Breaking News
Home / Fashion / Relationships / ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆಯಿಂದ ಪ್ರಜಾಪ್ರಭುತ್ವ ದಿನಾಚರಣೆ

ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆಯಿಂದ ಪ್ರಜಾಪ್ರಭುತ್ವ ದಿನಾಚರಣೆ

Spread the love

ಗೋಕಾಕ: ಇಲ್ಲಿಯ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆಯ ಜಿಲ್ಲಾ ಸಮಿತಿಯಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಯಿತು.

ಸಮಾರಂಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಬಹಳೇಶ್ ಬನ್ನಟ್ಟಿ ಮತ್ತು ಜಿಲ್ಲಾ ಸಂಚಾಲಕ ಆನಂದ್ ತಾಯವ್ವಗೋಳ ಮಾತನಾಡಿ, ವಿಶ್ವಸಂಸ್ಥೆ ಮತ್ತು ಇತರೆ ಅಂತರರಾಷ್ಟ್ರೀಯ ಸಂಸ್ಥೆಗಳು ಮಾನವ ಹಕ್ಕುಗಳ ರಕ್ಷಣೆ ಅಭಿವೃದ್ಧಿ ಶಾಂತಿ ಮತ್ತು ಸ್ಥಿರತೆಯ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲು ಅದರ ಮೌಲ್ಯಗಳನ್ನು ತತ್ವಗಳನ್ನು ಎತ್ತಿ ಹಿಡಿಯಲು ಅಂತರಾಷ್ಟ್ರೀಯ ಪ್ರಜಾ ಪ್ರಭುತ್ವವನ್ನು ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಪ್ರಜಾ ಪ್ರಭುತ್ವವು ಸಮಾನತೆ ಸ್ವಾತಂತ್ರ‍್ಯ ಮತ್ತು ಭಾತೃತ್ವ ಸೌಹಾರ್ದತೆ ಭದ್ರಬುನಾದಿ ಮೇಲೆ ನಿಂತಿದೆ ಆದ್ದರಿಂದ ಸಮಾನತೆ ಸ್ವಾತಂತ್ರ‍್ಯ ಭಾತೃತ್ವ ಆದರ್ಶಗಳು ಭಾರತೀಯ ಸಂವಿಧಾನ ಪೀಠಿಕೆಯ ಭಾಗವಾಗಿದೆ ಎಂದರು.
ಸರಕಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಇವತ್ತು ಕರ್ನಾಟಕದ ಉತ್ತರ ತುದಿ ಬೀದರ್ ಜಿಲ್ಲೆಯಿಂದ ದಕ್ಷಿಣ ತುದಿ ಚಾಮರಾಜನಗರದವರೆಗೆ ಮಾನವ ಸರ್ಪಳಿಯನ್ನು ರಚಿಸಿ ಸಂವಿಧಾನ ಪೀಠಿಕೆ ವಾಚನ ಮಾಡುವ ಮೂಲಕ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಹಾಗೂ ಜಾಗತಿಕ ಪ್ರಜಾಪ್ರಭುತ್ವ ತತ್ವಗಳನ್ನ ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದು ನಮ್ಮ ದಲಿತ ಸಂಘರ್ಷ ಪದಾಧಿಕಾರಿಗಳು ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು. .
. ಈ ಸಮಯದಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಲಕ್ಕಪ್ಪ ತೆಳಗಡೆ, ಅಲ್ಪಸಂಖ್ಯಾತ ಘಟಕದ ವಿಭಾಗಿ ಸಂಚಾಲಕ ಅಲ್ಲಾಭಕ್ಷ ಮುಲ್ಲಾ, ಜಿಲ್ಲಾ ಸಂಚಾಲಕ ರಂಜಾನ್ ಬಿಜಾಪುರ, ಬೆಳಗಾವಿ ಜಿಲ್ಲಾ ಸಂಘಟನಾ ಸಂಚಾಲಕರಾದ ಅಬ್ದುಲ್‌ಸಾಬ್ ಮುಲ್ಲಾ, ಅಬ್ದುಲ್‌ರೌಫ ಖಾಜಿ ಮೂಡಲಗಿ ತಾಲೂಕ ಸಂಚಾಲಕರು ಬಸಪ್ಪ ಭೀಮಪ್ಪ ತಳವಾರ್. ಉಸ್ಮಾನ್ ಮದಭಾವಿ ಹುಸೇನ್ ಉದಗಟ್ಟಿ ಶಂಕರ್ ಉದ್ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ