ಬೆಟಗೇರಿ:ಪಠ್ಯ ಮತ್ತು ಪಠ್ಯೇತರ ಚಟುವಟಿಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು. ಸಮೀಪದ ಬಿಲಕುಂದಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜು.26 ರಂದು ಹಮ್ಮಿಕೊಂಡಿದ್ದ 2022-23 ನೇ ಸಾಲಿನ ಬೆಟಗೇರಿ ವಲಯ ಮಟ್ಟದ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,ಇಂದಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜೋತೆಗೆ ಉತ್ತಮ …
Read More »‘ವಾಹನಗಳ ಬಳಕೆಯು ದೇಶದ ಅಭಿವೃದ್ಧಿಪರವಾಗಿರಲಿ’ – ಪ್ರಿಯಂಕಾ ಸತೀಶ ಜಾರಕಿಹೊಳಿ
ಮೂಡಲಗಿ: ‘ದೇಶದ ವೇಗದ ಅಭಿವೃದ್ಧಿಯಲ್ಲಿ ಇಂಧನ ಆಧಾರಿತ ವಾಹಗಳ ಪಾತ್ರ ಮಹತ್ವದಾಗಿದ್ದು, ವಾಹನಗಳ ಬಳಕೆಯು ದೇಶದ ಅಭಿವೃದ್ಧಿಪರವಾಗಿರಲಿ’ ಎಂದು ಪ್ರಿಯಂಕಾ ಸತೀಶ ಜಾರಕಿಹೊಳಿ ಅವರು ಹೇಳಿದರು. ತಾಲ್ಲೂಕಿನ ನಾಗನೂರ ಗ್ರಾಮದ ಮನ್ನಿಕೇರಿ ಪ್ರೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ಕಾಪೋರೇಶನದವರು ಏರ್ಪಡಿಸಿದ್ದ ಗ್ರಾಹಕರ ಸಮಾವೇಶ ಮತ್ತು ಉತ್ತಮ ಗ್ರಾಹಕ ಪ್ರಶಸ್ತಿಗಳ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಇಂಧನ ಸಂಪನ್ಮೂಲವು ದೇಶದ ಬಹುದೊಡ್ಡ ಶಕ್ತಿಯಾಗಿದ್ದು, ಅದು ಸದ್ಬಳಿಕೆಯಾಗಬೇಕು ಎಂದರು. …
Read More »ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಒಂದು ದಿನಕ್ಕೆ ಗಂಡು-ಹೆಣ್ಣಿಗೆ ಸಮಾನ ಕೂಲಿ
ಬೆಟಗೇರಿ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಒಂದು ದಿನಕ್ಕೆ ಗಂಡು-ಹೆಣ್ಣಿಗೆ ಸಮಾನ ಕೂಲಿ ನೀಡಲಾಗುವುದು. ಸ್ಥಳೀಯರು ಮರಾಗ್ರಾಉಖಾ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗೋಕಾಕ ತಾಪಂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ತಾಂತ್ರಿಕ ಸಹಾಯಕ ಲಕ್ಷ್ಮಣ ಚಿಲಕಂಡಿ ಹೇಳಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬೆಳಗಾವಿ ಜಿಪಂ, ಗೋಕಾಕ ತಾಪಂ ಹಾಗೂ ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಕೂಲಿ ಕಾರ್ಮಿಕರಿಗೆ …
Read More »ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಅಳವಡಿಸಿಕೊಂಡು ಶ್ರದ್ಧೆ, ನಿಷ್ಠೆಯಿಂದ ಓದಿ ಸಫಲರಾಗಬೇಕು – ಕಸಪಾ ತಾಲೂಕಾ ಘಟಕದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ
ಮೂಡಲಗಿ: ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಅಳವಡಿಸಿಕೊಂಡು ಶ್ರದ್ಧೆ, ನಿಷ್ಠೆಯಿಂದ ಓದಿ ಸಫಲರಾಗಬೇಕು ಎಂದು ಕಸಪಾ ತಾಲೂಕಾ ಘಟಕದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು. ಪಟ್ಟಣದ ಕೆ.ಎಚ್.ಸೋನವಾಲ್ಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ, ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಹಾಗೂ 8ನೇ ವರ್ಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭದ ಯುವ …
Read More »ಗಿರಿಸಾಗರದಲ್ಲಿ ಜೈ ಭವಾನಿ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕ ಕಚೇರಿಯ ಉದ್ಘಾಟನೆ
ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಗಿರಿಸಾಗರದಲ್ಲಿ ಜೈ ಭವಾನಿ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕ ಕಚೇರಿಯ ಉದ್ಘಾಟನಾ ಸಮಾರಂಭವು ಶ್ರೀ ಬಸಲಿಂಗಯ್ಯ ಹಿರೇಮಠ್ (ಪಟ್ಟದೇವರು) ಮತ್ತು ಶ್ರೀ ಶಿವಲಿಂಗಪ್ಪ ಹುಬ್ಬಳ್ಳಿ ಅಜ್ಜನವರ ಸಾನಿಧ್ಯದಲ್ಲಿ ಜರುಗಿತು. ಯಾದವಾಡ ಗ್ರಾಮ ಪಂಚಾಯತ ಸದಸ್ಯ ಕಲ್ಮೇಶ ಗಾಣಿಗಿ ಮಾತನಾಡಿ, ಎಲ್ಲ ಕುಶಲಕರ್ಮಿ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಮಳೆ ಬಿಸಿಲೆನ್ನದೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತಾರೆ ಇಂತಹ ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯವನ್ನು …
Read More »ಸಮೀರಅಹ್ಮದ ದಬಾಡಿಯವರಿಗೆ “ ಶಿಕ್ಷಣ ಸಾರಥಿ ಪ್ರಶಸ್ತಿ” ಪ್ರಧಾನ
ಮೂಡಲಗಿ: ಮೂಡಲಗಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಮೀರಅಹ್ಮದ ದಬಾಡಿಯವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಇವರು ರಾಜ್ಯ ಮಟ್ಟದ ಉತ್ತಮ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ “ ಶಿಕ್ಷಣ ಸಾರಥಿ ಪ್ರಶಸ್ತಿ” ಯನ್ನು ತುಮಕೂರಿನ ಉದ್ಧಾನೇಶ್ವರ ಕಲ್ಯಾಣ ಮಂಟಪ ಸಿದ್ಧಗಂಗಾ ಮಠದಲ್ಲಿ ಜರುಗಿದ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಕುಣಿಗಲ್ …
Read More »ಬಹದ್ದೂರಬಂಡಿ ಸಿ.ಆರ್.ಪಿ.ಹನುಮಂತಪ್ಪ. ಶಿಕ್ಷಣ ಸಾರಥಿ ಪ್ರಶಸ್ತಿಗೆ ಆಯ್ಕೆ
ಕೊಪ್ಪಳ: ಬಹದ್ದೂರಬಂಡಿ ಕ್ಲಸ್ಟರನ ಸಿ.ಆರ್.ಪಿ.ಹನುಮಂತಪ್ಪ ಕುರಿ ಅವರಿಗೆ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ವತಿಯಿಂದ ನೀಡಲಾಗುವ ಶಿಕ್ಷಣ ಸಾರಥಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹನುಮಂತಪ್ಪ ಕುರಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷವಾಗಿ ಶಾಲೆ ಬಿಟ್ಟ ಮಕ್ಕಳನ್ನು ಪುನ: ಶಾಲೆಗೆ ಸೇರಿಸುವ,ಕರೋನಾ ಜಾಗೃತಿ,ಮತದಾನ ಜಾಗೃತಿ ಕುರಿತಂತೆ ಸ್ವತ ಸಾಹಿತ್ಯವನ್ನು ರಚನೆ ಮಾಡುವುದರ ಜೊತೆಗೆ ತಾನೇ ಹಾಡುವುದರ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುವುದನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ. ಶಿಕ್ಷಣ …
Read More »ಸರ್ವ ಜನಾಂಗಗಳ ಶಾಂತಿಯ ಪ್ರತೀಕ ಶಾಸಕ ಬಾಲಚಂದ್ರ ಜಾರಕಿಹೊಳಿಯವರು : ಭೂತಪ್ಪ ಗೊಡೇರ
ಗೋಕಾಕ: 2004 ರಿಂದ ಅರಭಾವಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಎಲ್ಲ ಧರ್ಮಿಯರ ಜನಾಂಗಗಳನ್ನು ಒಂದುಗೂಡಿಸುವ ಮೂಲಕ ಸರ್ವ ಜನಾಂಗಗಳ ಶಾಂತಿಯ ಪ್ರತೀಕರಾಗಿದ್ದಾರೆ ಎಂದು ಪ್ರಭಾಶುಗರ ನಿರ್ದೇಶಕ ಭೂತಪ್ಪ ಗೊಡೇರ ಹೇಳಿದರು. ಶುಕ್ರವಾರದಂದು ಲೋಕೋಪಯೋಗಿ ಇಲಾಖೆಯಿಂದ 3 ಕೋಟಿ ರೂ. ವೆಚ್ಚದ ಉದಗಟ್ಟಿ ಕ್ರಾಸ್‍ದಿಂದ ಉದಗಟ್ಟಿವರೆಗಿನ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಾಲಚಂದ್ರ ಜಾರಕಿಹೊಳಿ ಅವರಿಂದ ಅರಭಾವಿ ಕ್ಷೇತ್ರದಲ್ಲಿ ಶಾಂತಿ-ಸಾಮರಸ್ಯ …
Read More »ಕ್ರೀಡೆಗಳು ದೈಹಿಕ, ಮಾನಸಿಕ ಸ್ಥಿರತೆ ಕಾಪಾಡಿಕೊಂಡು ಆರೋಗ್ಯಯುತ ಜೀವನ ನಡೆಸಲು ಸಹಾಯಕವಾಗುವದು- ಬಿಇಒ ಅಜಿತ ಮನ್ನಿಕೇರಿ
ಮೂಡಲಗಿ: ಸಾಧನೆ ಎನ್ನುವದು ಸಾಧಕನ ಸ್ವತ್ತಾಗಿದೆ. ಯಾವುದೇ ಕ್ಷೇತ್ರವಾಗಿರಲಿ ನಿರಂತರ ಮಾರ್ಗದರ್ಶನ ಸತತ ಪ್ರಯತ್ನ ಪಟ್ಟಾಗ ಮಾತ್ರ ಸಾಧಕರಾಗಿ ಉತ್ತುಂಗಕ್ಕೇರಬಹುದು. ಕ್ರೀಡಾ ಕ್ಷೇತ್ರದಲ್ಲಿಯೂ ವಿದ್ಯಾರ್ಥಿ ದಿಸೆಯಿಂದಲೆ ಕ್ರೀಡೆಗಳನ್ನು ಸವಾಲಾಗಿ ಪರಿಗಣಿಸದೆ ಉತ್ಸಾಹದಿಂದ ಭಾಗವಹಿಸುವಿಕೆ ಮೂಲಕ ದೈಹಿಕವಾಗಿ ಸದೃಢರಾಗುವ ಮೂಲಕ ಮಾನಸಿಕ ಸದೃಢತೆ ಸಾಧಿಸಬೇಕು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಅವರು ಗುರುವಾರ ಪಟ್ಟಣದಲ್ಲಿಯ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಜರುಗಿದ ವಲಯ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ …
Read More »ರಾಜ್ಯಸಭಾ ಸದಸ್ಯರಾಗಿ ಡಾ. ವಿರೇಂದ್ರ ಹೆಗ್ಗಡೆ ಪ್ರಮಾಣ ವಚನ ಸ್ವೀಕಾರ: ಸಂಸದ ಈರಣ್ಣ ಕಡಾಡಿ ಅಭಿನಂದನೆ
ಮೂಡಲಗಿ: ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ, ಗ್ರಾಮೀಣಾಭಿವೃದ್ಧಿಯ ಹರಿಕಾರ ಪಧ್ಮ ವಿಭೂಷಣ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ ಭವನದಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ ಶ್ರದ್ದಾಪೂರ್ವಕ ಅಭಿನಂದನೆಗಳನ್ನು ತಿಳಿಸಿದರು. ಗುರುವಾರ ಜು.21 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಹೆಗ್ಗಡೆಯವರು ತಮ್ಮ 20 ನೇ ವಯಸ್ಸಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ 21 …
Read More »