್ಸವದ ಅಂಗವಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ, ತುಕ್ಕಾನಟ್ಟಿ ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರ ಹಾಗೂ ಶಿವಬೋಧರಂಗ ಪಿಕೆಪಿಎಸ್, ನಿಸರ್ಗ ಫೌಂಡೇಶನ್ ಮೂಡಲಗಿ ಇವುಗಳ ಸಹಯೋಗದೊಂದಿಗೆ ಕೃಷಿ ಮೇಳವನ್ನು ಅ.5,6 ಮತ್ತು 7 ರಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ದ್ವೀತಿಯ ಬಾರಿಗೆ ಆಯೋಜಿಸಲಾಗಿದೆ ಎಂದು ಉತ್ಸವ ಕಮೀಟಿಯ ಕೃಷ್ಣಾ ನಾಶಿ ಹೇಳಿದರು. …
Read More »ಅ.3ರಂದು ಲಿಂ. ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ ಮತ್ತು ಗದ್ದುಗೆ ಉದ್ಘಾಟನೆ
ಅ.3ರಂದು ಲಿಂ. ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ ಮತ್ತು ಗದ್ದುಗೆ ಉದ್ಘಾಟನೆ ಮೂಡಲಗಿ: ಹಲವು ವೈಶಿಷ್ಟ್ಯಗಳಿಂದ ಕೂಡಿದ ತಾಲೂಕಿನ ಅರಭಾವಿಯ ಜಗದ್ಗುರು ಶ್ರೀ ದುರದುಂಡೀಶ್ವರ ಪುಣ್ಯಾರಣ್ಯ ಸಿದ್ಧಸಂಸ್ಥಾನ ಮಠದ ಹನ್ನೊಂದನೆಯ ಪೀಠಾಧಿಪತಿಗಳಾಗಿದ ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ, ಗುದ್ದುಗೆಯ ಉದ್ಘಾಟನೆ ಮತ್ತು ಸಂಸ್ಮರಣ ಸಂಪುಟ ಬಿಡುಗಡೆ ಸಮಾರಂಭ ಗುರುವಾರ ಅ.3ರಂದು ಮುಂಜಾನೆ 10=30 ಗಂಟೆಗೆ ಗದಗ-ಡಂಬಳದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಲಿದೆ …
Read More »