ಡಿ.30ಮತ್ತು 31ರಂದು “ಚೈತನ್ಯ ಬೆಳ್ಳಿ ಹಬ್ಬ-2022” ಕಾರ್ಯಕ್ರಮ
ಮೂಡಲಗಿ: ಪಟ್ಟಣದ ಚೈತನ್ಯ ಗ್ರುಪ್ಸ್‍ನ ಚೈತನ್ಯ ಆಶ್ರಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಚೈತನ್ಯ ಬೆಳ್ಳಿ ಹಬ್ಬ-2022ರ ಕಾರ್ಯಕ್ರಮ ಡಿ.30 ಮತ್ತು 31 ರಂದು ಶಾಲಾ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಆರ್.ಎಸ್ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಡಿ.30 ರಂದು ಸಂಜೆ 5 ಗಂಟೆಗೆ ಜರುಗುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಚೈತನ್ಯ ಕನ್ನಡ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಎ.ಎಲ್.ಶಿಂಧಿಹಟ್ಟಿ ಅಧ್ಯಕ್ಷತೆ ವಹಿಸುವರು, ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಪಿಎಸ್‍ಐ ಎಚ್.ವಾಯ್.ಬಾಲದಂಡಿ, ಭಾರತಿ ಪಾಟೀಲ, ಎಸ್.ಎಮ್.ಕಮದಾಳ, ಟಿ.ಬಿ.ಕೆಂಚರಡ್ಡಿ, ವಾಯ್.ಬಿ.ಪಾಟೀಲ, ವಿಜಯ ಹೊರಟ್ಟಿ ಭಾಗವಹಿಸುವರು.
ಡಿ.31 ರಂದು ಸಂಜೆ 5ಕ್ಕೆ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆ ಚೈತನ್ಯ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಎಸ್.ಎಮ್.ಕಮದಾಳ ವಹಿಸುವರು, ಚಿಕ್ಕೋಡಿ ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಡಿ.ಜಿ.ಮಹಾತ್, ನಿಪ್ಪಾಣಿ ಕ್ಷೇತ್ರ ಶೀಕ್ಷಣಾಧಿಕಾರಿ ರೇವತಿ ಮಠದ, ಎ.ಎಲ್.ಶಿಂದಿಹಟ್ಟಿ, ಟಿ.ಬಿ.ಕೆಂಚರಡ್ಡಿ, ಶ್ರೀಮತಿ ಬಿ.ವಾಯ್.ಪಾಟೀಲ, ಯಲ್ಲಗೌಡ ಪಾಟೀಲ, ವಿಜಯ ಹೊರಟ್ಟಿ ಭಾಗವಿಸುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದಾರೆ.
IN MUDALGI Latest Kannada News