ಚುಟುಕು ಸಾಹಿತ್ಯ ಪರಿಷತ್‍ಗೆ ಅಧ್ಯಕ್ಷರಾಗಿ ಚಿದಾನಂದ ಹೂಗಾರ ನೇಮಕ
ಮೂಡಲಗಿ: ಮೂಡಲಗಿ ತಾಲ್ಲೂಕಾ ಚುಟುಕು ಸಾಹಿತ್ಯ ಪರಿಷತ್‍ಗೆ ಅಧ್ಯಕ್ಷರಾಗಿ ಶಿವಾಪುರ (ಹ) ಗ್ರಾಮದ ಚಿದಾನಂದ ಹೂಗಾರ ಅವರು ನೇಮಕವಾಗಿದ್ದಾರೆ.
ಪದಾಧಿಕಾರಿಗಳು: ಡಾ. ಮಹಾದೇವ ಪೋತರಾಜ (ಕಾರ್ಯಾಧ್ಯಕ್ಷರು), ಪ್ರಕಾಶ ಮೇತ್ರಿ (ಪ್ರಧಾನ ಕಾರ್ಯದರ್ಶಿ), ದುರ್ಗಪ್ಪ ದಾಸನ್ನವರ (ಖಜಾಂಚಿ).
ಕಾರ್ಯಕಾರಣಿ ಸದಸ್ಯರು: ಯಾದವಾಡದ ಬಸಪ್ಪ ಇಟ್ಟನ್ನವರ, ವೈ.ಬಿ. ಕಳ್ಳಿಗುದ್ದಿ, ಹಳ್ಳೂರದ ಮಹಾರಾಜ ಸಿದ್ದು, ರಾಜಾಪೂರದ ಸದಾಶಿವ ಯಕ್ಸಂಬಿ, ಶಿವಕುಮಾರ ಕೋಡಿಹಾಳ, ಮೆಹಬೂಬ್ ಶೇಖಬಡೆ, ಬಾಲಪ್ಪ ನಂದಿ, ಶಿವರಾಜ ಕಾಂಬಳೆ, ಬಸಪ್ಪ ಹೆಬ್ಬಾಳ, ಸವಿತಾ ದ್ಯಾಗಾನಟ್ಟಿ, ರಾಜಶ್ರೀ ಹಳ್ಳೂರ ಅವರು ಆಯ್ಕೆಯಾಗಿರುವರು.
ಚುಟುಕು ಸಾಹಿತ್ಯ ಪರಿಷತ್‍ನ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಎಸ್. ಶಾಸ್ತ್ರೀ ಮತ್ತು ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ ಅವರು ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿರುವರು.
IN MUDALGI Latest Kannada News