Breaking News
Home / ಬೆಳಗಾವಿ / ಮಾಜಿ ಸಿಎಂ ಕೃಷ್ಣ ವಿಧಿವಶ- ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ

ಮಾಜಿ ಸಿಎಂ ಕೃಷ್ಣ ವಿಧಿವಶ- ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ

Spread the love

ಮಾಜಿ ಸಿಎಂ ಕೃಷ್ಣ ವಿಧಿವಶ- ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ

ಗೋಕಾಕ: ಪದ್ಮ ವಿಭೂಷಣ, ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ (೯೩) ಅವರ ನಿಧನಕ್ಕೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.
ನಗುಮುಖದ ಮೂಲಕ ತಮ್ಮದೇಯಾದ ವಿಶಿಷ್ಟ ಶೈಲಿಯ ರಾಜಕಾರಣದ ಮೂಲಕ ಗಮನ ಹರಿಸಿದ್ದ ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿ, ಸ್ಪಿಕರ್ ಆಗಿ, ಕೇಂದ್ರದ ಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಸುಮಾರು ಅರವತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದುಕೊಂಡು ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು. ಅದರಲ್ಲೂ ಬೆಂಗಳೂರಿನ ಪ್ರಗತಿಗಾಗಿ ವಿಶೇಷವಾಗಿ ಶ್ರಮಿಸಿದ್ದಲ್ಲದೇ ಸಿಲಿಕಾನ್ ಸಿಟಿ ಮತ್ತು ಐಟಿಬಿಟಿಯ ರೂವಾರಿಯಾಗಿದ್ದರು.ರಾಜ್ಯಕ್ಕೆ ಮತ್ತು ಈ ದೇಶಕ್ಕೆ ಅವರ ಕೊಡುಗೆ ಅನುಪಮವಾಗಿತ್ತು. ಶಾಸಕ ಮತ್ತು ಸಂಸದರಾಗಿದ್ದ ವೇಳೆ ಬಹುತೇಕ ಸ್ಥಾನಮಾನಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕೃಷ್ಣ ಅವರು ವರ್ಣರಂಜಿತ ರಾಜಕಾರಣಿ ಜತೆಗೆ ಶಿಸ್ತು ಬದ್ಧತೆಗೆ ಹೆಸರಾಗಿದ್ದರು. ಕೃಷ್ಣ ಅವರ ನಿಧನದಿಂದ ನಾಡಿಗೆ, ದೇಶಕ್ಕೆ ಅಪಾರ ಹಾನಿಯಾಗಿದ್ದು, ವೈಯಕ್ತಿಕವಾಗಿಯೂ ದುಃಖವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತನು ಕರುಣಿಸಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಾರ್ಥಿಸಿದ್ದಾರೆ.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ