ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಕುಮಾರ ಬಸವರಾಜ ಪಾಟೀಲ ಇತನು ಶ್ರೀ ಅಣ್ಣಾಸಾಹೇಬ ಜೊಲ್ಲೆ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆಗೊಂಡಿದ್ದಾನೆ. ವಿದ್ಯಾರ್ಥಿ ಸಾಧನೆಗೆ ಮೆಚ್ಚುಗೆ: …
Read More »ಶೈಕ್ಷಣಿಕ ಮತ್ತು ವೃತ್ತಿ ಕೋರ್ಸಗಳ ಜ್ಞಾನ ಬಿಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಡಾ.ಶಿವಲಿಂಗ ಅರಗಿ
ಮೂಡಲಗಿ : ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿ ಕೋರ್ಸಗಳ ಜ್ಞಾನ ಅಗತ್ಯವಿದೆ ಬಿಎಸ್ಸಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಅನೇಕ ಇಲಾಖೆಗಳಲ್ಲಿ ವೃತಿಗಳಿಗೆ ಅವಕಾಶ ಇದ್ದು ಅದರ ಸದುಪಯೋಗ ಮಾಡಿಕೊಳ್ಳಬೇಕು ಅದರ ಜೊತೆಗೆ ಉನ್ನತ ಶಿಕ್ಷಣಕ್ಕೆ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳು ಹೆಮ್ಮರವಾಗಿದ್ದು ಸರಿಯಾದ ಮಾರ್ಗಗಳಲ್ಲಿ ಅಧ್ಯಯನಶೀಲತೆ ಮತ್ತು ಉತ್ತಮ ಪ್ರತಿಭೆಗಳಿಂದ ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಇಚ್ಚೆ ಮತ್ತು ಮನಸ್ಸು ಪ್ರತಿಯೊಬ್ಬ ವಿದ್ಯಾರ್ಥಿ ಬೆಳಸಿಕೊಳ್ಳುವ ಅಗತ್ಯವಿದೆ ಎಂದು ಶಿವಾಪೂರ …
Read More »*ರಾಗಿಣಿ ನಟನೆಯ ಹಸಿರು ಬಳೆ ಹಾಸ್ಯ ನಾಟಕದ ಉದ್ಘಾಟನೆ ಸಮಾರಂಭ ನಾಳೆ.
ಮೂಡಲಗಿ: ಇಲ್ಲಿನ ಕುಮಾರ್ ಗಿರಡ್ಡಿಯವರ ಜಾಗದಲ್ಲಿ ಹಾಕಿರುವ ಭವ್ಯ ರಂಗ ಸಜ್ಜಿಕೆಯಲ್ಲಿ ತೆಗ್ಗಿಹಳ್ಳಿಯ ಶ್ರೀ ಸಂತ ಶರೀಫ ಶಿವಯೋಗಿ ನಾಟ್ಯ ಸಂಘದ ಆಶ್ರಯದಲ್ಲಿ ಹಸಿರು ಬಳೆ ಎಂಬ ಹಾಸ್ಯಭರಿತ ನಾಟಕದ ಉದ್ಘಾಟನಾ ಸಮಾರಂಭವು ಗುರುವಾರ ದಿನಾಂಕ ಅ.16 ರಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದೆ. ಶ್ರೀ ಶಿವಬೋಧರಂಗ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಅವರು ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು. ಬೆಮುಲ್ ಅಧ್ಯಕ್ಷರು ಹಾಗೂ ಅರಭಾವಿ …
Read More »*ಶಾಸಕ ಭರಮಗೌಡ (ರಾಜು) ಕಾಗೆಗೆ ಒಲಿದು ಬಂದ ಅದೃಷ್ಟ*
ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಕಾಗವಾಡ ಕ್ಷೇತ್ರಕ್ಕೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ಶಾಸಕ ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಗವಾಡ ಕ್ಷೇತ್ರದಿಂದ ಶಾಸಕ ರಾಜು ಕಾಗೆ ಹಾಗೂ ಶ್ರೀನಿವಾಸ ಪಾಟೀಲ್ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಸಚಿವ ಸತೀಶ ಜಾರಕಿಹೊಳಿ, …
Read More »ಬೆಳಗಾವಿ ಡಿಸಿಸಿ ಬ್ಯಾಂಕಿನ ಚುಕ್ಕಾಣಿ ಹಿಡಿಯುವ ಮಾತು ಸುಳ್ಳಾಗಿಸುವುದಿಲ್ಲ – ಬ್ಯಾಂಕಿನ ಪೆನೆಲ್ ಸಾರಥಿ ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ: ಇದೇ ಅಕ್ಟೋಬರ್ 19 ರಂದು ನಡೆಯುವ ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಪೆನೆಲ್ ನಿಂದ ಒಟ್ಟು 6 ಜನರು ಆಯ್ಕೆಯಾಗಿದ್ದು, ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿಯುವ ಮಾತು ಸುಳ್ಳಾಗಿಸುವುದಿಲ್ಲ ಎಂದು ಬ್ಯಾಂಕಿನ ಪೆನೆಲ್ ಸಾರಥಿಯಾಗಿರುವ ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಬ್ಯಾಂಕಿನ ಚುನಾವಣೆಗೂ ಮುನ್ನವೇ ಎರಡು ತಿಂಗಳಿನಿಂದ ಹೇಳಿಕೊಂಡು ಬರುತ್ತಿದ್ದೆ. ಈ ಸಲ ನಮ್ಮದೇ ಆಡಳಿತ ಚುಕ್ಕಾಣಿ ಅಂತಾ. 16 ರಲ್ಲಿ ನಾವು …
Read More »ಕಲ್ಲೋಳಿ ಪಟ್ಟಣದ ಶ್ರೀ ಸತ್ಯಸಾಯಿ ಸೇವಾ ಸಮಿತಿಯ 40ನೇ ವಾರ್ಷಿಕೋತ್ಸವ
ಮೂಡಲಗಿ: ಸತ್ಯ, ಧರ್ಮ, ಶಾಂತಿ, ಪ್ರೇಮ, ಅಹಿಂಸೆ ಇವು ಸತ್ಯಸಾಯಿ ಬಾಬಾರವರ ಜೀವನದ ಧ್ಯೇಯ ವಾಕ್ಯಗಳಾಗಿದ್ದು, ಇವುಗಳ ಮೂಲಕ ಸುಂದರ ಸಮಾಜವನ್ನು ಕಟ್ಟುವುದು ಅವರ ಕನಸಾಗಿತ್ತು. ವ್ಯಕ್ತಿಗಳ ವ್ಯಕ್ತಿತ್ವ ನಿರ್ಮಾಣದಿಂದ ಮಾತ್ರ ಇಂತಹ ಸುಂದರ ಸಮಾಜ ಕಟ್ಟಲಿಕ್ಕೆ ಸಾಧ್ಯವಿದೆ. ಹೀಗಾಗಿ ಕಲ್ಲೋಳಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯು ಸತತ 40 ವರ್ಷಗಳ ಕಾಲ ಹಲವಾರು ವ್ಯಕ್ತಿಗಳ ಕುಟುಂಬದ ಜೀವನದಲ್ಲಿ ಪರಿವರ್ತನೆ ತರುವ ಮೂಲಕ ಸತ್ಯಸಾಯಿ ಬಾಬಾರವರ ಆಶಯಗಳನ್ನು ಜಾರಿಗೆ ತಂದಿದೆ …
Read More »ರಾಜ್ಯದಲ್ಲಿ ಉಪ್ಪಾರ ಸಮುದಾಯ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ – ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ
ಮೂಡಲಗಿ: ರಾಜ್ಯದಲ್ಲಿ ಉಪ್ಪಾರ ಸಮುದಾಯದವರು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಉಪ್ಪಾರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾದ ಭರಮಣ್ಣ ಉಪ್ಪಾರ ಹೇಳಿದರು ಅವರು ಸ್ಥಳೀಯ ಶ್ರೀ ಭಗೀರಥ ಉಪ್ಪಾರ ಅಭಿವೃದ್ಧಿ ಸೇವಾ ಸಂಘದಿಂದ ಹಮ್ಮಿಕೊಂಡ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,ಕುಲಗುರುಗಳಾದ ಶ್ರೀ ಪುರುಷೋತ್ತಮಾನಂದ ಮಹಾಸ್ವಾಮಿಗಳು, ಶಾಸಕ ಪುಟ್ಟರಂಗಶೆಟ್ಟಿ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರು ಸತೀಶ ಜಾರಕಿಹೊಳಿ ಮತ್ತು …
Read More »ಕುಲಗೋಡ ಸಂಜೀವಿನಿ ಮಾಸಿಕ ಸಂತೆ ಉದ್ಘಾಟಿಸಿದ ಸರ್ವೋತ್ತಮ ಜಾರಕಿಹೊಳಿ
ಕುಲಗೋಡ:ಮ: ಹಿಳೆಯರನ್ನು ಸ್ವಾವಲಂಬಿಗಳಾಗಿಸಲು ಸಂಜೀವಿನಿ ಮಾಸಿಕ ಸಂತೆ ಗ್ರಾಮೀಣ ಭಾಗದಲ್ಲಿ ನಡೆಸುತ್ತಿದ್ದು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಆದಾಯವನ್ನು ಹೆಚ್ಚಿಸಲು ಮತ್ತು ಕೂಡಿ ದುಡಿದು ಕೂಡಿ ಬಾಳೋಣ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಜಿಪಂ-ತಾಪಂ ಗ್ರಾಮ ಪಂಚಾಯತ ಹಾಗೂ ಕೌಶಲ್ಯಾಭಿವೃದ್ಧಿ ಉಧ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ. ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಇವರ …
Read More »ಬೆಳದಿಂಗಳ ಸಾಹಿತ್ಯ ಚಿಂತನ–ಮಂಥನ ಕಾರ್ಯಕ್ರಮ: ‘ಜೀವನನ್ನು ಆನಂದಗೊಳಿಸುವ ಶಕ್ತಿ ಸತ್ಸಂಗದಲ್ಲಿದೆ’ – ಮುರುಘರಾಜೇಂದ್ರ ಸ್ವಾಮೀಜಿ
ಮೂಡಲಗಿ: ‘ಮಹಾತ್ಮರೊಂದಿಗಿನ ಸತ್ಸಂಗ, ಭಜನೆ ಮತ್ತು ಪ್ರಾರ್ಥನೆ ಇವು ಮನುಷ್ಯನಿಗೆ ಶಾಂತಿ, ನೆಮ್ಮದಿಯನ್ನು ತಂದುಕೊಟ್ಟು ಜೀವನವನ್ನು ಆನಂದಮಯಗೊಳಿಸುತ್ತವೆ’ ಎಂದು ಗೋಕಾಕದ ಶೂನ್ಯ ಸಂಪಾದನಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ಇಲ್ಲಿಯ ಸಾಯಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಜರುಗಿದ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ 43ನೇ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಸತ್ಯ, ಶುದ್ಧ ಮತ್ತು ಭಕ್ತಿಯಿಂದ ದೇವರನ್ನು ಸ್ಮರಿಸುವ ಮೂಲಕ ದೈವವನ್ನು …
Read More »ಸೋಲು ಗೆಲುವು ಮುಖ್ಯವಲ್ಲ, ಸೋಲನ್ನು ಸವಾಲಾಗಿ ಸ್ವೀಕರಿಸಿ
ಮೂಡಲಗಿ: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸೋಲನ್ನು ಸವಾಲಾಗಿ ಸ್ವೀಕರಿಸಿ ಉತ್ತಮ ತರಬೇತಿ ಪಡೆದು ಮತ್ತೆ ಸಾಧನೆಗೆ ಸನ್ನದ್ಧರಾಗಬೇಕು. ಕ್ರೀಡಾಪಟುಗಳು ನಿರ್ಣಾಯಕರ ನಿರ್ಣಯಕ್ಕೆ ಬದ್ಧವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ ಶ್ರೀಶೈಲ ಗುಡಮಿ ಹೇಳಿದರು. ಸ್ಥಳೀಯ ಲಕ್ಷ್ಮಣ ವಾಯ್. ಅಡಿಹುಡಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ, ಶಾಲಾ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಇವರ ಸಹಯೋಗದಲ್ಲಿ ಮೂಡಲಗಿ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ, ರಾಯಬಾಗ, …
Read More »
IN MUDALGI Latest Kannada News