ಚಂದಮಾಮ ಚಿತ್ರಕಾರ ಇನ್ನಿಲ್ಲ
ಚಂದಮಾಮ ಪುಸ್ತಕದಲ್ಲಿ ಚೆಂದದ ಚಿತ್ರಗಳನ್ನು ರಚಿಸುವ ಮೂಲಕ ನನ್ನಂತಹ ಕೋಟ್ಯಾಂತರ ಮಕ್ಕಳನ್ನು ಅಂದು ಕಲ್ಪನಾ ಲೋಕದಲ್ಲಿ ತೇಲಿಸಿದ್ದ ಕಲಾತಪಸ್ವಿ ಶಂಕರ್ (ಕೆ.ಸಿ.ಶಿವಶಂಕರನ್) ಇಂದು ನಿಧನರಾದರಂತೆ.
1950ರ ದಶಕದಲ್ಲಿ 300 ರೂಪಾಯಿ ಸಂಬಳಕ್ಕೆ ಕೆಲಸ ಆರಂಭಿಸಿದ್ದ ಅವರು 2013ರಲ್ಲಿ ಕೆಲಸ ನಿಲ್ಲಿಸಿದಾಗ ಪಡೆಯುತ್ತಿದ್ದುದು ಕೇವಲ 20,000 ಸಾವಿರ ರೂಪಾಯಿ ಸಂಬಳ ಮಾತ್ರವಂತೆ.

ಬಹುಶಃ ಇಂತಹ ಮಹಾನ್ ಕಲಾವಿದ ಯೂರೋಪಿನ ಯಾವುದೋ ದೇಶದಲ್ಲಿ ಜನಿಸಿದ್ದರೆ ಜಗತ್ತು ಅವರಿಗೆ ನೀಡುತ್ತಿದ್ದ ಗೌರವವೇ ಬೇರೆ ಇತ್ತು ಎನಿಸುತ್ತದೆ. ಆದರೆ ಇದ್ದುದರಲ್ಲೇ ತೃಪ್ತಿ ಹೊಂದಿ ದೇಶದ ಕೋಟ್ಯಾಂತರ ಮಕ್ಕಳನ್ನು ತೃಪ್ತಿ ಪಡಿಸಲು, ಆ ಮೂಲಕ ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಜೀವಮಾನವನ್ನು ಸವೆಸಿದ ಮಹಾನ್ ಕಲಾವಿದನಿಗೆ ಅಂತಿಮ ನಮನಗಳು.,