Breaking News
Home / Recent Posts / ಸಮಾಜ ಸುಧಾರಣೆಗೆ ಮಠ ಮಾನ್ಯಗಳ ಪಾತ್ರ- ಮುಖ್ಯ- ಸಂಸದ ಈರಣ್ಣ ಕಡಾಡಿ

ಸಮಾಜ ಸುಧಾರಣೆಗೆ ಮಠ ಮಾನ್ಯಗಳ ಪಾತ್ರ- ಮುಖ್ಯ- ಸಂಸದ ಈರಣ್ಣ ಕಡಾಡಿ

Spread the love

ಘಟಪ್ರಭಾ: ಸಮಾಜ ಸುಧಾರಣೆಗೆ ಮಠ ಮಾನ್ಯಗಳ ಪಾತ್ರ ಮುಖ್ಯ, ಮಠಾಧೀಶರ ನಡೆ-ನುಡಿ, ಮಾರ್ಗದರ್ಶನ ನಮ್ಮೆರಿಗೂ ದಾರಿದೀಪ ಅವರ ಮಾರ್ಗದರ್ಶನದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸೋಣ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಶ್ರೀ ವಿರಕ್ತ ಮಠಕ್ಕೆ ಭೇಟಿ ನೀಡಿ, ಮ.ನಿ.ಪ್ರ.ಕಾಶಿನಾಥ ಮಹಾಸ್ವಾಮೀಜಿಗಳ ಹಾಗೂ ಪರಮಪೂಜ್ಯ ಶ್ರೀ ಪ್ರಭುಲಿಂಗ ಸ್ವಾಮೀಜಿಗಳ ದಿವ್ಯಾಶೀರ್ವಾದ ಪಡೆದು, ಅವರು ನೀಡಿದ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ನಾಡಿನ ಅನೇಕ ಮಠ ಮಂದಿರಗಳು ಉಚಿತ ಶಿಕ್ಷಣ, ದಾಸೋಹದಿಂದ ಬಡಮಕ್ಕಳು, ಕೂಲಿಕಾರ್ಮಿಕ ಮಕ್ಕಳು ವಿದ್ಯಾಭ್ಯಾಸ ಮಾಡಿ ಉತ್ತಮ ನಾಗರಿಕರಾಗಿ ಹೊರಹೊಮ್ಮಿದಾರೆ ಎಂದರಲ್ಲದೇ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿಕ್ಷಣಕ್ಕೆ ಮಹತ್ವ ನೀಡಿದ್ದಾರೆ.

ಅವರ ಮಾರ್ಗದರ್ಶನದಲ್ಲಿ ದೇಶ ಪ್ರಗತಿ ಕಂಡಿದೆ ಎಂದರು.
ಘಟಪ್ರಭಾದ ಪೂಜ್ಯ ಶ್ರೀ ವಿರುಪಾಕ್ಷ ದೇವರು ಪ್ರಮುಖರಾದ ರಾಜು ಕತ್ತಿ, ಸುರೇಶ ಪಾಟೀಲ, ಗುರುಬಸಯ್ಯ ಕರ್ಫೂರಮಠ, ಮಹಾಂತೇಶ ಉದಗಟ್ಟಿಮಠ, ಮಹಾನಂದ ಭೂಶಿ, ಅಜ್ಜಪ್ಪ ಕುರಣಿ, ಬಸವರಾಜ ಪ್ಯಾಟಿ, ರಾಚಯ್ಯ ಹಿರೇಮಠ, ಸಂತೋಷ ಭೂಶಿ, ಅರುಣ ರಾಜೇನ್ನವರ, ಪರಪ್ಪ ಗಿರೆಣ್ಣವರ ಸೇರಿದಂತೆ ಅನೇಕ ಭಕ್ತಾಧಿಗಳು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ