Breaking News
Home / ಬೆಳಗಾವಿ / ದೇಶವೇ ಮೆಚ್ಚುವ ರೀತಿಯಲ್ಲಿ ನೂರಾರು ಅಭಿವೃದ್ಧಿ ಪರ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ನಮ್ಮ ಭಾರತದ ಚಿತ್ರಣವನ್ನೇ ಬದಲಾಯಿಸಿ ಹೊಸ ಭಾಷ್ಯ ಬರೆದಿದ್ದರು – ಬೆಳಗಾವಿ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ

ದೇಶವೇ ಮೆಚ್ಚುವ ರೀತಿಯಲ್ಲಿ ನೂರಾರು ಅಭಿವೃದ್ಧಿ ಪರ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ನಮ್ಮ ಭಾರತದ ಚಿತ್ರಣವನ್ನೇ ಬದಲಾಯಿಸಿ ಹೊಸ ಭಾಷ್ಯ ಬರೆದಿದ್ದರು – ಬೆಳಗಾವಿ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ

Spread the love

ಗೋಕಾಕ್- ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಇಡೀ ದೇಶವೇ ಮೆಚ್ಚುವ ರೀತಿಯಲ್ಲಿ ನೂರಾರು ಅಭಿವೃದ್ಧಿ ಪರ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ನಮ್ಮ ಭಾರತದ ಚಿತ್ರಣವನ್ನೇ ಬದಲಾಯಿಸಿ ಹೊಸ ಭಾಷ್ಯ ಬರೆದಿದ್ದರು ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ (ಮೆಳವಂಕಿ) ಹೇಳಿದರು.
ಗುರುವಾರ, ಇಲ್ಲಿಯ ಎನ್ಎಸ್ಎಫ್ ಕಚೇರಿಯಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಸುಶಾಸನ ದಿನದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾಜಪೇಯಿ ಅವರು ಭಾರತಕ್ಕೆ ಸಿಕ್ಕ ದೊಡ್ಡ ನಕ್ಷತ್ರ ಎಂದು ಶ್ಲಾಘಿಸಿದರು.
ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಮಾತನಾಡಿ, ಭಾರತ ರತ್ನ‌ ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತಶತ್ರು ಆಗಿದ್ದರು. ಎಲ್ಲರೊಂದಿಗೆ ಬೆರೆಯುವ ಮನಸ್ಸು ಅವರದ್ದಾಗಿತ್ತು. ಜನರು ಮೆಚ್ಚುವ ಆಡಳಿತವನ್ನು ನೀಡಿದ್ದರು. ರಾಜಕೀಯದ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಅಪಾರವಾದ ಸೇವೆಯನ್ನು ಸಲ್ಲಿಸಿದ್ದರು. ಅವರ ಗೌರವಾರ್ಥವಾಗಿ ಪಕ್ಷವು ಡಿ. 25 ರಂದು ಸುಶಾಸನ ದಿನವನ್ನಾಗಿ ಆಚರಿಸುತ್ತಿದೆ. ಈ ಮೂಲಕ ಸಮಾಜಮುಖಿ ಕೆಲಸಗಳನ್ನು ಈ ದಿನದಂದು ನಾವೆಲ್ಲರೂ ಮಾಡಿಕೊಂಡು ಬರುತ್ತಿದ್ದೇವೆ. ವಾಜಪೇಯಿ ಅವರ ಆದರ್ಶಗಳು ಇಂದಿನ ಯುವಕರು ಮೈಗೂಡಿಸಿಕೊಳ್ಳಲು ತಿಳಿಸಿದರು.
ಶಾಸಕರ ಆಪ್ತ ಸಹಾಯಕರಾದ ಲಕ್ಕಪ್ಪ ಲೋಕುರಿ, ನಿಂಗಪ್ಪ ಕುರಬೇಟ, ಪಿಕಾರ್ಡ ಬ್ಯಾಂಕ್ ನಿರ್ದೇಶಕ ಸಿದ್ದಪ್ಪ ಹಂಜಿ, ಮಹಾದೇವ ಪತ್ತಾರ, ಜಗದೀಶ ಡೊಳ್ಳಿ, ರಾಯಪ್ಪ ಚಿಗಡೊಳ್ಳಿ, ಮುತ್ತೆಪ್ಪ ಮನ್ನಾಪೂರ, ಪಾಂಡು ಮಹೇಂದ್ರಕರ, ಪ್ರಮೋದ ನುಗ್ಗಾನಟ್ಟಿ, ನಾಗರಾಜ ಕುದರಿ, ಸಿದ್ದು ದುರದುಂಡಿ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

*ಶೇಖರಗೋಳ ಭಾವಚಿತ್ರಕ್ಕೆ ಪೂಜೆ*
ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ದಿ.‌ನಾಗಪ್ಪ ಶೇಖರಗೋಳ ಅವರ ಪುಣ್ಯ ಸ್ಮರಣೆ ಅಂಗವಾಗಿ ದಿವಂಗತರ ಭಾವಚಿತ್ರಕ್ಕೆ ಗಣ್ಯರು ಪೂಜೆ ಸಲ್ಲಿಸಿದರು.


ಸುಶಾಸನ ದಿನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಎನ್ಎಸ್ಎಫ್ ಆವರಣದಲ್ಲಿ ಸಸಿ ನೆಡುವ
ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.


Spread the love

About inmudalgi

Check Also

ಕೃಷಿಕ ಸಮಾಜ ಹಾಗೂ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ಇವರ ಸಹಯೋಗದಲ್ಲಿ ಕಿಸಾನ ಗೋಷ್ಠಿ ಕಾರ್ಯಕ್ರಮ

Spread the loveಮೂಡಲಗಿ :ರೈತ ದಿನಾಚರಣೆಯ ಅಂಗವಾಗಿ ಗೋಕಾಕ ಕೃಷಿ ಇಲಾಖೆಯ ವತಿಯಿಂದ ಆತ್ಮ (ATMA) ಯೋಜನೆ, ಗೋಕಾಕ್/ಮೂಡಲಗಿ ತಾಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ