ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294 ಕೋಟಿ ರೂ. ಅನುದಾನ ಬಳಕೆ ಆಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ಹೇಳಿದರು. ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಭಾರತ ಸರ್ಕಾರದ ವಸತಿ ಮತ್ತು …
Read More »ದಿ. 8 ರಂದು ವಿದ್ಯುತ್ ಸರಬುರಾಜಿನಲ್ಲಿ ವ್ಯತ್ಯಯವಾಗಲಿದೆ
ಗೋಕಾಕ: 110/33/11ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಅಂಕಲಗಿಯಲ್ಲಿ 110/11 ಕೆವ್ಹಿ20 ಎಮ.ವ್ಹಿ.ಎ ಶಕ್ತಿ ಪರಿವರ್ತಕದ ಮತ್ತು 110/33ಕೆವ್ಹಿ 20ಎಮ.ವ್ಹಿ.ಎಶಕ್ತಿ ಪರಿವರ್ತಕದ 3ನೇ ತ್ರೈಮಾಸಿಕ ಅವಧಿಯ ನಿರ್ವಹಣೆ ಕಾರ್ಯ ಕೈಗೊಂಡಿರುವುದರಿಂದ, 110/33/11ಕೆವ್ಹಿ ಅಂಕಲಗಿ, ಮತ್ತು 33/11ಕೆವ್ಹಿ ಖನಗಾಂವ ವಿದ್ಯುತ್ ವಿತರಣಾ ಕೆಂದ್ರದಿಂದ ಸರಬರಾಜು ಆಗುವ 11ಕೆವ್ಹಿ ಎಫ್-1 ಅಂಕಲಗಿ ಎನ್‍ಜೆವಾಯ್, ಎಫ್-5ಕುಂದರಗಿಎನ್‍ಜೆವಾಯ್, ಎಫ್-7 ಅಕ್ಕತಂಗೇರಹಾಳ ಎನ್‍ಜೆವಾಯ್, ಎಫ್-10 ಗುಜನಾಳ ಎನ್‍ಜೆವಾಯ್, ಎಫ್-2 ಖನಗಾಂವ ಎನ್‍ಜೆವಾಯ್, ಎಫ್-4 ಪುಡಕಲಕಟ್ಟಿಎನ್‍ಜೆವಾಯ್ ಎಫ್-7 ಬೆಣಚಿನಮರಡಿ ಎನ್‍ಜೆವಾಯ್ …
Read More »ಡಾ. ಅಂಬೇಡ್ಕರ ಮಹಾಪರಿನಿರ್ವಾಣ ದಿನಾಚರಣೆ
ಡಾ. ಅಂಬೇಡ್ಕರ ಮಹಾಪರಿನಿರ್ವಾಣ ದಿನಾಚರಣೆ ಮೂಡಲಗಿ : ಡಾ. ಅಂಬೇಡ್ಕರ ಅವರ ಸಮಾನತೆಯ ಕನಸು ನನಸಾಗಬೇಕಾದರೆ ಮೌಡ್ಯ, ಕಂದಾಚಾರಗಳನ್ನು ಬಿಟ್ಟು ಅವರ ತತ್ವಾದರ್ಶಗಳನ್ನು ಅನುಸರಿಸಬೇಕು ಎಂದು ಜಿಲ್ಲಾ ಡಿಎಸ್‍ಎಸ್ ಸಂಚಾಲಕ ಹಾಗೂ ಮಾಜಿ ಪುರಸಭೆ ಸದಸ್ಯ ರಮೇಶ ಸಣ್ಣಕ್ಕಿ ಹೇಳಿದರು. ರಾಜೀವಗಾಂಧಿ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಘಟಕದಿಂದ ಹಮ್ಮಿಕೊಂಡ ಡಾ. ಅಂಬೇಡ್ಕರ ಅವರ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ …
Read More »ಮೂರ್ನಾಲ್ಕು ತಿಂಗಳಿಂದ ಸುಳ್ಳು ಹೇಳುತ್ತಿರುವ ಸಿದ್ದರಾಮಯ್ಯ ವಿ.ಎಲ್.ಪಾಟೀಲ ಕುಟುಂಬಕ್ಕೆ ಅವಮಾನ ಮಾಡಿದವರಿಗೆ ತಕ್ಕ ಉತ್ತರ ನೀಡಿ: ರಮೇಶ ಜಾರಕಿಹೊಳಿ
ಮೂರ್ನಾಲ್ಕು ತಿಂಗಳಿಂದ ಸುಳ್ಳು ಹೇಳುತ್ತಿರುವ ಸಿದ್ದರಾಮಯ್ಯ ವಿ.ಎಲ್.ಪಾಟೀಲ ಕುಟುಂಬಕ್ಕೆ ಅವಮಾನ ಮಾಡಿದವರಿಗೆ ತಕ್ಕ ಉತ್ತರ ನೀಡಿ: ರಮೇಶ ಜಾರಕಿಹೊಳಿ ರಾಯಬಾಗ: ಸಿದ್ದರಾಮಯ್ಯ ಅವರು ಯಾವತ್ತೂ ಸುಳ್ಳು ಹೇಳುವುದಿಲ್ಲ. ನಮ್ಮಂತೆಯೇ ಅವರು ಬಹಳ ನಿಷ್ಠುರವಾದಿ. ಆದರೆ, ಕಳೆದ ಮೂರ್ನಾಲ್ಕು ತಿಂಗಳಿಂದ ಅವರು ಯಾರ ಒತ್ತಡಕ್ಕೆ ಒಳಗಾಗಿ ಸುಳ್ಳು ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣೆಯ …
Read More »“ಪುನೀತ ರಾಜಕುಮಾರ ಕ್ರಾಸ್” ಎಂದು ನಾಮಕರಣದ ನಾಮಫಲ ಉದ್ಘಾಟಣೆ
ಮೂಡಲಗಿ : ಕರುನಾಡಿನ ಯುವರಾಜ ಕೋಟ್ಯಂತರ ಅಭಿಮಾನಿಗಳ ಕಣ್ಮಣಿ ಪುನೀತ್ ರಾಜಕುಮಾರ ಅಕಾಲಿಕವಾಗಿ ಕಾಣದಂತೆ ಮಾಯವಾಗಿ ಕೈಲಾಸ ಸೇರಿಕೊಂಡ ಘಟನೆ ನಮ್ಮೆಲ್ಲರನ್ನೂ ಸ್ತಂಭೀಭೂತರನ್ನಾಗಿಸಿದೆ ಎಂದು ಉಪನ್ಯಾಸಕ ವಾಯ್ ಬಿ ಕಳ್ಳಗುದ್ದಿ ಹೇಳಿದರು. ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಗ್ರಾಮದ ನವನಗರ ಕ್ರಾಸ್‍ವನ್ನು “ಪುನೀತ್ ರಾಜಕುಮಾರ ಕ್ರಾಸ್” ವೆಂದು ಮರುನಾಮಕರಣದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ ಅವರ ಅಗಲಿಕೆಯ ನೋವು, ಸ್ಮರಣೆ, ನೆನಪು ಮಾತ್ರ ನಿರಂತರವಾಗಿ ಸಾಗಿದೆ. ನಮ್ಮ …
Read More »ಹುಣಶ್ಯಾಳ ಪಿ.ಜಿ: ಅಪ್ಪನ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ
ಹುಣಶ್ಯಾಳ ಪಿ.ಜಿ: ಅಪ್ಪನ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ 2022ರÀ ಜನೇವರಿ 1ರಿಂದ 3ರವರೆಗೆ ಜರುಗಲಿರುವ ಅಪ್ಪನ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಯನ್ನು ಶ್ರೀಮಠದಲ್ಲಿ ಶನಿವಾರ ದಂದು ಜರುಗಿದ ಮಾಸಿಕ ಸುವಿಚಾರ ಚಿಂತನಗೋಷ್ಠಿ ಕಾರ್ಯಕ್ರಮ ದಲ್ಲಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಪಾವನ ಸಾನಿಧ್ಯ ವನ್ನು ಶ್ರೀ ಮಠದ ನಿಜಗುಣ ದೇವರು ವಹಿಸಿದ್ದರು. ಶ್ರೀ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು …
Read More »ವಸತಿ ನಿಲಯದಲ್ಲಿನ ಅವ್ಯೆವಸ್ಥೆಯನ್ನು ಖಂಡಿಸಿ ವಿದ್ಯಾರ್ಥಿಗಳಿಂದ ಧರಣಿ
ವಸತಿ ನಿಲಯದಲ್ಲಿನ ಅವ್ಯೆವಸ್ಥೆಯನ್ನು ಖಂಡಿಸಿ ವಿದ್ಯಾರ್ಥಿಗಳಿಂದ ಧರಣಿ ಮೂಡಲಗಿ: ಮೂಡಲಗಿಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿನ ಅವ್ಯೆವಸ್ಥೆಯನ್ನು ಖಂಡಿಸಿ ಹಾಸ್ಟೆಲ್ ವಿದ್ಯಾರ್ಥಿಗಳು, ಉಪವಾಸ ಸತ್ಯಾಗ್ರಹದೊಂದಿಗೆ ಧರಣಿ ಕುಳಿತ ವಿಷಯ ತಿಳಿದು ಎಬಿವಿಪಿ ಮೂಡಲಗಿ ಶಾಖೆಯ ಕಾರ್ಯಕರ್ತರು ಧರಣಿ ಸತ್ಯಾಗ್ರಹದಲ್ಲಿ ತಾವು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ ಪ್ರತಿಭಟನಾಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ವಸತಿ ನಿಲಯವನ್ನು ವಿಕ್ಷೀಸಿ ದುರಾವಸ್ಥೆಯನ್ನು …
Read More »ಭಕ್ತಿಯಿಂದ ಮಾಡುವ ಧ್ಯಾನವು ಸಮಾಜಕ್ಕೆ ಅಮೃತದ ಬೆಳಕು – ಬಿದರಿ ಕಲ್ಮಠದ ಶಿವಲಿಂಗ ಸ್ವಾಮೀಜಿ
ಭಕ್ತಿಯಿಂದ ಮಾಡುವ ಧ್ಯಾನವು ಸಮಾಜಕ್ಕೆ ಅಮೃತದ ಬೆಳಕು ಮೂಡಲಗಿ: ‘ಜನರು ಭಕ್ತಿಯಿಂದ ಮಾಡುವ ದೇವರ ಧ್ಯಾನದಿಂದ ಸಮಾಜಕ್ಕೆ ಅಮೃತದ ಬೆಳಕು ದೊರೆಯುತ್ತದೆ’ ಎಂದು ಗುಲಗಾಜಂಬಗಿಯ ಬಿದರಿ ಕಲ್ಮಠದ ಶಿವಲಿಂಗ ಸ್ವಾಮೀಜಿ ಹೇಳಿದರು. ಇಲ್ಲಿಯ ಕೆಇಬಿ ಪ್ಲಾಟ್ ಬಳಿಯ ಮಾರ್ತಂಡ ಮಲ್ಲಯ್ಯ ಹಾಗೂ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನದ ಅಡಿಗಲ್ಲು ನೆರವೇರಿಸಿ ನಂತರ ಜರುಗಿದ ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ದೇವರು ಮತ್ತು ಭಕ್ತರು, …
Read More »ಒಂದು ಮತ ಬಿಜೆಪಿ ಗೆಲ್ಲಿಸಲು, ಇನ್ನೊಂದು ಮತ ಕಾಂಗ್ರೇಸ್ ಸೋಲಿಸಲು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಾರ್ಯಕರ್ತರಿಗೆ ಕರೆ ಗೋಕಾಕದ ಹೊರವಲಯದಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಒಂದು ಮತ ಬಿಜೆಪಿ ಗೆಲ್ಲಿಸಲು, ಇನ್ನೊಂದು ಮತ ಕಾಂಗ್ರೇಸ್ ಸೋಲಿಸಲು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಾರ್ಯಕರ್ತರಿಗೆ ಕರೆ ಗೋಕಾಕದ ಹೊರವಲಯದಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಡಿಸೆಂಬರ್ 10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸಂಘಟಿತರಾಗಿ ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ರವಿವಾರ ಸಂಜೆ ನಗರದ ಹೊರವಲಯದಲ್ಲಿರುವ …
Read More »ಜಿಲ್ಲೆಯ ಪ್ರತಿ ಗ್ರಾಮಗಳನ್ನು ಮಾದರಿಯನ್ನಾಗಿ ಮಾಡುವೆ : ಲಖನ್ ಜಾರಕಿಹೊಳಿ
ಜಿಲ್ಲೆಯ ಪ್ರತಿ ಗ್ರಾಮಗಳನ್ನು ಮಾದರಿಯನ್ನಾಗಿ ಮಾಡುವೆ : ಲಖನ್ ಜಾರಕಿಹೊಳಿ ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ಹೆಚ್ಚೆಚ್ಚು ಅನುದಾನ ತಂದು ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಸಿಸಿ ರಸ್ತೆ, ಚರಂಡಿ ನಿರ್ಮಾಣ ಮಾಡಿ ಮಾದರಿ ಹಳ್ಳಿಗಳನ್ನಾಗಿ ರೂಪಿಸಲಾಗುವುದು ಎಂದು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು. ಬೆಳಗಾವಿ ತಾಲ್ಲೂಕಿನ ಯಳ್ಳೂರ ಗ್ರಾಮ ಪಂಚಾಯತ್ ಸದಸ್ಯರನ್ನು ಭೇಟಿಯಾಗಿ ಮತಯಾಚಿಸಿದ ಬಳಿಕ ಅವರು …
Read More »