Breaking News
Home / ಬೆಳಗಾವಿ / ಭಾರತವು ವಿಶ್ವಕ್ಕೆ ಗುರುವಾಗುವ ಕಾಲ ಸನ್ನಿಹಿತವಾಗಿದೆ – ಬೆಳಗಾವಿ ಜಿಲ್ಲಾ ( ಗ್ರಾ) ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ

ಭಾರತವು ವಿಶ್ವಕ್ಕೆ ಗುರುವಾಗುವ ಕಾಲ ಸನ್ನಿಹಿತವಾಗಿದೆ – ಬೆಳಗಾವಿ ಜಿಲ್ಲಾ ( ಗ್ರಾ) ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ

Spread the love

 

ಗೋಕಾಕ – ಪ್ರಧಾನಿ ನರೇಂದ್ರ ಮೋದಿಯವರು ಕಳೆದ ೧೧ ವರ್ಷಗಳಿಂದ ಭಾರತದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತವು ವಿಶ್ವಕ್ಕೆ ಗುರುವಾಗುವ ಕಾಲ ಸನ್ನಿಹಿತವಾಗಿದೆ ಎಂದು ಬೆಳಗಾವಿ ಜಿಲ್ಲಾ ( ಗ್ರಾ) ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ಹೇಳಿದರು.
ಇಲ್ಲಿಯ ಎನ್ಎಸ್ಎಫ್ ಕಚೇರಿಯಲ್ಲಿ ಶುಕ್ರವಾರದಂದು ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಹನ್ನೊಂದು ವರ್ಷಗಳ ಸಾಧನೆಗಳನ್ನು ಪ್ರತಿ ಮತಗಟ್ಟೆಗಳ ಮೂಲಕ ತಿಳಿಸುವ ಕೆಲಸ ಕಾರ್ಯಕರ್ತರದ್ದು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ೧೧
ವರ್ಷಗಳಲ್ಲಿ ದೇಶವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನೂರಾರು ಹೊಸ ಹೊಸ ಯೋಜನೆಗಳನ್ನು ಬಡವರಿಗೆ ದೊರಕಿಸಿಕೊಟ್ಟಿದ್ದಾರೆ.
ಆಪರೇಷನ್ ಸಿಂದೂರ ಮೂಲಕ ಪಾಕ್ ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಯುದ್ಧಕ್ಕೂ ಸಿದ್ಧವೆಂಬುದನ್ನು ಇತ್ತೀಚೆಗೆ ಸಾಬೀತುಪಡಿಸಿದ್ದಾರೆ. ಯುದ್ಧ ವಿಮಾನಗಳು, ಕ್ಷಿಪಣಿಗಳನ್ನು ನಾವೇ ತಯಾರು ಮಾಡುವಷ್ಟು ನಾವಿಂದು ಬೆಳೆದಿದ್ದೇವೆ. ಇಲ್ಲಿಯತನಕ ಬೇರೆಯವರ ಕಡೆಗೆ ಅವಲಂಬಿತರಾಗಿದ್ದೇವು. ಪ್ರಧಾನಿಯವರ ದೂರದೃಷ್ಟಿಯಿಂದಾಗಿ ಭಾರತವು ಜಾಗತೀಕವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ. ಇದಕ್ಕೆಲ್ಲ ಮೋದಿಯವರು ಹಾಕಿಕೊಟ್ಟ ಜನಪ್ರಿಯ ಯೋಜನೆಗಳೇ ಕಾರಣವೆಂದು ಅವರು ತಿಳಿಸಿದರು.
ಮುಂಬರುವ ತಾ.ಪಂ.‌ಮತ್ತು ಜಿ.ಪಂ. ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಬಹುಮತ ಪಡೆದು ಅಧಿಕಾರಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಅರಭಾವಿ ಕ್ಷೇತ್ರದ ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಜನ ಕಲ್ಯಾಣ ಕೆಲಸಗಳನ್ನು ಪ್ರತಿ ಮನೆ- ಮನೆಗೆ ತಲುಪಿಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾವೆಲ್ಲರೂ ಶಕ್ತಿ ಮೀರಿ ಶ್ರಮಿಸಬೇಕಿದೆ ಎಂದು ಪಾಟೀಲ ತಿಳಿಸಿದರು.
ಅಧ್ಯಕ್ಷತೆಯನ್ನು ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು.
ವೇದಿಕೆಯಲ್ಲಿ ಶಾಸಕರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ, ಸಂದೀಪ ದೇಶಪಾಂಡೆ, ಲಕ್ಷ್ಮಣ ತಪಸಿ, ಗೋವಿಂದ ಕೊಪ್ಪದ, ಶಿವಾನಂದ ಹನುಮಸಾಗರ, ಮಹೇಶ ಮೋಹಿತೆ, ಇಂದಿರಾ ಅಂತರಗಟ್ಟಿ, ಬಸವರಾಜ ಕೊಳದೂರ, ಮುತ್ತೆಪ್ಪ ಮನ್ನಾಪೂರ, ಭೀಮಶಿ ಮಾಳ್ಯಾಗೋಳ,ಪರಸಪ್ಪ ಬಬಲಿ, ಮಹಾಂತೇಶ ಕುಡಚಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

About inmudalgi

Check Also

ಬೆಟಗೇರಿ ಗ್ರಾಮದಲ್ಲಿ ಕಟ್ಟಾ ವಾರ ಆಚರಣೆ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮಳೆಗಾಗಿ ಇದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ