Breaking News
Home / Uncategorized / ಒಂದು ಪುಸ್ತಕ ಹೊರ ತರುವದು ಎಂದರೆ ಅದು ಗಜಪ್ರಸವ ಇದ್ದಂತೆ- ಸಾಹಿತಿ ಸಂಗಮೇಶ ಗುಜಗೊಂಡ

ಒಂದು ಪುಸ್ತಕ ಹೊರ ತರುವದು ಎಂದರೆ ಅದು ಗಜಪ್ರಸವ ಇದ್ದಂತೆ- ಸಾಹಿತಿ ಸಂಗಮೇಶ ಗುಜಗೊಂಡ

Spread the love

ಮೂಡಲಗಿ : ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ಹಾಗೂ ಮಡಿವಾಳ ಪ್ರಕಾಶನ ಕೊಣ್ಣೂರ ಇವರ ಸಹಯೋಗದಲ್ಲಿ ಚೈತನ್ಯ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿ   ಮೂಡಲಗಿಯಲ್ಲಿ ಅನಿಲ ಮಡಿವಾಳರ ರವರ “ಭೂಮಿ ನಂಬಿ ಬದುಕೇವು!” ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿತು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿಗಳಾದ ಸಂಗಮೇಶ ಗುಜಗೊಂಡ ರವರು ಒಂದು ಪುಸ್ತಕ ಹೊರ ತರುವದು ಎಂದರೆ ಅದು ಗಜಪ್ರಸವ ಇದ್ದಂತೆ ಎಂದು ಹೇಳುತ್ತಾ ಕವಿಯ ಭಾವನೆಗಳನ್ನು ಭಿತ್ತರಿಸುವ ಕಾರ್ಯವನ್ನು ಕವನಗಳು ಕಟ್ಟಿಕೊಡುತ್ತವೆ ಎಂದರು.

ಪುಸ್ತಕ ಪರಿಚಯಿಸುತ್ತಾ ಮಾತನಾಡಿದ ಶಿವಕುಮಾರ ಕೋಡಿಹಾಳರವರು ಭೂಮಿ ಮತ್ತು ಸೈನಿಕರ ಕಾರ್ಯ ಬಹು ದೊಡ್ಡದು ಅದರ ಮಹತ್ವದ ಸಾರವನ್ನು ಈ ಕವನ ಸಂಕಲನ ಒಳಗೊಂಡಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚಿದಾನಂದ ಮ ಹೂಗಾರ ಮಾತನಾಡಿ ವೃತ್ತಿ ಮತ್ತು ಪ್ರವೃತ್ತಿಗಳು ಕೂಡಿದಾಗ ಕಾವ್ಯ ಸೃಷ್ಟಿ ಸಾಧ್ಯ ಎಂಬುದನ್ನು ಅನಿಲ ಮಡಿವಾಳರ ರವರು ತೋರಿಸಿದ್ದಾರೆ ಎಂದರು.

ಶ್ರೀ ಎಸ್. ಆರ್. ಸೋನವಾಲ್ಕರ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ. ಸಂಜಯ ಸಿಂಧಿಹಟ್ಟಿ, ಸಿದ್ರಾಮ ದ್ಯಾಗಾನಟ್ಟಿ, ಅನಿಲ ಮಡಿವಾಳರ ರವರು ಮಾತನಾಡಿದರು.

ನಂತರ ನಡೆದ ಚುಟುಕು ಗೋಷ್ಠಿಯಲ್ಲಿ ಶೈಲಜಾ ಬಡಿಗೇರ, ಗೋದಾವರಿ ದೇಶಪಾಂಡೆ, ನಿಂಗಪ್ಪ ಸಂಗ್ರೇಜಿಕೊಪ್ಪ, ಯಲ್ಲಪ್ಪ ಗದಾಡಿ,ವಿದ್ಯಾಶ್ರೀ ಪೂಜಾರಿ, ರೂಪಾ ಕೌಜಲಗಿ, ಭಾಗೀರಥಿ ಕುಳಲಿ,ಬಾಳೇಶ ಕೊಚ್ಚರಗಿ,ಕಲ್ಲಪ್ಪ ಡೋಣಿ, ದುಂಡಪ್ಪ ಕಮತಿ,ಬಾಳೇಶ ಫಕಿರಪ್ಪನವರ, ದುರ್ಗಪ್ಪ ದಾಸನ್ನವರ ಚುಟುಕುಗಳನ್ನು ವಾಚಿಸಿದರು.

ಚುಟುಕು ಗೋಷ್ಠಿ ಉದ್ದೇಶಿಸಿ ಮಾತನಾಡಿದ ಜನಪದ ಜಾಣ ಶಬ್ಬೀರ್ ಡಾಂಗೆ ಯವರು ಚುಟುಕುಗಳನ್ನು ರಚಿಸುವ ಮೂಲಕ ಅವುಗಳನ್ನು ತಂತ್ರಜ್ಞಾನದ ಮೂಲಕ ಜಾಲತಾಣಗಳಲ್ಲಿ ಬಳಸುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಮ್ಮಣ್ಣ ಕೆಂಚರಡ್ಡಿ ಯವರು ಮೂಡಲಗಿ ತಾಲೂಕಿನಲ್ಲಿ ಸಾಹಿತ್ಯ ಕಾರ್ಯಕ್ರಮಗಳು ನಡೆಯುವ ಮೂಲಕ ಹೊಸ ಸಾಹಿತಿಗಳು ಉದಯಿಸುತ್ತಿರುವದು ಸಂತೋಷ ತಂದಿದೆ ಎಂದರು. ಎಸ್.ಎಂ.ಕಮದಾಳ, ಸಿದ್ದು ಮಹಾರಾಜ, ಬಾಳಪ್ಪ ನಂದಿ, ವಾಯ್. ಬಿ. ಕಳ್ಳಿಗುದ್ದಿ, ಗಂಗಾಧರ ಬಿಜಗುಪ್ಪಿ, ಎ. ಎಚ್. ಒಂಟಗೋಡಿ, ಬಿ. ವಾಯ್. ಶಿವಾಪೂರ ಉಪಸ್ಥಿತರಿದ್ದರು.

ರಾಜೇಶ್ವರಿ ಹಳ್ಳೂರ ಪ್ರಾರ್ಥಿಸಿದರು, ದುರ್ಗಪ್ಪ ದಾಸನ್ನವರ ಸ್ವಾಗತಿಸಿದರು, ಪ್ರಕಾಶ ಮೇತ್ರಿ ಕಾರ್ಯಕ್ರಮ ನಿರೂಪಿಸಿದರು. ಮಹಾದೇವ ಪೋತರಾಜ ವಂದಿಸಿದರು.


Spread the love

About inmudalgi

Check Also

ಲಯನ್ಸ್ ಕ್ಲಬ್‍ನ 100ನೇ ಅನ್ನದಾಸೋಹ

Spread the loveಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ