*ವಿದ್ಯಾರ್ಥಿ ಬದುಕಿನ ಎಳಿಗೆಗ ತಂತ್ರಜ್ಞಾನ ಬಳಸಿಕೊಳ್ಳಬೇಕು: ಶ್ರೀ ಶ್ರೀಪಾದಭೋಧ ಸ್ವಾಮಿಜಿ*
ಮೂಡಲಗಿ:- ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ನಿಟ್ಟಿನಲ್ಲಿ ತಂತ್ರಜ್ಞಾನ ಆಧಾರಿತ ಯುಗದಲ್ಲಿ ಬದುಕುತ್ತಿರುವ ಈ ದಿನಗಳಲ್ಲಿ ಕರ್ನಾಟಕ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಜ್ಞಾನದೀಪ್ತಿಯೋಜನೆಯಲ್ಲಿ ಎಲ್ಲಾ ಸರ್ಕಾರಿ ಪ್ರಥಮದರ್ಜೆಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ನೀಡುತ್ತಿರುವದು ಮಕ್ಕಳ ಭವಿಷ್ಯಕ್ಕೆ ಆಶಾಕಿರಣವಾಗಿದೆ. ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಸ್ಥಳೀಯ ಶ್ರೀ ಶಿವಭೋಧರಂಗ ಮಠದ ಸ್ವಾಮಿಜಿಗಳಾದ ಶ್ರೀ ಶ್ರೀಪಾದಬೋಧ ಸ್ವಾಮಿಜಿಯವರು ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ಶ್ರೀ ಶ್ರೀಪಾಧಬೋಧ ಸ್ವಾಮಿಜಿ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡುತ್ತಾ, ಉಪನ್ಯಾಸಕರು ಮಕ್ಕಳ ಭವಿಷ್ಯದತ್ತ ಗಮನ ಹರಿಸಬೇಕಾದ ಅನಿವಾರ್ಯತೆಯಿದೆ. ಆಧುನಿಕತೆಯ ಭರಾಟೆಯಲ್ಲಿ ಇಂದಿನ ಯುವಜನಾಂಗ ದಾರಿತಪ್ಪುತ್ತಿದೆ. ಅದನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ಉಪನ್ಯಾಸಕರ ಮೇಲಿದೆ. ಈ ಜವಾಬ್ದಾರಿಯನ್ನು ಅರಿತು ಭವ್ಯ ಭಾರತದ ಯುವ ಜನತೆ ಭವಿಷ್ಯವನ್ನು ರೂಪಿಸಬೇಕೆಂದು ಈ ಲ್ಯಾಪಟಾಪ್‍ಗಳ ಸರಿಯಾದ ಬಳಕೆಯ ಬಗ್ಗೆ ಗಮನಹರಿಸಬೇಕು. ಶಾಸಕರಾದ ಬಾಲಚಂದ್ರ ಜಾರಕಿಹೋಳಿಯವರು ಶಿಕ್ಷಣ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ ಎಂದುತಿಳಿಸಿದರು.
ತಹಸೀಲ್ದಾರ ಡಿ,ಜಿ ಮಹಾತ ಅವರು ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಆಶಾಕಿರಣವಾಗಿ ಬೆಳಗುತ್ತಿರುವ ಶ್ರೀ ಶ್ರೀಪಾದಭೋಧ ಸ್ವಾಮಿಜಿ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಕಾರ್ಯ ಅವಿಸ್ಮರಣೀಯ. ಮಹಾವಿದ್ಯಾಲಯದ ಆಶೋತ್ತರಗಳಿಗೆ ವಿದ್ಯಾರ್ಥಿಗಳು ಸ್ಪಂದಿಸಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ. ಆರ್. ಬಿ. ಕೊಕಟನೂರ ಮಾತನಾಡಿ, ಉನ್ನತ ಶಿಕ್ಷಣದ ಆಶಯಗಳನ್ನು ಈಡೇರಿಸಲು ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ತಲುಪಲೆಂಬ ಉದ್ದೇಶದಿಂದ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.ಅದರಲ್ಲಿ ಈ ಉಚಿತ ಲ್ಯಾಪಟಾಪ್ ಯೋಜನೆಯು ಒಂದಾಗಿದ್ದು ಅದರ ಸದುಪಯೋಗವಾಗಬೇಕು. ಶ್ರಿಪಾದಬೋಧ ಸ್ವಾಮಿಜಿಯವರ ಆರ್ಶಿವಾದ ಮತ್ತು ಮಾನ್ಯ ಶಾಸಕರಾದ ಬಾಲಚಂದ್ರ ಜಾರಕಿಹೋಳಿ ಇವರ ಮಾರ್ಗದರ್ಶನದಂತೆ ಮಹಾವಿದ್ಯಾಲಯ ಮುನ್ನಡೆಯುತ್ತಿದೆ ಎಂದರು..
ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ಮೂಡಲಗಿಯಪಿ.ಎಸ್,ಆಯ್. ಮಲ್ಲಿಕಾರ್ಜುನ ಸಿಂಧೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಅಜಿತ ಮನ್ನೀಕೇರಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು, ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷರಾದ ಸುಭಾಸ ಡವಳೇಶ್ವರ, ಚಂದ್ರು ಗಾಣಿಗ, ಪುರಸಭೆಯ ಸದಸ್ಯರಾದ ಜಯಾನಂದ ಪಾಟೀಲ್, ಹಣಮಂತ ಗುಡ್ಲಮನಿ, ಅನ್ವರ ನಧಾಫ್, ಆನಂದ ಟಪಾಲ್ದಾರ, ಸಿದ್ದು ಹಳ್ಳುರ,ಗಫಾರ ಡಾಂಗೆ, ಉಪನ್ಯಾಸಕರಾದ ನ್ಯಾಕ ಸಂಯೋಜಕರಾದ ಶ್ರೀಮತಿ ಅಶ್ವಿನಿ, ಸಂಯೋಜಕರಾದ ಶ್ರೀಮತಿ ಶಿವಲೀಲಾ ಎಚ್.ಬಿ.ಮುಂತಾದವರು ಪಾಲ್ಗೊಂಡಿದ್ದರು.
ಉಪನ್ಯಾಸಕರಾದ. ಚೇತನ್‍ರಾಜ್. ಬಿ. ಸ್ವಾಗತಿಸಿದರು. ಹನುಮಂತ ಕಾಂಬಳೆ ವಂದಿಸಿದರು. ಶಿವಾನಂದ ಚಂಡಕೆ ನಿರೂಪಿಸಿದರು.
ಪೋಟೋ ಕೈಪ್ಸನ್ – ಮೂಡಲಗಿ, ಲ್ಯಾಪ್‍ಟಾಪ್ ವಿರಣಾ ಸಮಾರಂಭದಲ್ಲಿ ಶ್ರೀ ಶ್ರೀಪಾದಬೋಧ ಸ್ವಾಮಿಜಿಯವರು ವಿದ್ಯಾಥಿಗಳನ್ನುದ್ದೇಶಿಸಿ ಮಾತನಾಡಿದರು.
ವರದಿ- ಈಶ್ವರ ಢವಳೇಶ್ವರ