Breaking News
Home / Recent Posts / ಅರಭಾವಿ ಶಾಸಕರ ಗೃಹ ಕಛೇರಿಯಲ್ಲಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ

ಅರಭಾವಿ ಶಾಸಕರ ಗೃಹ ಕಛೇರಿಯಲ್ಲಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ

Spread the love

ಅರಭಾವಿ ಶಾಸಕರ ಗೃಹ ಕಛೇರಿಯಲ್ಲಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ

ಗೋಕಾಕ : ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯನ್ನು ಅರಭಾವಿ ಶಾಸಕರ ಗೃಹ ಕಛೇರಿಯಲ್ಲಿ ಶನಿವಾರದಂದು ಸರಳವಾಗಿ ಆಚರಿಸಲಾಯಿತು.
ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಭಾರತ ಕಂಡ ಪ್ರಧಾನಿಗಳಲ್ಲಿ ವಾಜಪೇಯಿ ಅವರು ಅತ್ಯುತ್ತಮವಾಗಿದ್ದರು. ಇವರ ಆಡಳಿತದಲ್ಲಿ ದಕ್ಷ, ಪ್ರಾಮಾಣಿಕತೆ ಜೊತೆಗೆ ಇಡೀ ಜಗತ್ತೇ ಮೆಚ್ಚುವ ಆಡಳಿತ ನೀಡಿದ್ದರು. ಇವರೊಬ್ಬ ಅಜಾತ ಶತ್ರು. ಅನೇಕ ಅಭಿವೃದ್ಧಿಪರ ಯೋಜನೆಗಳು ಇವರ ಆಡಳಿತದಲ್ಲಿ ನಡೆದಿದ್ದವು. ದೇಶ ಕಂಡ ಮುತ್ಸದ್ಧಿ ರಾಜಕಾರಣಿ ದಿ. ವಾಜಪೇಯಿ ಅವರಾಗಿದ್ದರು ಎಂದು ಹೇಳಿದರು.
ಆಪ್ತ ಸಹಾಯಕರಾದ ನಿಂಗಪ್ಪ ಕುರಬೇಟ, ಲಕ್ಕಪ್ಪ ಲೋಕುರಿ, ಅಬ್ದುಲ್ ಮಿರ್ಜಾನಾಯ್ಕ, ಗುತ್ತಿಗೆದಾರ ಮಹಾದೇವ ಹಾರೂಗೇರಿ, ಮಾರುತಿ ಸರ್ವಿ, ಅಶೋಕ ಸರ್ವಿ, ಫಕೀರಪ್ಪ ಮಲ್ದೂರ, ಕಾಶೀಂ ಫಿರಜಾದೆ, ರಮೇಶ ಸಂಪಗಾಂವಿ, ಅಡಿವೆಪ್ಪ ಕಂಕಾಳಿ, ಅಸ್ಲಂ ಶೇಖ, ಬಿಜೆಪಿ ಪದಾಧಿಕಾರಿಗಳು ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.


Spread the love

About inmudalgi

Check Also

ದೇವರು, ತಾಯಿ-ತಂದೆ, ಪೂಜ್ಯರು ಮತ್ತು ಜನರ ಆಶೀರ್ವಾದದಿಂದ ನಾವು ಜಿಲ್ಲೆಯಲ್ಲಿಯೇ ಗಟ್ಟಿಯಾಗಿ ಜನರ ಮುಂದೆ ನಿಲ್ಲಲು ಕಾರಣವಾಗಿದೆ -ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love ಮೂಡಲಗಿ- ದೇವರು, ತಾಯಿ-ತಂದೆ, ಪೂಜ್ಯರು ಮತ್ತು ಜನರ ಆಶೀರ್ವಾದದಿಂದ ನಾವು ಜಿಲ್ಲೆಯಲ್ಲಿಯೇ ಗಟ್ಟಿಯಾಗಿ ಜನರ ಮುಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ