ಗೋಕಾಕ : ಯುವ ಸಂಘಟನೆಯ ಕಾರ್ಯಕ್ರಮಗಳು ಹಾಗೂ ಯುವ ಚಟುವಟಿಕೆಗಳನ್ನು ಚುರುಕುಗೋಳಿಸಲು ಯುವಕರು ಒಗ್ಗಟಾಗಿ ಕಾರ್ಯ ನಿರ್ವಹಿಸಬೆಕೆಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜಾಧ್ಯಕ್ಷ ಡಾ. ಎಸ್ ಬಾಲಾಜಿ ಹೇಳಿದರು. ಗೋಕಾಕ ಅಮ್ಮಾಜಿ ಭರತನಾಟ್ಯ ತರಬೇತಿ
ಕಾರ್ಯಾಲಯದಲ್ಲಿ ಗೋಕಾಕ ತಾಲೂಕ ಒಕ್ಕೂಟದ ಪ್ರಥಮ ಸಭೆ ತುಳಸಿ ಗೀಡಕ್ಕೆ ನೀರು ಹನಿಸುವ ಮೂಲಕ ಉದ್ಘಾಟಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಾ ಸರ್ಕಾರ ಯುವಕರಿಗೆ ಇರುವಂತ ನಮ್ಮೂರ ಶಾಲೆ ನಮ್ಮೂರ ಯುವಜನರು ಯೋಜನೆಯ ಹಾಗೂ ವಿವಿದ ಯೋಜನೆಗಳನ್ನು ಪುಣ ಪ್ರಾರಂಭಿಸಲು ಇಲಾಖೆಗಳಿಗೆ ತಿಳಿಸಲಾಗಿದೆ ಸ್ವಾಮಿ ವಿವೇಕಾಂದರು ತತ್ವ ಸಿದ್ದಾಂತಗಳನ್ನು ಯುವಕರು ರೂಡಿಸಿಕೋಳಬೇಕು ಎಂದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ ಮಾತನಾಡಿ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಯುವ ಜನರ ಸಂಘಟನೆಯನ್ನು ಉತ್ತಮವಾಗಿ ಮಾಡುತ್ತಿದ್ದೆವೆ. ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಾ ತಾಲೂಕಗಳಲ್ಲಿ ಯುವ ಸಂಘಗಳನ್ನು ಮಾಡಿ ಯುವ ಸಮಾವೇಶವನ್ನು ಮಾಡಲಾಗುವದು. ಗ್ರಾಮಿಣ ಕ್ರೀಡೆಗಳು ಜಾನಪದ ಕಲೆ ಯುವಜನ ಮೇಳ ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಬಳಗದ ಅಧ್ಯಕ್ಷ ಮಹಾಂತೆಶ ತಾಂವಸಿ ಮಾತನಾಡಿ ಯವ ಜನರು ಒಂದಾಗಿ ಕಾರ್ಯಕ್ರಮಳನ್ನು ಮಾಡಬೆಕು ಎಂದು ಹೇಳಿದರು. ಗೋಕಾಕ ತಾಲೂಕ ಘಟಕದ ಅಧ್ಯಕ್ಷ ವಿಠ್ಠಲ ಕರೋಶಿ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಜಯಾ ಚುನಮರಿ ಸಂಗಿತಾ ಬನ್ನುರ ಬಾಲಚಂದ್ರ ಬನವಿ ಅನೀಲ ತುರಾಯಿದಾರ ಯಲ್ಲೇಶಕುಮಾರ ಮೇಳವಂಕ್ಕಿ ಪೂಜಾ ಕಾಂಬಳೆ ಲಕ್ಷ್ಮೀಬಾಯಿ ಮಾದರ ಸೋಮನಾಥ ಹೊಸಟ್ಟಿ ವಿಠ್ಠಲ ಬಾಪುಕುರಿ ಎಲ್ಲಾ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು. ಅಕ್ಕಮಹಾದೇವಿ ಮಾದರ ಸ್ವಾಗತಿಸಿದರು. ಶೈಲಾ ಕೋಕ್ಕರೆ ನಿರೂಸಿಪಿಸಿ ವಂದಿಸಿದರು.