Breaking News
Home / Uncategorized

Uncategorized

ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ- ಎಸ್.ಎಮ್.ಲೋಕನ್ನವರ

ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ- ಎಸ್.ಎಮ್.ಲೋಕನ್ನವರ ಬೆಟಗೇರಿ:ಪಾಲಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದ ಕಲಿಕೆಯಲ್ಲಿ ಶಿಸ್ತು ಹಾಗೂ ಸಂಸ್ಕಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದರೇ ಮಕ್ಕಳು ಒಳ್ಳೆಯ ಬದುಕು ಕಟ್ಟಿಕೊಂಡು ಸುಂದರ ಜೀವನ ನಡೆಸಬಲ್ಲರು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೊಡಿ ಜಿಲ್ಲಾ ಅಧ್ಯಕ್ಷ ಹಾಗೂ ಗೋಸಬಾಳ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಮುಖ್ಯ ಶಿಕ್ಷಕ ಎಸ್.ಎಮ್.ಲೋಕನ್ನವರ ಹೇಳಿದರು. ಮೂಡಲಗಿ ಮಹಿಳಾ ಮತ್ತು ಮಕ್ಕಳ …

Read More »

ಸರಕಾರಿ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಅತ್ಯಂತ ವಿಜ್ರಂಭsಣೆಯಿಂದ ನಡೆಸುತ್ತಿರುವ ಗ್ರಾಮದ ಜನರ ಕಾರ್ಯ ಅಭಿನಂದನೀಯ – ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಮೂಡಲಗಿ : ಬರಿದಾದ ಎದೆಯಲ್ಲಿ ಅಕ್ಷರಗಳನ್ನು ಬಿತ್ತಿಬದುಕಿಗೆ ದಾರಿ ತೋರಿದ ನಮ್ಮೋರ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಅತ್ಯಂತ ವಿಜ್ರಂಭsಣೆಯಿಂದ ನಡೆಸುತ್ತಿರುವ ಮುಸುಗುಪ್ಪಿ ಗ್ರಾಮದ ಜನರ ಕಾರ್ಯ ಅಭಿನಂದನೀಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಶನಿವಾರ ಸಮೀಪದ ಮುಸಗುಪ್ಪಿಯ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ನಡೆದ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸಂಸದರ ಅನುದಾನದಲ್ಲಿ ನಿರ್ಮಾಣವಾದ ರಂಗಮಂದಿರ ಉದ್ಘಾಟಿಸಿ ಮಾತನಾಡಿದರು. ಅನ್ನ.ಆರೋಗ್ಯ.ಅಕ್ಷರ ಹಾಗೂ ಆಶ್ರಯ …

Read More »

ಕನ್ನಡ ಹಬ್ಬ, ಸರ್ವ ಧರ್ಮ- ಸಮಾಜಗಳ ಸತ್ಪುರುಷರ ಜಯಂತ್ಯೋತ್ಸವದ ಭಾವೈಕ್ಯತೆಯ ಸಮ್ಮಿಲನ ಕಾರ್ಯಕ್ರಮ

ಮೂಡಲಗಿ: ಎಲ್ಲ ಜಾತಿ- ಜನಾಂಗಗಳ ಮಹಾನ್ ಪುರುಷರ ಜಯಂತಿ ಆಚರಣೆಗಳು ಒಂದೇ ವೇದಿಕೆಯಲ್ಲಿ ಅದೂ ಸರ್ವ ಸಮಾಜಗಳ ಬಂಧುಗಳ ಉಪಸ್ಥಿತಿಯಲ್ಲಿ ಅತೀ ಅದ್ದೂರಿಯಿಂದ ನಡೆಯಲು ಕಾರಣೀಕರ್ತರಾದ ಎಲ್ಲ ಸಮಾಜಗಳ ಮುಖಂಡರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಭಿನಂದನೆ ಸಲ್ಲಿಸಿ, ಪ್ರತಿ ವರ್ಷವೂ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು ‌ ಪಟ್ಟಣದ ಬಸವ ಮಂಟಪದಲ್ಲಿ ಗುರುವಾರ ಸಂಜೆ ಜರುಗಿದ ಕನ್ನಡ ಹಬ್ಬ, ಸರ್ವ ಧರ್ಮ- ಸಮಾಜಗಳ ಸತ್ಪುರುಷರ ಜಯಂತ್ಯೋತ್ಸವದ ಭಾವೈಕ್ಯತೆಯ …

Read More »

ರೈತ ಹೋರಾಟಕ್ಕೆ ಬೆಂಬಲಿಸಿ ಮೂಡಲಗಿ ಸಂಪೂರ್ಣ ಬಂದ್

ಮೂಡಲಗಿ,  ಗುರ್ಲಾಪೂರ ಕ್ರಾಸ್ ದಲ್ಲಿ ಕಳೆದ ಏಳು ದಿನಗಳಿಂದ ರೈತರು ಕಬ್ಬಿನ ದರ ನಿಗದಿಗಾಗಿ ಮಾಡುತ್ತಿರುವಂತ ಹೋರಾಟಕ್ಕೆ ಬೆಂಬಲಿಸಿ ಮೂಡಲಗಿ ಪಟ್ಟಣ ಸಂಪೂರ್ಣ ಬಂದ್ ಮಾಡಲಾಗಿತ್ತು. ಗುರುವಾರ ಮುಂಜಾನೆ ಹತ್ತು ಗಂಟೆಯಿಂದ ಸಹಕಾರಿ ಸಂಘಗಳ ಒಕ್ಕೂಟದ ಸದಸ್ಯರು, ಸಹಕಾರಿ ಸಂಘಗಳ ಪದಾಧಿಕಾರಿಗಳು, ಎಲ್ಲ ತರಹದ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು, ಉದ್ಯಮಿಗಳು, ಎಬಿವಿಪಿ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಅಂಗಡಿ-ಮುಗ್ಗಟ್ಟು, ಸಹಕಾರಿ ಸೊಸೈಟಿಗಳನ್ನು ಬಂದ್ ಮಾಡಿ ಟೈರಗೆ ಬೆಂಕಿ ಹಚ್ಚಿ ಆಕ್ರೋಶ …

Read More »

ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿಗೆ ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಿರಿಯ ಕಲಾವಿದ, ಸಾಹಿತಿ, ಸರಳ ನಡೆ, ನುಡಿ ವ್ಯಕ್ತಿತ್ವದ ಹಿರಿಯ ಜೀವಿ ಈಶ್ವರಚಂದ್ರ ಬೆಟಗೇರಿ ಅವರು ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಸ್ಥಳೀಯ ಹಿರಿಯ ಕಲಾವಿದ ಸಾಹಿತಿ ಈಶ್ವರಚಂದ್ರ ಬೆಟಗೇರಿ ಅವರ ಸಾಧನೆಗೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಕನ್ನಡಪರ ಹೋರಾಟಗಾರರು, ಗಣ್ಯರು, ಕನ್ನಡಾಭಿಮಾನಿಗಳು, ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ, ರಂಗಭೂಮಿ, ಸಾಹಿತ್ಯಕ್ಷೇತ್ರ ಸೇರಿದಂತೆ ವಿವಿಧ ವಲಯದಲ್ಲಿ ಸಲ್ಲಿಸಿದ ಅನುಪಮ ಸೇವೆ ಮತ್ತು ಅವರ …

Read More »

ಶಿಕ್ಷಣವು ಕೇವಲ ಪುಸ್ತಕದ ಅಕ್ಷರಗಳಲ್ಲ, ಭವಿಷ್ಯ ನಿರ್ಮಾಣದ ಅಡಿಗಲ್ಲು: ಅರಿಹಂತ ಬಿರಾದಾರ ಪಾಟೀಲ

ಬೆಟಗೇರಿ: ಈ ಪ್ರಸಕ್ತ ವರ್ಷ ನಮ್ಮ ಗುರಿ ಶೇಕಡಾ ನೂರರಷ್ಷು ಎಸ್‍ಎಸ್‍ಎಲ್‍ಸಿ ಫಲಿತಾಂಶ ಮಾಡಬೇಕೆಂಬ ಭರವಸೆಯಿದೆ. ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಉದಗಟ್ಟಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಅರಿಹಂತ ಬಿರಾದಾರ ಪಾಟೀಲ ಹೇಳಿದರು. ಗೋಕಾಕ ತಾಲೂಕಿನ ಉದಗಟ್ಟಿ ಸರಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಪಾಲಕರ ಮತ್ತು ತಾಯಂದಿರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣವು ಕೇವಲ ಪುಸ್ತಕದ ಅಕ್ಷರಗಳಲ್ಲ, ಭವಿಷ್ಯ …

Read More »

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಶಿಫಾರಸು ಮಾಡಲು ಆಗ್ರಹಿಸಿ ಮನವಿ

ಮೂಡಲಗಿ: ಕರ್ನಾಟಕ ರಾಜ್ಯದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರವಾಗಿ ಶಿಫಾರಸು ಮಾಡಲು ಆಗ್ರಹಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮೂಡಲಗಿ ತಹಶೀಲ್ದಾರ ಮುಖಾಂತರ ಮೂಡಲಗಿ ತಾಲೂಕಾ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಕುರುಬ ಸಮುದಾಯವನ್ನು ಕೇಂದ್ರದ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತಂತೆ ಕೇಂದ್ರ ಸರಕಾರ ಬುಡಕಟ್ಟು ಆಯೋಗದವರು ಕರ್ನಾಟಕ ರಾಜ್ಯ ಸರಕಾರದಿಂದ ವರದಿ ಕೇಳರುವದಾಗಿ ವಿಶ್ವಸನೀಯವಾಗಿ ತಿಳಿದು …

Read More »

ಮೂಡಲಗಿ ಶ್ರೀ ವೇಮನ್ ಸೊಸೈಟಿಗೆ 2.28 ಕೊಟಿ ರೂ. ಲಾಭ

ಮೂಡಲಗಿ,: ಪಟ್ಟಣದ ಶ್ರೀ ವೇಮನ್ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಪ್ರಸಕ್ತ ಆರ್ಥಿಕ ವರ್ಷದ ಕೊನೆಯಲ್ಲಿ 2.28 ಕೋಟಿ ರೂ. ನಿವ್ವಳ ಲಾಭವನ್ನು ಪಡೆದು ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿ ಅಧ್ಯಕ್ಷ ಸಂತೋಷ ಸೋನವಾಲಕರ ಅವರು ಹೇಳಿದರು. ಪಟ್ಟಣದ ಶ್ರೀ ವೇಮನ್ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ 24 ನೇ ವರ್ಷದ ಸೋಮವಾರ ಸರ್ವಸಾಧಾರಣಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು ಸದ್ಯ ಶೇರು ಬಂಡವಾಳ 3.37 ಕೋಟಿ ರೂ, ಠೇವುಗಳು …

Read More »

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಕೆಲಸ ಮಾಡುತೆವೇ- ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕಣಗಲಾ(ತಾ.ಹುಕ್ಕೇರಿ): ಎಲ್ಲ ಸಮಾಜಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ‌ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಸೆ.28 ರಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಚುನಾವಣೆ ನಡೆಯಲಿರುವ ನಿಮಿತ್ತ ಹುಕ್ಕೇರಿ ತಾಲೂಕಿನ ಕಣಗಲಾ ಜಿ.ಪಂ. ವ್ಯಾಪ್ತಿಯ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಸರ್ವ ಸಮಾಜಗಳ ಏಳ್ಗೆಯೇ ನಮ್ಮ ಪ್ರಮುಖ ಆದ್ಯತೆ ಆಗಿದೆ ಎಂದು ತಿಳಿಸಿದರು. ಲಿಂಗಾಯತರು, ಹಾಲುಮತ, …

Read More »