Breaking News
Home / Uncategorized / ಕಲಾರಕೊಪ್ಪ ಚಾಮುಂಡೇಶ್ವರಿ ಜಾತ್ರೆಯಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ

ಕಲಾರಕೊಪ್ಪ ಚಾಮುಂಡೇಶ್ವರಿ ಜಾತ್ರೆಯಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಗೋಕಾಕ: ಅರಭಾವಿ ಕ್ಷೇತ್ರವು ಕಳೆದ ೨೦ ವರ್ಷಗಳಿಂದ ಶಿಕ್ಷಣದಲ್ಲಿ ಮಹತ್ತರ ಸಾಧನೆ ಮಾಡುತ್ತಿದ್ದು, ಕಲಾರಕೊಪ ಗ್ರಾಮವೂ ಸಹ ಇದಕ್ಕೆ ಹೊರತಾಗಿಲ್ಲ. ಇಲ್ಲಿ ಸುಮಾರು ಜನ ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮಸ್ಥರ ಶೈಕ್ಷಣಿಕ ಕಾಳಜಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಮಂಗಳವಾರ ಸಂಜೆ ತಾಲ್ಲೂಕಿನ ಕಲಾರಕೊಪ್ಪ ಗ್ರಾಮದ ಚಾಮುಂಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲಾರಕೊಪ್ಪ ಗ್ರಾಮವು ಮೊದಲಿಗಿಂತ ಹೆಚ್ಚು ಶಿಕ್ಷಣದಲ್ಲಿ ಬದಲಾವಣೆಯಾಗುತ್ತ ಬರುತ್ತಿದೆ.
ಇದೊಂದೇ ಗ್ರಾಮದಲ್ಲಿ ೬ ಜನ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ
ಸರ್ಕಾರದ ವಿವಿಧ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಸಮಾಜದಲ್ಲಿ ಸುಧಾರಣೆ ತರುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಲಾರಕೊಪ್ಪ ಮಾದರಿ ಗ್ರಾಮವಾಗಿ ಪರಿವರ್ತನೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಲಾರಕೊಪ್ಪ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರದ ಹಲವಾರು
ಯೋಜನೆಗಳನ್ನು ಅನುಷ್ಟಾನ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲಾಗಿದೆ. ಗ್ರಾಮಸ್ಥರ ಒಗ್ಗಟ್ಟಿನಿಂದ ಯೋಜನೆಗಳನ್ನು
ಪಡೆಯಲು ಸಾಧ್ಯವಾಗಿದೆ. ಚಿಕ್ಕ ಗ್ರಾಮವಾಗಿದ್ದರೂ ಇಲ್ಲಿನ ಹಿರಿಯರು ಶಿಕ್ಷಣಕ್ಕೆ
ಒತ್ತು ನೀಡುತ್ತಿದ್ದಾರೆ ಎಂದು ತಿಳಿಸಿದರು.


ಕಲಾರಕೊಪ್ಪ ಗ್ರಾಮದಲ್ಲಿ ಪ್ರತಿಷ್ಟಾಪನೆಗೊಂಡಿರುವ ಚಾಮುಂಡೇಶ್ವರಿ
ತಾಯಿಯ ದೇವರ ದರ್ಶನ ಮಾಡಿದರೆ ಸಾಕ್ಷಾತ್; ಮೈಸೂರು ಚಾಮುಂಡೇಶ್ವರಿ
ದರ್ಶನ ಮಾಡಿದ ಅನುಭವವಾಗುತ್ತದೆ. ತಾಯಿ ಚಾಮುಂಡೇಶ್ವರಿ ನಾಡಿನ ಸಮಸ್ತ ಜನರಿಗೆ ಸುಖ, ನೆಮ್ಮದಿ, ಆರೋಗ್ಯ ನೀಡಿ ಕರುಣಿಸಲಿ. ನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ರೈತರ ಬದುಕು ಬಂಗಾರವಾಗಲು ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮಾಡಲಿ ಎಂದು ಅವರು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಚಾಮುಂಡೇಶ್ವರಿ ದೇವರ ದರ್ಶನ
ಪಡೆದರು. ಕಲಾರಕೊಪ್ಪ ಗ್ರಾಮಸ್ಥರು ಶಾಸಕರನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮೆಳವಂಕಿ ಜಿ.ಪಂ. ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಉದಗಟ್ಟಿ
ಗ್ರಾ.ಪಂ. ಮಾಜಿ ಅಧ್ಯಕ್ಷ ಅರ್ಜುನ ಸನದಿ, ರವಿ ಪರುಶೆಟ್ಟಿ, ಮಾಜಿ ತಾ.ಪಂ. ಸದಸ್ಯ ಭೀಮಪ್ಪ ಗೌಡಪ್ಪನವರ,ಸಿದ್ದಪ್ಪ ಕಣವಿ,ಕಲ್ಲಪ್ಪ ಸಿಂಗನ್ನವರ, ಮಹಾದೇವ ಬಗಟಿ, ಪರಸಪ್ಪ ಬಗಟಿ, ರಾಯಪ್ಪ ಗೌಡಪ್ಪನವರ, ಸಿದ್ದಪ್ಪ ದಾಸಪ್ಪನವರ,
ರಾಯಪ್ಪ ಚಿಗಡೊಳ್ಳಿ, ಉಮೇಶ ನಾಯಿಕ, ದುಂಡಪ್ಪ ಶೇಡಬಾಳ, ಮುತ್ತಪ್ಪ
ದೊಡಮನಿ, ಯಲ್ಲಪ್ಪ ಬಗಟಿ, ರಾಯಪ್ಪ ಗೌಡಪ್ಪನವರ, ಪರಸಪ್ಪ ಕಣವಿ,
ಅಡಿವೆಪ್ಪ ಬಗಟಿ, ಮಲ್ಲಪ್ಪ ಹರಿಜನ, ದೇವಸ್ಥಾನದ ಟ್ರಸ್ಟ ಕಮೀಟಿ ಸದಸ್ಯರು,
ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

L

Spread the love(I Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ