ಗೋಕಾಕ : ಸಹಕಾರಿ ಸಂಘಗಳ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDFI) ಗುಜರಾತ್ ನ ಆನಂದ್ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ನೂತನ ಕಟ್ಟಡವನ್ನು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಷಾ ಅವರು ಲೋಕಾರ್ಪಣೆ ಮಾಡಿದರು.
ಗುಜರಾತ್ ರಾಜ್ಯದಲ್ಲಿರುವ ಆನಂದ್ ನಗರದಲ್ಲಿ ನಿನ್ನೆ ಭಾನುವಾರದಂದು ಸುಮಾರು ೩೦ ಕೋಟಿ ರೂಪಾಯಿ ವೆಚ್ಚದ ಎನ್ಸಿಡಿಎಫ್ಐ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿರುವ ಎಲ್ಲ ಸಹಕಾರಿ ಸಂಘಗಳಿಗೆ ಎನ್ಸಿಡಿಎಫ್ಐ ಮುಕುಟದಂತಾಗಿದೆ ಎಂದು ಸಂಸ್ಥೆಯ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಸಹಕಾರಿ ವಲಯದಲ್ಲಿ ಮಿಂಚಿನಂತೆ ಕೆಲಸ ಮಾಡುತ್ತಿರುವ ಎನ್ಸಿಡಿಎಫ್ಐ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ. ಈಗಾಗಲೇ ವಾರ್ಷಿಕವಾಗಿ ಸುಮಾರು ೭ ಸಾವಿರ ಕೋಟಿ ರೂಪಾಯಿಗಳ ವಹೀವಾಟು ನಡೆಸುತ್ತಿರುವ ಈ ಸಂಸ್ಥೆಯು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದೆ. ಇದೊಂದು ಸಹಕಾರಿ ವಲಯದಲ್ಲೇ ಅತೀ ದೊಡ್ಡ ಸಂಸ್ಥೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಉತ್ತರೋತ್ತರ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲ ನೆರವು ನೀಡಲು ಸಿದ್ಧವಿರುವುದಾಗಿ ಅವರು ತಿಳಿಸಿದರು.
ದೇಶದಲ್ಲಿರುವ ಹಾಲು ಉತ್ಪಾದಕರ ಒಡೆತನದ ಮತ್ತು ನಿಯಂತ್ರಣದ ಸಂಸ್ಥೆಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಈ ಸಂಸ್ಥೆಯು ರೈತ ಸಹಕಾರಿ ಸಂಸ್ಥೆಗಳನ್ನು ಬಲಪಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಸಹಕಾರಿ ತತ್ವಗಳನ್ನು ಬೆಳೆಸುವಲ್ಲಿಯೂ ಎನ್ಸಿಡಿಎಫ್ಐ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಅವರು ಸಂಸ್ಥೆಯ ಗುಣಗಾನ ಮಾಡಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಅಮಿತ್ ಷಾ ಅವರು ನೂತನ ಕಟ್ಟಡದ ಸವಿ ನೆನಪಿಗಾಗಿ ಸಸಿಗೆ ನೀರುಣಿಸುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಚೇರಮನ್ ಡಾ. ಮೀನೇಶ್ ಷಾ, ಆಡಳಿತ ಮಂಡಳಿಯ ನಿರ್ದೇಶಕರಾದ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಂಗಲ್ ಜೀತ್ ರಾಯ್, ಶಾಮಲ್ ಭಾಯಿ ಪಟೇಲ್, ವೆಂಕಟರಾವ್ ನಾಡಗೌಡ, ಕೆ.ಎಸ್.ಮಣಿ, ನರೀಂದಿರಸಿಂಗ್ ಶೇರ್ಗಿಲ್, ಎಸ್.ರಘುರಾಮ್, ಸಮೀರಕುಮಾರ ಫರೀದಾ, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಸಜ್ಜಾ ಸೇರಿದಂತೆ ಸಹಕಾರಿ ವಲಯದ ಅನೇಕ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*ಫೋಟೋ ಕ್ಯಾಪ್ಶನ್- ೭ ಜಿಕೆಕೆ ೧*& ೨
*ಗೋಕಾಕ್-* : ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ಭಾನುವಾರದಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ೩೦ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಎನ್ಸಿಡಿಎಫ್ಐ ಕಟ್ಟಡವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಎನ್ಸಿಡಿಎಫ್ಐ ಚೇರಮನ್ ಡಾ. ಮೀನೇಶ್ ಭಾಯಿ ಷಾ, ಆಡಳಿತ ಮಂಡಳಿಯ ನಿರ್ದೇಶಕರಾದ ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ, ಮಂಗಲ್ ಜೀತ್ ರಾಯ್, ಶ್ಯಾಮಲ್ಭಾಯ್ ಪಟೇಲ್, ಎಂಡಿ ಶ್ರೀ ನಿವಾಸ ಸಜ್ಜಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.